Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಒಂದೇ ಮದುವೆ, ಎರಡೇ ಮಕ್ಕಳನ್ನು ಹೆರಬೇಕು ಎಂಬ ಕಾನೂನು ಜಾರಿ

ಬಾಗಲಕೋಟೆ :
ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಕಾನೂನು ಜಾರಿಗೊಳ್ಳುತ್ತದೆ. ಅದರ ಪ್ರಕಾರ ಎಲ್ಲರೂ ಒಂದೇ ಮದುವೆಯಾಗಬೇಕು, ಎರಡೇ ಮಕ್ಕಳನ್ನು ಹೆರಬೇಕು ಎಂಬ ಕಾನೂನು ಜಾರಿಯಾಗುತ್ತದೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ಪತ್ರಕರ್ತರ ಜತೆ ಮಾತನಾಡಿ,
ವಕ್ಫ್ ಕಾನೂನನ್ನು ರದ್ದು ಮಾಡಿದಂತೆ ದೇಶದಲ್ಲಿ ಒಂದೇ ಕಾಮನ್ ಸಿವಿಲ್ ಕೋಡ್ ಜಾರಿಗೆ ತರುತ್ತೇವೆ. ಅಯೋಧ್ಯೆಯಲ್ಲಿ ರಾಮಮಂದಿರ, ಮಥುರಾದಲ್ಲಿ ಕೃಷ್ಣ ಮಂದಿರವನ್ನು ಕಟ್ಟುತ್ತೇವೆ. ಈಗ ನಮ್ಮ ದೇಶಕ್ಕೆ ಒಳ್ಳೆ ಪ್ರಧಾನಿ ಸಿಕ್ಕಿದ್ದಾರೆ. ದೇಶ ಇಂದು ಬಹಳ ಸದೃಢವಾಗಿದ್ದು ಜಗತ್ತಿನ ಐದನೇ ಸದೃಢ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಈ ಮೂಲಕ ಇಂಗ್ಲೆಂಡ್ ಅನ್ನು ಹಿಂದೆ ಹಾಕಿ ನಾವು ಆರ್ಥಿಕತೆಯಲ್ಲಿ ಈಗ ಮುಂದೆ ಬಂದಿದ್ದೇವೆ ಎಂದು ಹೇಳಿದರು.

ಪಿಎಫ್ ಐ ನಿಷೇಧ ಕುರಿತು ಪ್ರತಿಕ್ರಿಯಿಸಿದ ಅವರು ಪಿಎಫ್ ಐ ನಿಷೇಧ ಆಗಿರುವ ಬಗ್ಗೆ ಕಾಂಗ್ರೆಸ್‌ಗೆ ಒಳಗಿಂದ ಒಳಗೆ ಸಂತೋಷವಾಗಿದೆ. ದುರ್ದೈವ ಎಂದರೆ ದೇಶಕ್ಕಿಂತ ಮುಸ್ಲಿಂ ಓಟುಗಳಿಗಾಗಿ ಟೀಕೆ ಮಾಡುತ್ತಿದ್ದಾರೆ. ಪಿಎಫ್ ಐನಿಂದ ಕಾಂಗ್ರೆಸ್ ಮತ ಬ್ಯಾಂಕ್ ಒಡೆದು ಹೋಗಿತ್ತು. ಕಾಂಗ್ರೆಸ್ಸಿಗೆ ಈಗ ಜೀವನ ಬಂದಂತಾಗಿದೆ. ಪಿಎಫ್ ಐ ಜತೆಗೆ ಆರೆಸ್ಸೆಸ್ ಸಂಘಟನೆಯನ್ನು ಬ್ಯಾನ್ ಮಾಡಬೇಕು ಎಂದು ಕಾಂಗ್ರೆಸ್ಸಿಗರು ಹೇಳುತ್ತಿದ್ದಾರೆ. ಆರೆಸ್ಸೆಸ್ ದೇಶಭಕ್ತ ಸಂಘಟನೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ದೇಶಭಕ್ತರನ್ನು ತಯಾರಿಸುವ ಕಾರ್ಖಾನೆ ಆರೆಸ್ಸೆಸ್ ಆಗಿದೆ. ಆದರೆ ಪಿಎಫ್ಐ ದೇಶದಲ್ಲಿ ಹಿಂದುಗಳ ಹತ್ಯೆಗೈಯುವುದು, ಹಿಂದೂ ನಾಯಕರ ಕೊಲೆಗೈಯುವುದು, ಲವ್ ಜಿಹಾದ್ ಕುತಂತ್ರಗಳಿಗೆ ಸಾಕ್ಷಿಯಾಗಿದೆ. ಸುಮ್ಮನೆ ನಿಷೇಧ ಹೇರುವಂತಹ ಕೆಲಸ ಮಾಡಿಲ್ಲ. ಸಾವಿರಾರು ಕೋಟಿ₹ಹಣವನ್ನು ಅರಬ್ ದೇಶಗಳಿಂದ ತಂದು ಇಲ್ಲಿ ದೇಶದ್ರೋಹಿ ಚಟುವಟಿಕೆಗಳಿಗೆ ಪಿಎಫ್ಐ ತೊಡಗಿಸಿರುವ ಬಗ್ಗೆ ದಾಖಲೆ ಸಿಕ್ಕಿದೆ ಎಂದು ಅವರು ಹೇಳಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಕಲಗಿ ಪಟ್ಟಣದಲ್ಲಿ ವಿಜಯ ದಶಮಿ ನಿಮಿತ್ತ ಶ್ರೀ ಮಹಾಲಕ್ಷ್ಮೀ ದೇವಿ ಅಗ್ನಿ ಹಾಯುವ ಕಾರ್ಯಕ್ರಮ.ಮಾರ್ಕಂಡೇಯ ನದಿಯಲ್ಲಿ  ಮರ್ಡರ್..?ಬೆಳಗಾವಿಯಲ್ಲಿ ಹೊಸ ಶೋರೂಮ್ ಮೂಲಕ ಕರ್ನಾಟಕದಲ್ಲಿ ತನ್ನ ಅಸ್ತಿತ್ವ ವಿಸ್ತರಿಸಿದ PuREPowerನೀಲಿ ಡ್ರಮ್ ಕೊಲೆ ಪ್ರಕರಣ : ಪತ್ನಿ ಮುಸ್ಕಾನ್‌, ಪ್ರಿಯಕರ ಸಾಹಿಲ್‌ಗೆ ಮರಣದಂಡನೆ ಶಿಕ್ಷೆRCU ದಲ್ಲಿ ಲಕ್ಷಾಂತರ ರೂ  ಗೋಲ್ಮಾಲ್, ಮೂವರು ಜೈಲುಪಾಲು.ಚೌತಿ ರಾತ್ರಿ ಅವಘಡ:  ಚವಾಟಗಲ್ಲಿಯಲ್ಲಿ ನಾಲ್ವರು ಸಜೀವ ದಹನದ್ವಿಚಕ್ರ ವಾಹನ-ಸಾರಿಗೆ ಬಸ್ ಅಪಘಾತ: ಮೂವರು ಸ್ಥಳದಲ್ಲೇ ಸಾವುಬೆಂಗಳೂರು-ಬೆಳಗಾವಿ ನಡುವೆ ಎರಡು ವಿಶೇಷ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ.ಪಾರ್ಕಿಂಗ್‌ ಮಾಡಿದ್ದ ಕಾರಿನ ಬಾನೆಟ್‌ನಲ್ಲಿ ಅಡಗಿತ್ತು ಬೃಹತ್‌ ಹೆಬ್ಬಾವು ; ಬೆಚ್ಚಿಬಿದ್ದ ನಿವಾಸಿಗಳು  ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರು