LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Header Demos
1. Classic Default 2. Pro Centered 3. Modern Inline 4. Corporate Newsroom 5. App Glass Style 6. The Classic Press 7. Dark Mode Matrix 8. The Broadcast Edge 9. Glass Overlay 10. The Mega Portal

ಕುಡಿತದ ಚಟ ಗೃಹಲಕ್ಷ್ಮಿ ಹಣಕ್ಕಾಗಿ ಪತ್ನಿಯನ್ನೇ ಕೊಂದ ಪತಿ..

K2kannadanews.in


Crime News ದಾವಣಗೆರೆ : ಕುಡಿತದ ಚಟಕ್ಕೆ ಬಲಿಯಾಗಿದ್ದ ಪತಿರಾಯ ಗೃಹಲಕ್ಷ್ಮೀ ಯೋಜನೆ ಹಣ ತರಲು ಬ್ಯಾಂಕ್​ಗೆ ಹೋಗಿದ್ದ ಪತ್ನಿಯನ್ನು ಕೊಲೆ ಮಾಡಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿ ತಗಲಕ್ಕೊಂಡ ಘಟನೆ ಉಜ್ಜಪ್ಪರ ಒಡೆರಹಳ್ಳಿ ಗ್ರಾಮದಲ್ಲಿ ನಡೆದಿದೆ.


ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಉಜ್ಜಪ್ಪರವಡೇರ ಹಳ್ಳಿಯಲ್ಲಿ ಈ ಘಟನೆ ನಡಿದಿದ್ದು, ಸತ್ಯಮ್ಮ(40) ಕೊಲೆಯಾದ ಮಹಿಳೆಯಾಗಿದ್ದಾಳೆ. ಪತ್ನಿಯನ್ನೇ ಕೊಲೆ ಮಾಡಿದ ಪಾಪಿ ಪತಿ ಅಣ್ಣಪ್ಪ ಎಂದು ಗುರುತಿಸಲಾಗಿದೆ. ಕುಡಿಯಲು ಗೃಹಲಕ್ಷ್ಮೀ ಹಣ ಬಿಡಿಸಿ ಕೊಡುವಂತೆ ಪತ್ನಿಯನ್ನು ಪೀಡಿಸುತ್ತಿದ್ದ. ಪ್ರತಿ ತಿಂಗಳು ಗೃಹಲಕ್ಷ್ಮೀ ಹಣ ಬರುವುದನ್ನು ಕಾದು ಪೋನ್ ಪೇ, ಗೂಗಲ್ ಪೇ ಮೂಲಕ ತಾನೇ ಹಾಕಿಸಿಕೊಂಡು ಅಣ್ಣಪ್ಪ ಕುಡಿಯುತ್ತಿದ್ದ. ಇದರಿಂದಲೇ ಪ್ರತಿ ತಿಂಗಳು ಜಗಳವಾಗುತ್ತಿತ್ತು.


https://youtu.be/4W6fz1YpJSw?si=PgdO65dtBGa97A3S

ನಿನ್ನೆಯೂ ಗೃಹಲಕ್ಷ್ಮಿ ಹಣವನ್ನು ಬಿಡಿಸಿಕೊಂಡು ಬರಲು ಬ್ಯಾಂಕಿಗೆ ಹೋಗಿದ್ದ ಸತ್ಯಮ್ಮನನ್ನು ಹಿಂಬಾಲಿಸಿದ್ದ ಪಾಪಿ ಪತಿ, ಬ್ಯಾಂಕ್​ನಲ್ಲಿ ಹಣ ಕೊಡು ಎಂದು ಪೀಡಿಸಿದ್ದಾನೆ ಎಂಬ ಮಾಹಿತಿ ದೊರೆತಿದೆ. ಹಣ ಕೊಡಲು ನಿರಾಕರಿಸಿದ್ದಕ್ಕೆ ಬ್ಯಾಂಕ್​ನಲ್ಲಿಯೆ ಹಲ್ಲೆ ಮಾಡಿದ್ದ ಪತಿ. ನಂತರ ಮನೆಯಲ್ಲಿ ತನ್ನ ಪತ್ನಿಯನ್ನು ಕೊಲೆ ಮಾಡಿದ್ದಾನೆ.‌ ಹಣ ಕೊಡದಿದ್ದಕ್ಕೆ ಕೊಲೆ ಮಾಡಿದ್ದ ಪತಿ ಕೊಲೆಯನ್ನು ಮುಚ್ಚಿಹಾಕಲು ಕರೆಂಟ್ ಶಾಕ್ ಹೊಡೆದು ಪತ್ನಿ ಸಾವನಪ್ಪಿದ್ದಾಳೆ ಎಂದು ಕತೆ ಕಟ್ಟಿದ್ದನು ಎಂಬ ಮಾಹಿತಿ ದೊರೆತಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಅಣ್ಣಪ್ಪ ಹಾಗೂ ಆತನ ಕುಟುಂಬಸ್ಥರು ತಲೆಮರಸಿಕೊಂಡಿದ್ದು ಬಿಳಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಆರೋಪಿಗೆ ಬಲೆ ಬೀಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST