LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬೆಂಗಳೂರು ರೋಟರಿ ಕ್ಲಬ್ ನ 90ನೇ ಅಧ್ಯಕ್ಷರಾಗಿ ಗೌರಿ ಓಜಾ ನೇಮಕ

ಬೆಂಗಳೂರು: ಬೆಂಗಳೂರು ರೋಟರಿ ಕ್ಲಬ್ ನ 90ನೇ ವರ್ಷದ ಸಂಭ್ರಮದಲ್ಲಿ 2024ರ ಅವಧಿಗೆ 90ನೇ ಅಧ್ಯಕ್ಷರಾಗಿ ರೋಟರಿಯನ್ ಗೌರಿ ಓಜಾ ಅವರು ಅಧಿಕಾರ ವಹಿಸಿಕೊಂಡ ಮಾತನಾಡಿದರು ಮಹಿಳೆಯರು ಮತ್ತು ಮಕ್ಕಳ ಮೇಲೆ ಉತ್ತಮ ಪರಿಣಾಮ ಬೀರುವ ಮಾರ್ಗಗಳನ್ನು RCB ಪರಿಶೀಲಿಸುತ್ತದೆ ಎಂದು 2024ರ ಅವಧಿಗೆ ಅಧ್ಯಕ್ಷೆ ಗೌರಿ ಓಜಾ ಅವರು ತಿಳಿಸಿದರು.

ಬೆಂಗಳೂರಿನ ಲ್ಯಾವೆಲ್ಲಿ ರಸ್ತೆಯ ರೋಟರಿ ಫ್ರೆಂಡ್ಶಿಪ್ ಕ್ಲಬ್ ನಲ್ಲಿ instalation ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು, ಬೆಂಗಳೂರು ರೋಟರಿ ಕ್ಲಬ್ ವರ್ಷದ ಉದ್ದಕ್ಕೂ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ, ಅದರಲ್ಲಿ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಸಮವಸ್ತ್ರ, ಮೆಡಿಕಲ್ ಕ್ಯಾಂಪ್, ಪರಿಸರ ಕಾಳಜಿ, ಸ್ವಚ್ಚತೆ, ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸವನ್ನು 90 ವರ್ಷಗಳಿಂದ ಮಾಡಿಕೊಂಡು ಬರಲಾಗುತ್ತಿದೆ.

ಕ್ಲಬ್ ಗೆ 90 ವರ್ಷ ತುಂಬಿದ ಹಿನ್ನೆಲೆ ಇದೀಗ 2024 ಅವಧಿಯಲ್ಲಿ ರೋಟರಿ ಕ್ಲಬ್ ಆಫ್ ಬೆಂಗಳೂರು ಕರ್ನಾಟಕ ಗ್ರಾಮಾಂತರದಲ್ಲಿರುವ 90 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸೌರಶಕ್ತಿಯನ್ನು ನೀಡುತ್ತದೆ.

ಬೆಂಗಳೂರು ರೋಟರಿ ಕ್ಲಬ್ ಗೆ 90ರ ಸಂಭ್ರಮ

ರೋಟರಿ ಕ್ಲಬ್ ಆಫ್ ಬೆಂಗಳೂರು ತನ್ನ 90 ನೇ ವರ್ಷದಲ್ಲಿದ್ದು, 1934 ರಲ್ಲಿ ಚಾರ್ಟರ್ಡ್ 334 ಸದಸ್ಯರನ್ನು ಹೊಂದಿರುವ ಭಾರತದ ಅತಿದೊಡ್ಡ ರೋಟರಿ ಕ್ಲಬ್‌ಗಳಲ್ಲಿ ಒಂದಾಗಿದೆ. 90 ವರ್ಗಳಿಂದಲು ಅನೇಕ ಸಮಾಜಸೇವೆಗಳನ್ನು ಮಾಡಿಕೊಂಡು ಬರಲಾಗುತ್ತಿದೆ, ಮುಂದಿನ ದಿನಗಳಲ್ಲಿಯೂ ಮುಂದುವರೆಸಿಕೊಂಡು ಹೋಗಲಾಗುತ್ತದೆ.

ಈ ಪ್ರತಿಷ್ಠಿತ ಕ್ಲಬ್‌ನ 90 ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವ ಅಧ್ಯಕ್ಷೆ ರೋಟರಿಯನ್ ಗೌರಿ ಓಜಾ ಅವರು, “ಸಮುದಾಯಕ್ಕೆ ನಮ್ಮ 90 ವರ್ಷಗಳ ಸೇವೆಯನ್ನು ಸ್ಮರಿಸುವುದಕ್ಕಾಗಿ, ಈ ವರ್ಷ 24-25 ಸಾಲಿನಲ್ಲಿ ಕ್ಲಬ್ ನ ಸದಸ್ಯರೆಲ್ಲರೂ ನಾವು 90 ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಶಕ್ತಿ ತುಂಬಲು ನಿರ್ಧರಿಸಿದ್ದೇವೆ. ಆ ಹಿನ್ನೆಲೆ ಸೌರಶಕ್ತಿಯೊಂದಿಗೆ ಕರ್ನಾಟಕವು 2.7 ಕೋಟಿ ರೂ.ಗಳಷ್ಟಿರುತ್ತದೆ.

ರೋರಿಯನ್ಸ್, ಕುಟುಂಬಗಳು ಮತ್ತು ಹಿತೈಷಿಗಳ ದೊಡ್ಡ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷೆ ಗೌರಿ ಓಜಾ, ಮಹಿಳೆಯರು ಮತ್ತು ಮಕ್ಕಳ ಮೇಲೆ ಉತ್ತಮ ಪರಿಣಾಮ ಬೀರುವ ಮಾರ್ಗಗಳನ್ನು RCB ಪರಿಶೀಲಿಸುತ್ತದೆ ಎಂದು ಘೋಷಿಸಿದರು.

ಕಾರ್ಯಕ್ರಮದಲ್ಲಿ ರೊಟರಿಯನ್ ಡಾ ಮುಸ್ತಲಿ ವಾಘ್, ರೊಟರಿಯನ್ ರೋಹಿದಾಸ್ ಭಟ್, ರೊಟರಿಯನ್ ವಿನೀತಾ ಚಿನಪ್ಪ, ರೊಟರಿಯನ್ ಗಿರೀಶ್ ರಾಮನಾಥನ್, ರೊಟರಿಯನ್ ಸೋಹಿಲ್ ಷಾ, ರೊಟರಿಯನ್ ಗೌರಿ ಓಜಾ, ರೊಟರಿಯನ್ ನಳಿನಿ ನಂಜುಂಡಯ್ಯ, ರೊಟರಿಯನ್ ಸುಕೇನ್ ಪದ್ಮನಾಭ, ರೊಟರಿಯನ್ ಶ್ರೀಹರಿ, ರೊಟರಿಯನ್ ಕವಿತಾ ಮುತ್ತಪ್ಪ, ರೊಟರಿಯನ್ ಕವಿತಾ ಮುತ್ತಪ್ಪ ಸೇರಿದಂತೆ ಕ್ಲಬ್ ನ ಹಳೆಯ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಆಸ್ತಿ ತೆರಿಗೆ ಬಾಕಿ: ಸುಸ್ತಿದಾರರ ಆಸ್ತಿಗಳನ್ನು ನಗರ ಪಾಲಿಕೆಯ ಹೆಸರಿಗೆ ಬದಲಾಯಿಸಿಕೊಳ್ಳಲು ಕ್ರಮಸ್ವಚ್ಛ ಸರ್ವೇಕ್ಷಣ 2025-26 ರ ವಿಶೇಷ: ಉದ್ಯಾನವನ ಆಟದ ಮೈದಾನ ಸ್ವಚ್ಛಜಿಬಿಎಯಿಂದ ಬೀದಿ ನಾಯಿಗಳ ದತ್ತು ಸ್ವೀಕಾರ ಕಾರ್ಯಕ್ರಮ ಯಶಸ್ವಿನ್ಯಾಯವಿತರಣೆಯಲ್ಲಿ ಪೊಲೀಸರು ಯಾವುದೇ ಕಾರಣಕ್ಕೂ ರಾಜಿಯಾಗಬಾರದು:ಮುಖ್ಯಮಂತ್ರಿ ಸಿದ್ದರಾಮಯ್ಯದಕ್ಷಿಣ ನಗರ ಪಾಲಿಕೆ 2026-27ನೇ ಸಾಲಿನ ಆಯವ್ಯಯ ಅಂದಾಜು ಪ್ರಸ್ತುತಿ ಪಡಿಸುವಿಕೆ ಕಾರ್ಯಕ್ರಮಕೆ ಎಸ್ ಆರ್ ಟಿ ಸಿ ಗೆ ಪ್ರತಿಷ್ಠಿತ ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ-2026ಸರ್ಕಾರ ಶಿಕ್ಷಣ, ಕಾನೂನು ವ್ಯವಸ್ಥೆ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯಪ್ರತಿಯೊಬ್ಬರೂ ವೈಚಾರಿಕ, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯವಿಶ್ವ ಕರ್ಮ ಸಮಾಜದ ಮಹಿಳಾ ವಿಭಾಗದಿಂದ ಮಹಿಳಾ ದಿನಾಚಾರಣೆಕಿಸ್ನಾ ವಜ್ರ ಮತ್ತು ಚಿನ್ನದ ಆಭರಣಗಳ ಸಂಸ್ಥೆಯಿಂದ ಮಹಿಳಾ ದಿನಾಚರಣೆ