LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಪದೇ ಪದೇ ‘ಐ ಲವ್ ಯೂ’ ಹೇಳುವುದು ಅಗತ್ಯವೇ? – ಹುಡುಗರ ಅಂತರಾಳ

ಬೆಂಗಳೂರು: ಬಹುತೇಕ ಹುಡುಗಿಯರು ತಮ್ಮ ಸಂಗಾತಿಯಿಂದ ಪ್ರೀತಿ ಭರವಸೆ, ಕಾಳಜಿ, ಮತ್ತು “ಐ ಲವ್ ಯೂ” ಎಂಬ ಪ್ರೀತಿಯ ಮಾತು ಕೇಳಲು ಇಚ್ಛಿಸುತ್ತಾರೆ. ಆದರೆ ಹುಡುಗರ ಮನಸ್ಥಿತಿ ಇದಕ್ಕೆ ಭಿನ್ನವಾಗಿದೆ. ಪದೇ ಪದೇ ಪ್ರೀತಿಯನ್ನು ವ್ಯಕ್ತಪಡಿಸುವುದು ಅನಗತ್ಯ ಎಂದು ಹಲವಾರು ಹುಡುಗರು ಭಾವಿಸುತ್ತಾರೆ ಎಂದು ಸಂಬಂಧ ತಜ್ಞರು ವಿಶ್ಲೇಷಿಸುತ್ತಾರೆ.

ಒಂದೇ ಮಾತನ್ನು ನಿರಂತರವಾಗಿ ಹೇಳಿದರೆ ಅದರ ಮಹತ್ವ ಕಳೆದುಕೊಳ್ಳುತ್ತದೆ ಎಂಬುದಾಗಿ ಕೆಲವರು ಮನಸ್ಸಿನಲ್ಲಿ ನಂಬಿಕೊಂಡಿದ್ದಾರೆ. “ನಾನು ನೂರು ಬಾರಿ ‘ಐ ಲವ್ ಯೂ’ ಹೇಳಿದರೂ, ಅವನು ಒಮ್ಮೆ ಕೂಡಾ ಹೇಳುವುದಿಲ್ಲ” ಎಂಬುದು ಹಲವಾರು ಹುಡುಗಿಯರ ದೂರು. ಆದರೆ ಹುಡುಗರ ಪ್ರೀತಿಯ ಅಭಿವ್ಯಕ್ತಿಯ ಮಾದರಿ ಭಿನ್ನವಾಗಿರುತ್ತದೆ.

ಹುಡುಗರ ಮನಸ್ಥಿತಿ ಏಕೆ ಹೀಗಿದೆ?
>ನಾಚಿಕೆ ಸ್ವಭಾವ: ಕೆಲವರು ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಹಿಂಜರಿಯುತ್ತಾರೆ.
>ಪ್ರತಿಯೊಂದು ಮಾತಿಗೂ ಅರ್ಥ ಇರಬೇಕು ಎಂಬ ನಂಬಿಕೆ: ಪದೇ ಪದೇ ಹೇಳುವುದರಿಂದ ಮಾತಿನ ಮಹತ್ವ ಕಡಿಮೆಯಾಗಬಹುದು ಎಂದು ಕೆಲವರು ಭಾವಿಸುತ್ತಾರೆ.
>ಪ್ರೀತಿ ಕೇವಲ ಮಾತಲ್ಲ, ಕರ್ಮದಲ್ಲಿದೆ: ಕೆಲವು ಹುಡುಗರು ಪ್ರೀತಿಯನ್ನು ತಮ್ಮ ನಡವಳಿಕೆಯಲ್ಲಿ ತೋರಿಸುತ್ತಾರೆ – ಕಾಳಜಿ, ಬೆಂಬಲ, ರಕ್ಷಣೆ ಇತ್ಯಾದಿಗಳ ಮೂಲಕ.
>ಗೋಪ್ಯತೆ ಮುಖ್ಯ: ಸಾರ್ವಜನಿಕವಾಗಿ ಪ್ರೀತಿಯನ್ನು ತೋರಿಸುವುದು ಇಷ್ಟವಿಲ್ಲದ ಹುಡುಗರ ಸಂಖ್ಯೆಯೂ ಕಡಿಮೆಯಿಲ್ಲ.

ಹುಡುಗಿಯರು ಸಂಗಾತಿಯ ಮಾತಿಗಿಂತ ಅವರ ನಡವಳಿಕೆ ಮತ್ತು ಕಾಳಜಿಯತ್ತ ಗಮನ ಕೊಡುವುದು ಸಂಬಂಧವನ್ನು ಬಲಪಡಿಸಬಹುದು. ಪ್ರೀತಿಯ ವ್ಯಕ್ತೀಕರಣ ಪ್ರತಿ ವ್ಯಕ್ತಿಯೊಬ್ಬರಿಗೂ ವಿಭಿನ್ನವಾಗಿರುತ್ತವೆ ಎಂಬ ಅಂಶವನ್ನು ಎರಡೂಪಕ್ಷಗಳೂ ಅರ್ಥ ಮಾಡಿಕೊಳ್ಳುವುದು ಮುಖ್ಯ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಾಧನೆಯನ್ನು ಒಂದು ಜಾತಿಗೆ ಸೀಮಿತ ಮಾಡುವುದು ಸರಿಯಲ್ಲ : ಲಂಬಾಣಿ ಗುರುಪೀಠದ ಶ್ರೀನಮ್ಮ ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಾಗಿಯೇ ಇದ್ದೇವೆ: ದಿನೇಶ ಗುಂಡೂರಾವ್.!ಭದ್ರಾ ಮೇಲ್ದಂಡೆ ಯೋಜನೆ: ಅನುದಾನ ಬಿಡುಗಡೆ:  ಶಾಸಕ ಟಿ. ರಘುಮೂರ್ತಿಸಮುದ್ರದ ಒಳಗೆ ಭರತನಾಟ್ಯ - 14 ವರ್ಷದ ಬಾಲಕಿಯ ನಾಟ್ಯಪ್ರೇಮಕ್ಕೆ ನೆಟ್ಟಿಗರು ಫಿದಾ!ಮಗುವಿನ ಕೈಯಲ್ಲಿ ಚೀನಾದ ರೈಫಲ್ ಸ್ಕೋಪ್ ಪತ್ತೆ!ರಷ್ಯಾದ ಸೇನೆಗೆ ಸೇರುವಂತೆ ಗುಜರಾತ್ ವಿದ್ಯಾರ್ಥಿಗೆ ಒತ್ತಾಯ3 ಕೋಟಿ ವಿಮೆಗಾಗಿ ತಂದೆಗೆ ಹಾವು ಕಚ್ಚಿಸಿ ಕೊಂದ ಪುತ್ರರು!!'ಬಲವಿಲ್ಲದ ಯೂನಸ್ ಸರ್ಕಾರದಿಂದ ಕಾನೂನು ಸುವ್ಯವಸ್ಥೆ ವಿಫಲ'– ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾರಾಜ್ಯದಲ್ಲಿ ಸೀಸನಲ್ ಫ್ಲೂ ಭೀತಿ- ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆಮೂಳೆ ಮುರಿದರೂ ವೀಲ್‌ಚೇರ್, ಆಕ್ಸಿಜನ್ ಸಪೋರ್ಟ್‌ನಿಂದ UPSC ಬರೆದ ದಿಟ್ಟೆ