LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಗೆ ಸೆಸ್ ಹೆಚ್ಚಳ ಕುರಿತು ಪ್ರಾತ್ಯಕ್ಷಿಕೆ ಸಭೆ

ಬೆಂಗಳೂರು: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಗೆ ಸೆಸ್ ಅನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಮಿಕ‌ ಸಚಿವ ಸಂತೋಷ್‌ ಲಾಡ್ ಇಂದು ವಿಕಾಸಸೌಧದ ಸಭಾ ಕೊಠಡಿಯಲ್ಲಿ ಪ್ರಾತ್ಯಕ್ಷಿಕೆ ಸಭೆ ನಡೆಸಿದರು.

ವಿಕಾಸಸೌಧದ ಸಭಾಂಗಣ‌ ಕೊಠಡಿಯಲ್ಲಿ ನಡೆದ ಸಭೆಯಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಗೆ ಪ್ರಸಕ್ತ ಬರುತ್ತಿರುವ ಸೆಸ್ ಕಡಿಮೆಯಾಗಿದ್ದು, ಸೆಸ್ ಅಳವಡಿಕೆಗೆ ಇದೂವರೆಗೂ ಯಾವುದೇ ರೀತಿಯ ಹೊಸ ಮಾರ್ಗಗಳನ್ನು ಅನುಸರಿಸಿಲ್ಲ. ಹೀಗಾಗಿ ಸೆಸ್ ಅಳವಡಿಕೆಗೆ GIS (Geographical Information System) ತಂತ್ರಜ್ಞಾನವನ್ನು ಬಳಸಿ ಸೆಸ್ ಅನ್ನು ಹೆಚ್ಚಿಸಬಹುದೆಂಬ ನಿಟ್ಟಿನಲ್ಲಿ ಕೆಲವು ತಜ್ಞರು ಸಚಿವರಿಗೆ ಈ ಹಿಂದೆ ಸಲಹೆ ನೀಡಿದ್ದರು.

ಅದರನ್ವಯ ಇಂದು ಆರು ವೆಂಡರುಗಳು ವೆಂಡರ್ಸ್ ಸೆಸ್ ಅನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜಿಐಎಸ್ ಅಳವಡಿಸುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಿ ತಮ್ಮ ಅಭಿಪ್ರಾಯ ವಿವರಿಸಿದರು. ಜಿಐಎಸ್ ಬಳಕೆಯಿಂದ ಯಾವ ರೀತಿ ಈ ಮಂಡಳಿಗೆ ಲಾಭದಾಯಕವಾಗಲಿದೆ?

ಜಿಐಎಸ್ ಅಳವಡಿಸುವುದು ಹೇಗೆ? ಜಿಐಎಸ್‌ನಿಂದ ಸೆಸ್ ಹೆಚ್ಚಳ ಹೇಗೆ ಸಾಧ್ಯ?

ಇದು ಕಾರ್ಮಿಕ ಮಂಡಳಿ ಜೊತೆ ಹೇಗೆ ಕೆಲಸ ಮಾಡುತ್ತದೆ? ಸೇರಿದಂತೆ ಇತ್ಯಾದಿಗಳ ಕುರಿತು ಸಚಿವ ಸಂತೋಷ್ ಲಾಡ್ ಸಭೆಯಲ್ಲಿ ಮಾಹಿತಿ ಪಡೆದರು.

ಸಂಬಂಧಪಟ್ಟ ವೆಂಡರುಗಳಿಂದ ಅವರವರ ಅಭಿಪ್ರಾಯ ಮಾಹಿತಿ ವಿವರ ಸಂಗ್ರಹಿಸಿದ ಸಚಿವರು, ಈ ಬಗ್ಗೆ ಕೂಲಂಕುಷವಾಗಿ ಮತ್ತೊಮ್ಮೆ ಪರಿಶೀಲಿಸಿ ಮತ್ತೊಂದು ಮಹತ್ವದ ಸಭೆ ನಡೆಸಿ, ಜಿಐಎಸ್ ಅಳವಡಿಕೆಯ ಸಾಧಕ-ಬಾಧಕಗಳನ್ನು ಪರಾಮರ್ಶಿಸಿ ಸೆಸ್ ಹೆಚ್ಚಳ ಬಗ್ಗೆ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಮಾನ್ಯ ಸಚಿವರು ಸ್ಪಷ್ಟಪಡಿಸಿದರು.

ಪ್ರಾತ್ಯಕ್ಷಿಕ ಸಭೆಯಲ್ಲಿ ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾದ ಮೊಹಮ್ಮದ್ ಮೊಹಿಸಿನ್, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿಯ ಸಿಇಒ ಮತ್ತು ಕಾರ್ಯದರ್ಶಿ ಶ್ರೀಮತಿ ಭಾರತಿ, ಜಂಟಿ ಕಾರ್ಯದರ್ಶಿ ವೆಂಕಟರಾಜು ಮತ್ತು ಕಾರ್ಮಿಕ ಇಲಾಖೆಯ ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾವು ಯಾರ ಪರವಾಗಿ ಇದ್ದೇವೆ ಎನ್ನುವ ಸ್ಪಷ್ಟ ಅರಿವು ಮಾಧ್ಯಮದವರಿಗೆ ಇರಬೇಕು: ಸಿಎಂ ಸಿದ್ದರಾಮಯ್ಯಉತ್ತರಾಖಂಡದ ಹರಿದ್ವಾರದಲ್ಲಿರುವ ಬಿಎಚ್‌ಇಎಲ್ ಕಾರ್ಖಾನೆಗೆ ಭೇಟಿ ನೀಡಿದ ಹೆಚ್.ಡಿ. ಕುಮಾರಸ್ವಾಮಿಗಂಭೀರ ರಕ್ತಹೀನತೆಯಿಂದ ಬಳಲುತ್ತಿದ್ದ ಯುವಕನಿಗೆ ಸ್ಟೆಮ್ ಸೆಲ್ ದಾನ ಮಾಡಿ ಜೀವರಕ್ಷಕಿಯಾದ ಬೆಂಗಳೂರಿನ ಮಹಿಳೆಫೋರ್ಟಿಸ್ ಹೆಲ್ತ್ಕೇರ್ ನಿಂದ 4 ವಿಶೇಷ ಚಿಕಿತ್ಸಾಲಯ ಆರಂಭಬೆಂಗಳೂರಿನಲ್ಲಿ ಕಲಾಮಂದಿರದ 4ನೇ ಶೋರೂಂ ಆರಂಭ96 ರನ್ ಗಳಿಂದ ನ್ಯೂಜಿಲೆಂಡ್ ವಿರುದ್ಧ ಭಾರತ ಟಿ20 ವಿನ್ಫೋನ್ ಕದ್ದಾಲಿಕೆ; ಸಿಎಂ ಸಿದ್ದರಾಮಯ್ಯ ಸುಳ್ಳಿಗೆ ತಿರುಗೇಟು ಕೊಟ್ಟ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿನಗರದ ಐದು ವಿಭಾಗ, ವಿಧಾನಸಭೆ ಕ್ಷೇತ್ರಗಳ ಅಧ್ಯಕ್ಷರ ಸಭೆಯಲ್ಲಿ ಮತನಾಡಿದ ಜಿಬಿಎ ಅಧ್ಯಕ್ಷರುಬೇಸಿಗೆಯಲ್ಲಿ ನೀರಿನ ತೊಂದರೆ ಎದುರಾಗದಂತೆ ಮುಂಜಾಗ್ರತಾ ಕ್ರಮ ವಹಿಸಿ: ಎ ಸಿ ಎಸ್ ತುಷಾರ್ ಗಿರಿನಾಥ್ ಸೂಚನೆಜಲಮಂಡಳಿಯ ಪ್ರೋ-ರೇಟಾ - ಜೈನ್ ಇಂಟರ್‌ನ್ಯಾಷನಲ್ ಶಾಲೆಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್