ವಿಧಾನಸಭಾ ಕ್ಷೇತ್ರದ ಬಿಜೆಪಿ ಸದಸ್ಯತ್ವ ಅಭಿಯಾನ.! ದತ್ತಾತ್ರೇಯ
ಚಿತ್ರದುರ್ಗ : ಬಿಜೆಪಿ ಸದಸ್ಯತ್ವ ಅಭಿಯಾನದ ಉಸ್ತುವಾರಿಗಳಾದ ದತ್ತಾತ್ರೇಯರವರು ಭಾಗವಹಿಸಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಬೂತುಗಳಲ್ಲಿ ಸಹಾ ಕನಿಷ್ಠ ಮೂರು ಜನ ಸಕ್ರಿಯ ಸದಸ್ಯರಾಗಬೇಕಿದೆ ಇದಕ್ಕೆ ಪ್ರತಿಯೊಂದು ಬೂತುಗಳಲ್ಲಿ 50 ಜನರನ್ನು ಪಕ್ಷದ ಸದಸ್ಯರನ್ನಾಗಿ ಮಾಡಬೇಕಿದೆ. ಈಗಾಗಲೇ ಹಲವು ಬೂತ್ಗಳಲ್ಲಿ ಮಾಡಲಾಗಿದೆ ಇನ್ನು ಮಾಡಲಾಗದವರು ನ. 25ರವರೆಗೆ ಕಾಲಾವಕಾಶ ಇದೆ ಈ ಸಮಯದಲ್ಲಿ ಸದಸ್ಯತ್ವವನ್ನು ಮಾಡುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.
ಈ ರೀತಿಯಾಗಿ ಸಕ್ರಿಯ ಸದಸ್ಯರನ್ನಾಗಿ ಮಾಡುವುದರಿಂದ ಮುಂದೆ ಬರುವಂತ ಜಿಲ್ಲಾ ಮತ್ತು ತಾ.ಪಂ.ಗಳ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಾಗಲು ಅವಕಾಶ ಇದೆ, ಇದ್ದಲ್ಲದೆ ಪಕ್ಷದ ಒಳಗಡೆಯೂ ಸಹಾ ವಿವಿಧ ರೀತಿಯ ಹುದ್ದೆಗಳನ್ನು ಪಡೆಯಲು ಸಹಾ ಸಹಕಾರಿಯಾಗಲಿದೆ ಇದರಿಂದ ಸದಸ್ಯತ್ವಕ್ಕೆ ಹೆಚ್ಚಿನ ಮಹತ್ವವನ್ನು ನೀಡಬೇಕಿದೆ ಇದ್ದಲ್ಲದೆ ಪ್ರಪಂಚದಲ್ಲಿಯೇ ನಮ್ಮ ಪಕ್ಷದವತಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವವನ್ನು ಮಾಡುವ ಉದ್ದೇಶ ಪಕ್ಷದ ಮುಖಂಡರು ಹೊಂದಿದ್ದಾರೆ ಇದಕ್ಕೆ ನಾವೆಲ್ಲರು ಸಾಥ್ ನೀಡಬೇಕಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷರಾದ ಎ.ಮುರಳಿ, ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ ಕುಮಾರ್, ಸುರೇಶ್ ಸಿದ್ದಾಪುರ, ನಗರಾಧ್ಯಕ್ಷರಾದ ನವೀನ ಚಾಲುಕ್ಯ, ಗ್ರಾಮಾಂತರ ಘಟಕದ ಅಧ್ಯಕ್ಷರಾದ ಕಲ್ಲೇಶಯ್ಯ, ರಾಜ್ಯ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜನ್, ವಕ್ತಾರ ನಾಗರಾಜ ಬೇದ್ರೇ, ವೀಣಾ, ಅರುಣ್ ಕುಮಾರಿ, ಕವಿತಾ, ಶಾಂತಮ್ಮ, ಸೇರಿದಂತೆ ಇತರರು ಭಾಗವಹಿಸಿದ್ದರು.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.