K2kannadanews.in
Crime News ರಾಯಚೂರು : ರಸ್ತೆ ಅಪಘಾತದಲ್ಲಿ (road accident) ರಾಯಚೂರು ಮೂಲದ ವಿದ್ಯಾರ್ಥಿಯೊಬ್ಬ (student) ಸ್ಥಳದಲ್ಲೆ ಮೃತಪಟ್ಟ (sopth death) ಘಟನೆ ಮಂಡ್ಯ (mandya) ಜಿಲ್ಲೆಯ ಕಾಳೇನಹಳ್ಳಿ ಗ್ರಾಮದ ಬಳಿ ನಡೆದಿದೆ. ವಿದ್ಯಾರ್ಥಿ ಪಾಲಕರಿಗೆ ಮಾಹಿತಿ ತಿಳಿಸಿ ಎಂದು ಆಡಿಯೋ ವೈರಲ್ (viral) ಆಗಿದೆ.
https://youtu.be/CsJiXo4VXLM?si=38rW7lHMiqxZ81CP
ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿಯ ಫೋಟೋ (photo), ಆಧಾರ್ ಕಾರ್ಡ್ (adhar card), ಕಾಲೇಜು ಐಡಿ ಕಾರ್ಡ್ (college ID card), ಒಂದು ಆಡಿಯೋ (audio) ವೈರಲ್ ಆಗಿದ್ದು, ಆಡಿಯೋದಲ್ಲಿ ಈ ವಿದ್ಯಾರ್ಥಿ ರಾಯಚೂರು (raichur) ಜಿಲ್ಲೆಯ ಸಿಂಧನೂರು (Sindhanur) ತಾಲೂಕಿನ ದಡೆಸುಗೂರು ಗ್ರಾಮದವ ಎಂದು ಹೇಳಲಾಗಿದೆ. ಇನ್ನು ಆಧಾರ್ ಕಾರ್ಡ ನಲ್ಲಿ ದಡೇಸುಗೂರು ಗ್ರಾಮದ ವಿಳಾಸವಿದೆ.
ಮಂಡ್ಯ ಜಿಲ್ಲೆಯ ಕಾಳೆನ ಹಳ್ಳಿ ಬಳಿ ಅಪಘಾತ ಜರುಗಿದ್ದು, ವಿದ್ಯಾರ್ಥಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ದುರ್ಗೇಶ್ ಎಚ್ (19) ಮೃತಪಟ್ಟ ದುರ್ದೈವಿ ಎಂದು ತಿಳಿದು ಬಂದಿದೆ. ಮೈಸೂರಿನ ಜೆಎಸ್ಎಸ್ ಪದವಿ ಕಾಲೇಜಿನಲ್ಲಿ ಅನಿಮೇಷನ್ ಕೋರ್ಸ್ ಮಾಡುತ್ತಿದ್ದ. ಮೃತಪಟ್ಟ ವಿಷಯ ಮನೆಯವರಿಗೆ ತಿಳಿಸಿ ಎಂದು ಆಡಿಯೋ ವೈರಲ್ ಆಗಿದೆ.
https://youtu.be/28j-syErIVY?si=sH2F2cI0jG77BqkI