Press ID & Credential Portal
Apply / Verify  ➔
LIVE TV LocalCrimeNationalInternationalPoliticsFinancialEducationTechnologyEntertainmentSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಗುರು ಗೋವಿಂದ ಭಟ್ ಹಾಗು ಶಿಶುನಾಳ ಶರೀಫರು ಸಮಾನತೆಯ ಹರಿಕಾರರು

ಬೆಂಗಳೂರು, ೩- ಈಶ್ವರ ಅಲ್ಲಾ, ನೀನೇ ಎಲ್ಲಾ ಎಂದು ಬೋಧಿಸಿ, ಅದನ್ನು ಆಚರಣೆಯಲ್ಲಿ ತಂದವರು ಕಳಸದ ಗುರು ಗೋವಿಂದ ಭಟ್ಟರು ಹಾಗೂ ಅವರ ಶಿಷ್ಯರಾದ ಕರ್ನಾಟಕದ ಕಬೀರ, ಸಂತ ಶಿಶುನಾಳ ಶರೀಫರು. ಮಂದಿರ-ಮಸೀದಿ, ಪುರಾಣ-ಕುರಾನ, ನಮನ-ನಮಾಜ್, ಅಲ್ಲಮ-ಅಲ್ಲಾ, ಜಂಗಮ-ಫಕೀರ, ಇವೆಲ್ಲಾ ಒಂದೇ, ಭಗವಂತನ ದರ್ಶನಕ್ಕೆ ನಾವು ಹಾಕಿಕೊಂಡ ವಿವಿಧ ಹಾದಿಗಳು ಎಂದು ತೋರಿಸಿದಂತಹ ದಾರ್ಶನಿಕರ ಪೈಕಿ ಶಿಶುನಾಳ ಶರೀಫರು ಅಗ್ರಪಂಕ್ತಿಯಲ್ಲಿ ಗುರುತಿಸಿಕೊಳ್ಳುತ್ತಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಹೇಳಿದ್ದಾರೆ.



ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಪಂಪ ಸಭಾಂಗಣದಲ್ಲಿ ಹಮ್ಮಿಕೊಂಡ ಸಂತ ಶಿಶುನಾಳ ಶರೀಫರ, ಹಡಪದ ಅಪ್ಪಣ್ಣನವರ ಹಾಗೂ ಫ.ಗು.ಹಳಕಟ್ಟಿ ಅವರ ಜನ್ಮದಿನಾಚರಣೆಯ ಹಿನ್ನೆಲೆಯಲ್ಲಿ ಹಮ್ಮಿಕೊಂಡ ಪುಷ್ಪನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.



ಕಳಸದ ಗುರು ಗೋವಿಂದ ಭಟ್ಟರು ಹಾಗೂ ಸಂತ ಶಿಶುನಾಳ ಶರೀಫರು ಹಿಂದೂ ಹಾಗೂ ಇಸ್ಲಾಂ ಧರ್ಮಗಳ ಸಮಾನತೆ, ಸಮನ್ವಯ ಹಾಗೂ ಸಮಭಾವನ್ನು, ಸಮಚಿತ್ತ ಹಾಗೂ ಸಮದೃಷ್ಟಿಯಿಂದ ನೋಡಿದ ‘ಸಮಾನತೆಯ ಹರಿಕಾರರು‘ ಕಳಸದ ಗುರು ಗೋವಿಂದಭಟ್ಟರು ಹಾಗೂ ಸಂತ ಶಿಶುನಾಳ ಶರೀಫರು. ಇವರಿಬ್ಬರೂ ದೈವಭಕ್ತರು, ಆತ್ಮಜ್ಞಾನಿಗಳು, ತತ್ವಜ್ಞಾನಿಗಳು, ವಿಚಾರವಾದಿಗಳು, ವಿಮರ್ಶಕರು, ಶಾಂತಿ ಹಾಗೂ ಕ್ರಾಂತಿ ಪುರುಷರು, ಸಮಾಜ ಸುಧಾರಕರು, ನೀತಿ ಬೋಧಕರು ಹಾಗೂ ತ್ರಿಕಾಲ ಜ್ಞಾನಿಗಳು. ಎಲ್ಲಕ್ಕಿಂತ ಹೆಚ್ಚಾಗಿ ಇವರಿಬ್ಬರೂ ಸಮಸಮಾಜದ, ಮಾನವತೆಯ ಎರಡು ಕಣ್ಣುಗಳಾಗಿ 'ಮಹಾನ್ ಮಾನವತಾವಾದಿ'ಗಳಾಗಿ ಸಮಾಜಕ್ಕೆ ಬೆಳಕನ್ನು ಕೊಟ್ಟವರು ಎಂದು ಡಾ. ಮಹೇಶ ಜೋಶಿ ನುಡಿದರು.



ಪ್ರಪ್ರಥಮ ಪ್ರಜಾಪ್ರಭುತ್ವದ ಸಂಸತ್ತು ಎಂದೇ ಹೆಸರಾದ "ಅನುಭವ ಮಂಟಪದಲ್ಲಿ" ಬಸವಣ್ಣನವರಿಗೆ ಪ್ರಧಾನ ಕಾರ್ಯದರ್ಶಿಗಳಾಗಿ, ಬಸವಣ್ಣನವರಿಗೆ ಯಾವುದೇ ರೀತಿಯ ಮುಜುಗುರವಾಗದಂತೆ ಕಾರ್ಯನಿರ್ವಹಿಸಿ, ತಮ್ಮ ಕಾರ್ಯಕ್ಷಮತೆಯಿಂದ ಎಲ್ಲರಿಗೂ ಮಾದರಿಯಾಗಿದ್ದವರು ಹಡಪದ ಅಪ್ಪಣ್ಣನವರು. ಸಾಮಾಜಿಕ ಸಮಾನತೆಯ ಹರಿಕಾರರಾದ ಅಪ್ಪಣ್ಣನವರು ಸುಮಾರು ೨೫೦ಕ್ಕೂ ಹೆಚ್ಚು ವಚನಗಳನ್ನು ʻಅಪ್ಪಣ್ಣ ಪ್ರಿಯ ಚನ್ನಬಸವಣ್ಣʼ ಎಂಬ ಅಂಕಿತನಾಮದಿಂದ ವಚನಗಳನ್ನು ರಚಿಸಿದ್ದಾರೆ. ಬಸವಣ್ಣನವರಿಗೆ ಅಪ್ಪಣ್ಣ ಪ್ರಾಣವೇ ಆಗಿದ್ದರು. ಇದಕ್ಕೆ ಸಾಕ್ಷಿ ಕಲ್ಯಾಣಕ್ರಾಂತಿಯ ಕೊನೆಯ ದಿನಗಳ ಕುರಿತ ಶೂನ್ಯ ಸಂಪಾದನೆಯಲ್ಲಿನ ವಿವರಗಳಿಂದ ನಮಗೆ ಸ್ಪಷ್ಟಪಡಿಸುತ್ತವೆ. ಒಬ್ಬ ಕಾರ್ಯದರ್ಶಿ ಹೇಗೆ ಕಾರ್ಯನಿರ್ವಹಿಸಬೇಕೆಂಬುದಕ್ಕೆ ಹಡಪದ ಆಪ್ಪಣ್ಣನವರು ಒಂದು ಉತ್ತಮ ಉದಾಹರಣೆಯಾಗಿ ಇರುತ್ತಾರೆ. ಆದರೆ ನಮ್ಮಲ್ಲಿ ಹಡಪದ ಅಪ್ಪಣ್ಣನ ಕುರಿತು, ಅವರ ರಚಿಸಿದ ವಚನಗಳ ಕುರಿತು ಹಾಗೂ ಅವರ ಜೀವನದ ಕುರಿತು ಇನ್ನೂ ಹೆಚ್ಚಿನ ಸಂಶೋಧನೆಯಾಗಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.



ಜನರಿಗೆ ಗೊತ್ತಿಲ್ಲದೇ ಕಬ್ಬಿಣದ ಕಡಲೆಯಂತಿದ್ದ ಸಂಸ್ಕೃತ ಭಾಷೆಯಲ್ಲಿದ್ದ ಧರ್ಮದ ಸಾರವನ್ನು ವಚನಕಾರರು ಜನರಿಗೆ ಅರ್ಥ ಆಗುವಂತೆ ನಮ್ಮ ಜೀವ ಭಾಷೆಯಾಗಿರುವ ಕನ್ನಡ ಭಾಷೆಯಲ್ಲಿ ತಿಳಿಸಿದವರು ಫ.ಗು.ಹಳಕಟ್ಟಿ ಅವರು. 200 ವಚನಕಾರರ ವಚನಗಳನ್ನು ಸಂಗ್ರಹಿಸಿ, ಮುಂದಿನ ತಲೆಮಾರಿಗೆ ನೀಡುವ ಮಹಾನ್ ಮೌಲ್ಯಯುತವಾದ ಕೆಲಸವನ್ನು ಅವರು ಮಾಡಿದರು.ಕರ್ನಾಟಕದ ಮೂಲೆ ಮೂಲೆಯನ್ನು ತಿರುಗಿ ತಾಳೆಗರಿಗಳಲ್ಲಿ ಇದ್ದ ವಚನಗಳನ್ನು ಪರಿಷ್ಕರಿಸಿ ಪ್ರಕಟಿಸಿದ ಕೀರ್ತಿ ಅವರದು ಎಂದು ಡಾ ಮಹೇಶ ಜೋಶಿ ತಿಳಿಸಿದರು.



ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ನಿಕಟ ಒಡನಾಟವನ್ನು ಇಟ್ಟು ಕೊಂಡಿದ್ದ ಫ.ಗು.ಹಳಕಟ್ಟಿಯವರು ಆರಂಭದ ದಿನಗಳಲ್ಲಿ ಪರಿಷತ್ತಿಗೆ ಬೆನ್ನುಲುಬಾಗಿದ್ದರು. ೧೯೨೬ರಲ್ಲಿ ಬಳ್ಳಾರಿಯಲ್ಲಿ ನಡೆದ ೧೨ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು ಎಂದು ಸ್ಮರಿಸಿ ಕೊಂಡು ವಚನ ಸಾಹಿತ್ಯಕ್ಕೆ ಅಪಾರ ಕೊಡುಗೆಯನ್ನು ನೀಡಿದ ಫ.ಗು.ಹಳಕಟ್ಟಿಯವರ ಜನ್ಮದಿನವನ್ನು "ವಚನ ಸಾಹಿತ್ಯ ಸಂರಕ್ಷಣಾ ದಿನ" ವನ್ನಾಗಿ ಆಚರಿಸಲಾಗುತ್ತಿದೆ ಎಂದು ಜೋಶಿ ವಿವರಿಸಿದರು.



ಪುಷ್ಪನಮನ ಕಾರ್ಯಕ್ರಮದಲ್ಲಿ ಪರಿಷತ್ತಿನ ಗೌರವ ಕಾರ್ಯದರ್ಶಿ ನೇ.ಭ. ರಾಮಲಿಂಗ ಶೆಟ್ಟಿ, ಡಾ. ಪದ್ಮಿನಿ ನಾಗರಾಜು, ಗೌರವ ಕೋಶಾಧ್ಯಕ್ಷ ಡಾ. ಬಿ.ಎಂ. ಪಟೇಲ್ ಪಾಂಡು, ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ, ಪ್ರಕಟಣಾ ವಿಭಾಗದ ಸಂಚಾಲಕರಾದ ಪ್ರೊ. ಎನ್. ಎಸ್. ಶ್ರೀಧರ ಮೂರ್ತಿ, ವಿಶೇಷ ಕರ್ತವ್ಯಾಧಿಕಾರಿ ಚಿಕ್ಕತಿಮ್ಮಯ್ಯ ಸಿ. ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಿಸೆಂಬರ್ 7ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಸಾಧ್ಯತೆಎಂಎಸ್‌ಪಿ ಆಧರಿಸಿ ಕಬ್ಬಿಗೆ ದರ: ಡಿ.ಕೆ. ಶಿವಕುಮಾರಮತದಾರರ ಅಂತಿಮ ಪಟ್ಟಿಯಲ್ಲಿ ನಿಮ್ಮ ಹೆಸರು ಪರಿಶೀಲಿಸಿಚುನಾವಣಾ ಆಯೋಗದ ಸಮರ್ಥನೆಗೆ ಆಕ್ಷೇಪಣೆ ಸಲ್ಲಿಸಲು 10 ದಿನ ಕಾಲಾವಕಾಶಸಚಿವ ಜಿ. ಪರಮೇಶ್ವರ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು‘ಬಟ್ಟೆ ಹರಿದು ರಕ್ತಸ್ರಾವವಾಗಿತ್ತು’: ಟ್ರಂಪ್ ವಿರುದ್ಧ ಮಾಜಿ ಮಿಸ್ ಸ್ವಿಟ್ಜರ್ಲ್ಯಾಂಡ ಅತ್ಯಾಚಾರ ಆರೋಪ!ಮತದಾರರ ಪಟ್ಟಿಯಿಂದ 1 ಕೋಟಿ ಹೆಸರು ಡಿಲೀಟ್!ಕಬ್ಬಿನ ದರ ನಿಗದಿ ಸಭೆಯಲ್ಲಿ ರೈತ ಮುಖಂಡರ ಮಾರಾಮಾರಿ: ಸುವರ್ಣಸೌಧದಲ್ಲೇ ಕೈಕೈ ಮಿಲಾಯಿಸಿದ ಎರಡು ಬಣಗಳು!ಕನ್ನಡಿಗರಿಗೆ ಉದ್ಯೋಗ ನಿರಾಕರಿಸಿದರೆ ಖಾಸಗಿ ಸಂಸ್ಥೆಗಳ ವಿರುದ್ಧ ಕ್ರಮ: ಡಿ.ಕೆ. ಶಿವಕುಮಾರಜಲವಿದ್ಯುತ್ ಯೋಜನೆ ವಿರೋಧಿಸಿ ಅರುಣಾಚಲದಲ್ಲಿ ಹಿಂಸಾಚಾರ: ಭದ್ರತಾ ಪಡೆಯ ಎರಡು ತುಕಡಿ ರವಾನೆ