LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Header Demos
1. Classic Default 2. Pro Centered 3. Modern Inline 4. Corporate Newsroom 5. App Glass Style 6. The Classic Press 7. Dark Mode Matrix 8. The Broadcast Edge 9. Glass Overlay 10. The Mega Portal

ಬಿಜೆಪಿ, ಪ್ರಧಾನಿ ಮೋದಿ ವಿರುದ್ಧ ಖಡಕ್ ವಾಗ್ದಾಳಿ ನಡೆಸಿದ ಸಿಎಂ ಸಿದ್ದರಾಮಯ್ಯ..

K2kannadanews.in


Political News ರಾಯಚೂರು : ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ಹಿಂದೆಯೂ ನಡೆದುಕೊಂಡಿದೆ, ಇಂದೂ ನಡೆದುಕೊಂಡಿದೆ ಎಂದು ಸಿಎಂ ಹೇಳಿದ್ರೆ ಈ ಮಧ್ಯ ಸಂಭ್ರಮದಿಂದ ರಾಯಚೂರಿನಲ್ಲಿ ಆಯೋಜಿಸಿದ್ದ ಬುಡಕಟ್ಟು ಉತ್ಸವ ಅದ್ದೂರಿಯಾಗಿ ಜರುಗಿತು.


https://youtu.be/QE6mYlPRi7E?si=-saqJDs-WRQnHckX

ಕಾರ್ಯಕ್ರಮದಲ್ಲಿ ಮಾತನಾಡಿದ ಸಿ ಎಂ ಸಿದ್ದರಾಮಯ್ಯ ಅವರು ಸರಕಾರ ಮಾಡಿರುವ ಕಾರ್ಯ ಹೆಳುತ್ತಾ, ಬಿಜೆಪಿ ಮನೆದೇವ್ರೇ ಸುಳ್ಳು ಅಂತ ಅಸಮಧಾನ ವ್ಯಕ್ತಪಡಿಸಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 7 ಕ್ಕೆ 7 ವಿಧಾನಸಭಾ ಕ್ಷೇತ್ರ ಗೆಲ್ಲಿಸಿ ಕೊಡಬೇಕು, 5 ಕ್ಕೆ 5 ಲೋಕಸಭಾ ಕ್ಷೇತ್ರ ಗೆಲ್ಲಿಸಿಕೊಟ್ಟಿದ್ದಿರಿ, ಗ್ಯಾರೆಂಟಿ ಯೋಜನೆಯನ್ನ ಜಾರಿ ಮಾಡಿ ಸಿದ್ದರಾಮಯ್ಯ ಸರ್ಕಾರದಲ್ಲಿ ದುಡ್ಡಿಲ್ಲ, ಅಭಿವೃದ್ಧಿ ಕಾರ್ಯಕ್ರಮಕ್ಕೆ ದುಡ್ಡಿಲ್ಲಾ ,ಅಭಿವೃದ್ಧಿ ನಡಿತಿಲ್ಲಾ ಅಂತ ಬಿಜೆಪಿಯವರು ಸುಳ್ಳು ಹೇಳ್ತಿದ್ದಾರೆ. ಬಿಜೆಪಿಯವರು ಈಗ ಜೆಡಿಎಸ್ ನವರು ಸೇರಿಕೊಂಡಿದ್ದಾರೆ. ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನ ಅವರು ಮಾಡಲಿಲ್ಲ,‌ನಾವು ಮಾಡುವುದನ್ನ ಸಹಿಸುತ್ತಿಲ್ಲ. ನಾವು ಅಭಿವೃದ್ಧಿ ಮಾಡಿದ್ದೇವೋ ಇಲ್ವೋ ಅನ್ನೋದನ್ನ ನೀವೇ ತೀರ್ಮಾನ ಮಾಡಿ. ಇಡೀ ರಾಜ್ಯದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ನಡಿತಾಯಿದೆ, ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ . ನಾವು ಕೊಟ್ಟ ಭರವಸೆಗಳನ್ನ ಈಡೇರಿಸಿದ್ದೇವೆ, ಉಳಿದ ಭರವಸೆಗಳನ್ನ ಮೂರು ವರ್ಷದಲ್ಲಿ ಈಡೇಸುತ್ತೇವೆ. ಬಿಜೆಪಿಯವರಿಗೆ 10% ಭರವಸೆಗಳನ್ನ ಈಡೇರಿಸಲು ಆಗಲಿಲ್ಲ. ಗ್ಯಾರೆಂಟಿ ಯೋಜನೆಗಳಿಗೆ ಇನ್ನೂ 50 ಸಾವಿರ ಕೋಟಿ ಇಟ್ಟಿದ್ದೇವೆ. ಎರಡು ವರ್ಷದಲ್ಲಿ 90 ಸಾವಿರ ಕೋಟಿ ಗ್ಯಾರೆಂಟಿಗಳಿಗೆ ಖರ್ಚಾಗಿದೆ‌ ಎಂದು, ದೇಶದಲ್ಲಿ ಬೆಲೆ ಏರಿಕೆಗೆ ನರೇಂದ್ರ ಮೋದಿಯವರು ಕಾರಣ, ಚಿನ್ನದ ಬೆಲೆ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ, ಚಿನ್ನದ ಬೆಲೆ ಹೆಚ್ಚಾಗಲು ನಾನು ಕಾರಣಾನಾ, ಬಿಜೆಪಿಯವರೇ ಜೆಡಿಎಸ್ ನವರೆ ನಾನು ಕಾರಣಾನಾ. ಚಿನ್ನ, ಬೆಳ್ಳಿ, ಗ್ಯಾಸ್, ಡಿಸೆಲ್ ಬೆಲೆ ಹೆಚ್ಚಾಗಿದೆ. ಬಿಜೆಪಿ ಜೆಡಿಎಸ್ ನವರಿಗೆ ಮಾನ ಮರ್ಯಾದೆ ಏನಾದ್ರು ಇದೆಯಾ. ಬಿ ವೈ ವಿಜಯೇಂದ್ರ ವಿರುದ್ದ ಸಿಎಂ ಕಿಡಿಕಾರುತ್ತಾ, ವಿಜಯೇಂದ್ರ ಪಾಪ ನಿನಗೆ ಇನ್ನೂ ರಾಜಕೀಯದಲ್ಲಿ ಅನುಭವ ಆಗಬೇಕಿದೆ. ಬಾಯಿಗೆ ಬಂದ ಹಾಗೆ ಮಾತನಾಡಬಾರದು, ನಿಮ್ಮ ಬೆಲೆ ಕಡಿಮೆಯಾಗುತ್ತೆ ತಿಳಿದುಕೊಳ್ಳಬೇಕು ಎಂದರು.  14 ನೇ ಹಣಕಾಸಿನ ಆಯೋಗದಲ್ಲಿ ರಾಜ್ಯಕ್ಕೆ 80 ಸಾವಿರ ಕೋಟಿ ಅನ್ಯಾಯವಾಯ್ತು, 15 ನೇ‌ ಹಣಕಾಸಿನ ಆಯೊಗದಲ್ಲಿ 11,495 ಕೋಟಿ ರಾಜ್ಯಕ್ಕೆ ಅನ್ಯಾಯವಾಗಿದೆ. ವಿಶೇಷ ಗ್ರ್ಯಾಂಟ್ ಕೊಡಿ ಅಂದ್ರೆ ಕೊಡಲಿಲ್ಲ, ಒಬ್ಬ ಬಿಜೆಪಿ ಸಂಸದನೂ ಮಾತನಾಡಲಿಲ್ಲ. ಬಿಜೆಪಿಯವರು ರಾಜ್ಯಕ್ಕೆ ಮಾಡಿರುವ ಅನ್ಯಾಯ ಇದು ಎಂದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST