LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹಿಂದೂ ಜನಜಾಗೃತಿ ಸಮಿತಿಯಿಂದ ಗುರುಪೂರ್ಣಿಮಾ ಮಹೋತ್ಸವ ಸಂಪನ್ನ

ಬೆಂಗಳೂರು : ರಾಮರಾಜ್ಯಕ್ಕಾಗಿ ಸಾಧನೆ ಮಾಡುವುದರ ಜೊತೆಗೆ ಭ್ರಷ್ಟಾಚಾರ, ಅನೈತಿಕತೆ ಮತ್ತು ಅರಾಜಕತೆಯ ವಿರುದ್ಧ ಹೋರಾಡಬೇಕಿದೆ' ಎಂದು ಹಿಂದೂ ಜನಜಾಗೃತಿ ಸಮಿತಿ ರಾಜ್ಯ ವಕ್ತಾರರಾದ ಮೋಹನ ಗೌಡ ಕರೆ ನೀಡಿದ್ದಾರೆ.

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಕಾಮಾಕ್ಷಿಪಾಳ್ಯದ ಧನಂಜಯ ಪ್ಯಾಲೇಸ್ ನಲ್ಲಿ ಆಯೋಜಿಸಲಾದ ಗುರುಪೂರ್ಣಿಮಾ ಮಹೋತ್ಸವದಲ್ಲಿ ಮಾತನಾಡುತ್ತಿದ್ದರು. ವೈಯಕ್ತಿಕ ಜೀವನದಲ್ಲಿ ಆಧ್ಯಾತ್ಮಿಕ ಸಾಧನೆಯಿಂದ ಅಂತರಂಗದಲ್ಲಿ ರಾಮರಾಜ್ಯದ ಸ್ಥಾಪನೆ ಮಾಡಬಹುದು; ಆದರೆ ಸಾಮಾಜಿಕ ಮತ್ತು ರಾಷ್ಟ್ರೀಯ ಜೀವನದಲ್ಲಿ ರಾಮರಾಜ್ಯದ ಸ್ಥಾಪನೆಗಾಗಿ ನಾವು ಕರ್ತವ್ಯನಿಷ್ಠರಾಗಿ ನಿಭಾಯಿಸುವುದರೊಂದಿಗೆ ಭ್ರಷ್ಟಾಚಾರ, ಅನೈತಿಕತೆ ಮತ್ತು ಅರಾಜಕತೆಯ ವಿರುದ್ಧ ಹೋರಾಡಬೇಕಿದೆ. ನಮ್ಮ ಆಚಾರ-ವಿಚಾರಗಳು ಹಿಂದೂ ಸಂಸ್ಕೃತಿಗನುಸಾರ ಇರಬೇಕು. ‘ಹಲೋ’ ಬದಲಾಗಿ ‘ನಮಸ್ಕಾರ’ ಅಥವಾ ‘ರಾಮ ರಾಮ’ ಹೇಳಬೇಕು, ಇದು ನಮ್ಮ ಸಂಸ್ಕೃತಿಯಾಗಿದೆ; ‘ಟಿವಿ’ಯಲ್ಲಿ ಧಾರಾವಾಹಿ ನೋಡದೆ, ‘ಕೀರ್ತನೆ-ಭಜನೆ’ ನೋಡಬೇಕು, ಇದು ನಮ್ಮ ಸಂಸ್ಕೃತಿಯಾಗಿದೆ, ಯಾರೋ ನಟನಲ್ಲ, ‘ರಾಮ-ಕೃಷ್ಣ’ ನಮ್ಮ ಆದರ್ಶವಾಗಿದ್ದಾರೆ. ನಮ್ಮ ನಿತ್ಯ ವ್ಯವಹಾರದಲ್ಲಿ ನಮ್ಮ ಸಂಸ್ಕೃತಿಯ ರಕ್ಷಣೆ ಮತ್ತು ಪಾಲನೆ ಮಾಡಬೇಕು ಎಂದು ಕರೆ ನೀಡಿದರು.

ಗುರುಪರಂಪರೆ ಇರುವ ಕ್ಷೇತ್ರದಲ್ಲಿ ಭ್ರಷ್ಟಾಚಾರ ?

ರಾಷ್ಟ್ರಧರ್ಮ ಸಂಘಟನೆಯ ಸಂತೋಷ್ ಕೆಂಚಾಂಬ ಇವರು ಮಾತನಾಡಿ, ಇಂದಿನ ಶಿಕ್ಷಣ ವ್ಯವಸ್ಥೆಯು ಕೇವಲ ಆರ್ಥಿಕ ಸಮೃದ್ಧಿಯ ಮೂಲ ಉದ್ದೇಶದಿಂದ ಕಾರ್ಯನಿರತವಾಗಿದೆ. ಭಾರತ ದೇಶ ವಿಶ್ವಗುರು ಆಗಬೇಕಾದರೆ ಗುರುಗಳ ಪರಿಕಲ್ಪನೆ ಬಹಳ ಮುಖ್ಯವಾದದ್ದು. ಭಾರತದಲ್ಲಿ ಗುರು ಶಿಷ್ಯ ಪರಂಪರೆ ಇರುವುದರಿಂದ ಹಿಂದೆ ಅನೇಕ ವಿಶ್ವವಿದ್ಯಾಲಯಗಳು ಇದ್ದವು ಹಾಗೂ ವಿದೇಶಗಳಿಂದ ಭಾರತಕ್ಕೆ ವಿಧ್ಯಾಭ್ಯಾಸಕ್ಕಾಗಿ ಬರುತ್ತಿದ್ದರು, ಅವರ ಸೆಳೆತಕ್ಕೆ ಗುರುಶಿಷ್ಯ ಪರಂಪರೆ ಕಾರಣವಾಗಿತ್ತು. ಇಂದು ಗುರುಗಳ ಮಾರ್ಗದರ್ಶನ ಇಲ್ಲದ ಕಾರಣ ಎಲ್ಲಾ ಕ್ಷೇತ್ರಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ವೈಯಕ್ತಿಕ, ಸಾಮಾಜಿಕ, ದೇಶದ ಹಾಗೂ ವಿಶ್ವದ ಅಭಿವೃದ್ದಿಗಾಗಿ ಗುರುಗಳ ಮಾರ್ಗದರ್ಶನದ ಅತ್ಯವಶ್ಯಕವಾಗಿದೆ' ಎಂದರು.

ವಿಶ್ವದಾದ್ಯಂತದ ಜನತೆಗೆ ಗುರುಪೂರ್ಣಿಮೆಯ ಲಾಭವಾಗಬೇಕೆಂದು ಸಮಿತಿಯು ಗುರುಪೂರ್ಣಿಮಾ ಮಹೋತ್ಸವದ ಲೈವ್ ಪ್ರಸಾರವನ್ನೂ ಮಾಡಿದೆ. ಕಾರಣಾಂತರಗಳಿಂದ ಯಾರಿಗಾದರೂ ಪ್ರತ್ಯಕ್ಷ ಕಾರ್ಯಕ್ರಮದಲ್ಲಿ ಸಹಭಾಗಿಯಾಗಲು ಅಡಚಣೆಯುಂಟಾಗಿದ್ದಲ್ಲಿ ಸಮಿತಿಯ ಯೂಟ್ಯೂಬ್ ಚಾನೆಲ್ @HJSKarnataka ಗೆ ಭೇಟಿ ನೀಡಿ Recorded Live ವೀಕ್ಷಿಸಬಹುದೆಂದು ಕರೆ ನೀಡಿದೆ.

ಗುರುಪೂರ್ಣಿಮೆ ಹಿನ್ನೆಲೆ ಬೆಂಗಳೂರಿನಲ್ಲಿ ಸಮಿತಿಯಿಂದ ಬಸವನಗುಡಿಯ ಭವಾನಿ ಕಲ್ಯಾಣ ಮಂಟಪ, ಯಲಹಂಕದ ಆರ್ ವಿ ಕಲ್ಯಾಣ ಮಂಟಪ ಹಾಗೂ ಚಂದಾಪುರದ ಯಾರೆಂಡಳ್ಳಿಯ ಸಾಯಿಬಾಬಾ ಯೋಗ ಕೇಂದ್ರದಲ್ಲಿ ಸೇರಿದಂತೆ ದೇಶದಾದ್ಯಂತ 71 ಕ್ಕೂ ಅಧಿಕ ಕಡೆಗಳಲ್ಲಿ ಗುರುಪೂರ್ಣಿಮಾ ಮಹೋತ್ಸವವು ಸಂಪನ್ನವಾಯಿತು. 600 ಕ್ಕೂ ಅಧಿಕ ಜನರು ಈ ಕಾರ್ಯಕ್ರಮದ ಲಾಭ ಪಡೆದರು.

ಈ ಮಹೋತ್ಸವದಲ್ಲಿ ರಾಷ್ಟ್ರ ಧರ್ಮ ಸಂಘಟನೆಯ ಸಂಸ್ಥಾಪಕರಾದ ಸಂತೋಷ ಕೆಂಚಾಂಬ, ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕ ಪರಿಷತ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎನ್ ಮಹೇಶ್, ಆನೇಕಲ್ ನ ಚೌಡೇಶ್ವರಿ ದೇವಸ್ಥಾನದ ಅಧ್ಯಕ್ಷರಾದ ಸೋಮೇಶ್ ರೆಡ್ಡಿ ಹಾಗೂ ರಾಜರಾಜೇಶ್ವರಿನಗರದ ರಾಜರಾಜೇಶ್ವರಿ ದೇವಸ್ಥಾನದ ಟ್ರಸ್ಟಿಗಳಾದ ಶಶಾಂಕ ಆಚಾರ್ ಇವರೂ ಭಾಗಿಯಾಗಿದ್ದರು. ಈ ದಿನ ಬೆಳಿಗ್ಗೆ ವ್ಯಾಸ ಪೂಜೆ ಮತ್ತು ಪರಮಪೂಜ್ಯ ಭಕ್ತರಾಜ ಮಹಾರಾಜರ ಪ್ರತಿಮೆಯ ಪೂಜೆ ನೆರವೇರಿಸಲಾಯಿತು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಶ್ವ ಕರ್ಮ ಸಮಾಜದ ಮಹಿಳಾ ವಿಭಾಗದಿಂದ ಮಹಿಳಾ ದಿನಾಚಾರಣೆಕಿಸ್ನಾ ವಜ್ರ ಮತ್ತು ಚಿನ್ನದ ಆಭರಣಗಳ ಸಂಸ್ಥೆಯಿಂದ ಮಹಿಳಾ ದಿನಾಚರಣೆಸೈಬರ್ ಥ್ರಿಲ್ಲರ್ ಅಂಶಗಳ ಒಳಗೊಂಡ ಅಚ್ಯುತ ಅವತಾರಂಮೋದಿ ‘ವಂದೇ ಮಾತರಂ’ಗೆ ನೀಡಿದ ಗೌರವ ವಿರೋಧಿಸಲು ಕಾಂಗ್ರೆಸ್ ಅಧಃಪತನದ ಹಾದಿಸ್ವಚ್ಛ ಸರ್ವೇಕ್ಷಣ 2025-26 ರ ವಿಶೇಷ ಸ್ವಚ್ಛತಾ ಅಭಿಯಾನವಾರ್ಡ್‌ವಾರು ಪರಿಷ್ಕೃತ ಕರಡು ಮತದಾರರ ಪಟ್ಟಿ ಪ್ರಕಟಣೆ – ದೂರು/ಆಕ್ಷೇಪಣೆ ಸಲ್ಲಿಕೆ ಅವಧಿ ವಿಸ್ತರಣೆಚಲನಚಿತ್ರ ಪೋಷಕ ಕಲಾವಿದರ ಸಂಘದ ಚುನಾವಣೆಗೆ ನ್ಯಾಯಾಲಯದ ತಡೆಭಾರತಿ ಟೀಚರ್ 7ನೇ ತರಗತಿಗೆ @ 50ರ ಸಂಭ್ರಮಕಾಂಗ್ರೆಸ್ ಪಕ್ಷಕ್ಕೆ ವಿಚ್ಛೇದನ ಕೊಟ್ಟಿದ್ದಕ್ಕೆ ಕಾರಣ ಕೊಟ್ಟ ಮಾಜಿ ಪ್ರಧಾನಿಗಳುಅಂಕಿ-ಅಂಶಗಳ ಬಜೆಟ್‌, ದಿಕ್ಕು ದಿಸೆಯಿಲ್ಲದ ಆಯವ್ಯಯ’: ಅರವಿಂದ ಬೆಲ್ಲದ