LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕೆಂಪು, ಹಳದಿ, ಹಸಿರು ಸಿನೆಮಾದಲ್ಲಿ ಕಾಮಿಡಿ ಥ್ರಿಲರ್ ಲೇಪನ

 ಕೆಂಪು ಹಳದಿ ಹಸಿರು ಚಿತ್ರದ ಹೆಸರು ಒಮ್ಮೆ ಕೇಳಿದರೆ ಊಹೆಗೂ ನಿಲುಕದ ಹಲವು ಆಲೋಚನೆಗಳು ಸಹಜವಾಗಿಯೇ ಬರುತ್ತವೆ. ಆದರೆ ಸಿನೆಮಾ ಒಳಹೊಕ್ಕು ನೋಡಿದಾಗ ಅದರ ಚಿತ್ರಣವೆ ಬೇರೆ ಇದೆ. ಅಂದರೆ ಕೆಂಪು ಹಳದಿ ಹಸಿರು ಎಂದಾಕ್ಷಣ ಸ್ವಾಭಾವಿಕವಾಗಿಯೇ ಜನರಿಗೆ ಥಟ್ ಅಂತ ಮನಸ್ಸಿಗೆ ಬರೋದು ಟ್ರಾಫಿಕ್ ಸಿಗ್ನಲ್ ನಲ್ಲಿರುವ ಬಣ್ಣದ ಕಥೆ ಎನ್ನಿಸುತ್ತದೆ.


ಥೆಯೇಟರ್ ನಲ್ಲಿ ಕುಳಿತು ಗಂಭೀರವಾಗಿ ಸಿನೆಮಾ ನೋಡಿದಾಗ ಅದರಲ್ಲಿನ ಥ್ರಿಲರ್ ಕಥೆಗೆ ಕಾಮಿಡಿ ಲೇಪನ ಮಾಡಿರುವುದು ಕಣ್ಣಿಗೆ ರಾಚುವಂತೆ ಕಾಣಸಿಗುತ್ತದೆ. ಅಲ್ಲಿಂದ ಕಾಮಿಡಿ ಮೂಲಕ ಅರವಿಂದ್ ಬೋಳಾರ್ ಪ್ರಾರಂಭ ಇಡೀ ಚಿತ್ರ ನಗೆಗಡಲಿನಲ್ಲಿಯೇ ತೇಲಿಸುಕೊಂಡು ಹೋಗುತ್ತದೆ. ಬಹುತೇಕವಾಗಿ ಸೇರಿದ್ದವರು ನಕ್ಕಿ ನಕ್ಕಿ ಸುಸ್ತಾಗುವುದಂತು ಪಕ್ಕಾ.


ಇನ್ನು ಸಿನೆಮಾ ಸೆಕೆಂಡ್ ಆಫ್ ನಿಂದ ಸೆಸ್ಪೆನ್ಸ್ ಸಹಾ ಗೋಚರವಾಗುತ್ತದೆ. ಸಿನೆಮಾ ನೋಡಿದಾಗ ಲೀಲಾಜಾಲವಾಗಿ ಪ್ರಾರಂಭದಿಂದ ಕೊನೆವರೆಗೂ ಮುಕ್ತಾಯವಾಗುತ್ತದೆ. ಚಿತ್ರದಲ್ಲಿ ಇಬ್ಬರು ನಾಯಕಿಯರು ಮುದ್ದಾಗಿ ಕಾಣಿಸಿಕೊಂಡು ಅಭಿನಯಿಸಿದ್ದಾರೆ. ನಾಯಕ ನಟ ಶ್ರೀ ಹನ್ ಕನ್ನಡದಲ್ಲಿ ಮೊದಲ ಚಿತ್ರವಾದರೂ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಬಿಗ್ ಬಾಸ್ ಸ್ಪರ್ಧಿಯಾಗಿದ್ದ  ದಿವ್ಯಾ ಸುರೇಶ್ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದಾರೆ. ಇನ್ನು ತುಳುನಾಡಿನ ರಂಗಭೂಮಿ ಕಲಾವಿದ ಹಾಗೂ ಖ್ಯಾತ ಹಾಸ್ಯ ನಟ ಅರವಿಂದ್ ಬೋಳಾರ್ ನಾಯಕನ ಸ್ನೇಹಿತನಾಗಿ ನಟನೆ ಮೂಲಕ ಕಾಮಿಡಿ ಝಲಕ್ ಮಾಡಿ ಸಿನೆಮಾ ಪ್ರಿಯರನ್ನು ನಗೆಗಡಲಿನಲ್ಲಿ ತೇಲಿಸಿದ್ದಾರೆ.


ಚಿತ್ರದ ನಾಯಕ ಶ್ರಿ ಹನ್ (ಅರ್ಜುನ್ ) ಬ್ಯಸಿನೆಸ್ ಮ್ಯಾನ್ ಮಗ ಒಬ್ಬ ಡಿಲೆವರಿ  ಬಾಯ್ ಆಗಿ ಏನೆಲ್ಲ ಕಷ್ಟಗಳು ಅನುಭವಿಸುತ್ತಾನೆ? ಕೆಂಪು, ಹಳದಿ, ಹಸಿರು ಸಿನೆಮಾದಲ್ಲಿ  ಮೂರು ಪಾತ್ರಗಳು ಇಡೀ ಸಿನಿಮಾ ತುಂಭಾನೆ ಆವರಿಸಿಕೊಂಡಿದೆ. ಅರ್ಜುನ್ ಶ್ರೀಮಂತ ಉದ್ಯಮಿಯ ಮಗನಾಗಿದ್ದರೂ, ಎಲ್ಲವನ್ನು ತೊರೆದು ಡಿಲಿವರಿ ಬಾಯ್ ಆಗಿ ಕೆಲಸ ಮಾಡಲು ಕಾರಣ ಏನು? ಸಾಕ್ಷಿ ಕುಡಿತದ ಚಟ ಇದ್ದರೂ ದೈವಭಕ್ತೆ. ಒಂದು ಹಂತದಲ್ಲಿ ಇಬ್ಬರಲ್ಲೂ ಪ್ರೀತಿ ಚಿಗುರುತ್ತದೆ. ಇದಕ್ಕೂ ಮುನ್ನ ಧನ್ಯಳೊಂದಿಗೆ ಲವ್ ಆಗಿ ತಪ್ಪಿ ಹೋಗಲು ಕಾರಣ ಏನು? ಇತ್ತ ಅರ್ಜುನ್ ಸನ್ನಿವೇಶಗಳನ್ನು ಹುಡುಕಲು ಹೋದಾಗ ತನಗೆ ತಿಳಿಯದಂತೆ ಪ್ರಶ್ನೆಗಳು ಹುಟ್ಟುತ್ತಾ ಹೋಗುತ್ತದೆ. ಇದಕ್ಕೆ ಉತ್ತರ ಹುಡುಕಲು ಮುಂದಾದಾಗ ಒಂದಷ್ಟು ಘಟನೆಗಳು ನಡೆಯುತ್ತದೆ.  ಅರ್ಜುನ್-ಸಾಕ್ಷಿ ಸಂಬಂದ ಏನಾಯಿತು? ಕೊನೆಗೆ ಆತ ಮನೆಗೆ ವಾಪಸ್ಸು ಬರುತ್ತಾನ? ಎಲ್ಲದನ್ನು ನಾವು ಹೇಳುವುದಕ್ಕಿಂತ ಒಮ್ಮೆ ಚಿತ್ರ ನೋಡಿದಾಗ ವಿಶಿಷ್ಟ ಅನುಭವ ಆಗುತ್ತದೆ.


ಚಿತ್ರದ ವೇಗ ಕಡಿಮೆ ಆಯ್ತು ಅಂದುಕೊಳ್ಳುವ ಹೊತ್ತಿಗೆ ಕೆಲವೊಂದು ಕುತೂಹಲ ದೃಶ್ಯಗಳು ಬಂದು ಅದೆಲ್ಲಾವನ್ನು ಮರೆಸುವಂತೆ ಮಾಡುವಲ್ಲಿ ಹಾಗೂ ಪ್ರೇಕ್ಷಕನ ನಿರೀಕ್ಷೆಗಳಿಗೆ ನ್ಯಾಯ ಒದಗಿಸುವಲ್ಲಿ ನಿರ್ದೇಶಕ ಮಣಿ.ಎಜೆ.ಕಾರ್ತಿಕೇಯನ್ ಒಳ್ಳೆಯ ಚಿತ್ರಕಥೆ ಸಪಲವಾಗಿದೆ. ಗ್ರಾಸರಿ ವಸ್ತುಗಳನ್ನು ಡಿಲೆವರಿ ಮಾಡುವ ಸನ್ನಿವೇಶಗಳ ಮೂಲಕ ಹೆಲ್ಮೆಟ್ ಹಾಕುವುದು ಸುರಕ್ಷಿತವೆಂದು ಪಾತ್ರಗಳ ಮೂಲಕ ಹೇಳಿಸಿದ್ದಾರೆ.


ಚಿತ್ರದಲ್ಲಿ ಹಾಡುಗಳು ಅಷ್ಟಾಗಿ ಪ್ರೇಕ್ಷಕರ ಮನಗೆಲ್ಲದಿದ್ದರೂ ಓಕೆ. ಇಡೀ ಚಿತ್ರ ಮಂಗಳೂರು,ಉಡುಪಿ, ಭಾಗದಲ್ಲಿ ಚಿತ್ರೀಕರಣವಾದರೂ ತುಳು ಭಾಷೆ ಶೈಲಿ ಕಡಿಮೆ, ಅಪ್ಪಟ ಕನ್ನಡವಾಗಿದೆ. ಕಾಮಿಡಿ,ಥ್ರಿಲ್ಲರ್ ಮೂಲಕ ಸಮಾನ ಅವಕಾಶ ನೀಡಿ ಮನೋರಂಜನೆ ನೀಡಿದ್ದಾರೆ.


ಒಟ್ಟಾರೆ ಕೆಂಪು, ಹಳದಿ, ಹಸಿರು ಸಿನೆಮಾ ನೋಡಲು ಬೇಜಾರು ಆಗಲ್ಲ Not Good Not Bad, Its Ok ಅನ್ನಿಸುತ್ತದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆಉಡಾನ್' ಯೋಜನೆ ಮೂಲಕ ಭಾರತದ ಭವಿಷ್ಯದ ವೈದ್ಯಕೀಯ ಕಾರ್ಯಪಡೆಯನ್ನು ನಿರ್ಮಿಸುವ ಬದ್ಧತೆಯನ್ನು ಸಾರಿದ ನಾರಾಯಣ ಹೆಲ್ತ್ಮೆಟ್ರೋ ಟಿಕೆಟ್ ದರ: ಕೇಂದ್ರದತ್ತ ಬೊಟ್ಟು ಮಾಡಿದ ರಾಜ್ಯ ಸರ್ಕಾರಕ್ಕೆ ದಾಖಲೆ ಸಮೇತ ಟಾಂಗ್ ಕೊಟ್ಟ ನಿಖಿಲ್ಬಿಜೆಪಿ ಜಾಹೀರಾತಿನ ವಿರುದ್ಧ ಎಎಪಿ ದೂರುಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ, 20 ವರ್ಷ ಕಳೆದರೂ ರೈತರಿಗೆ ಸಿಗತ ಪರಿಹಾರಕಾಂಗ್ರೆಸ್ ಪಕ್ಷ ಪಾರ್ಕಿಂಗ್ ವಿಚಾರದಲ್ಲಿ ಅಂದಾ ದರ್ಬಾರ್ ಮಾಡಲು ಹೊರಟಿದೆ