K2kannadanews.in
https://youtube.com/shorts/UouFaBMsGbs?si=CiS7FHWzuwGUcFj3
Heavy rain ರಾಯಚೂರು : ರಾಯಚೂರು ನಗರ ಮತ್ತು ಕೆಲ ಗ್ರಾಮಾಂತರ ಭಾಗದಲ್ಲಿ ಕಳೆದ ಅರ್ಧ ಗಂಟೆಯಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನಗರವಾಸಿಗಳು ಕೂಲ್ ಆಗಿದ್ದಾರೆ.
ರಾಯಚೂರು ನಗರ ಮತ್ತು ಕೆಲ ಗ್ರಾಮಾಂತರ ಪ್ರದೇಶಗಳಲ್ಲಿ ಭಾರಿ ಬಿಸಿಲಿನಿಂದಾಗಿ ಜನ ಕಂಗೆಟ್ಟಿದ್ದರು. ಈ ವೇಳೆ ಕಳೆದ ಅರ್ಧ ಗಂಟೆಯಿಂದ ಸುರಿಯುತ್ತಿರುವ ಬಾರಿ ಗಾಳಿ ಮತ್ತು ಗುಡುಗು ಸಮೇತ ಮಳೆಯಿಂದಾಗಿ ರಾಯಚೂರು ನಗರದ ಸೇರಿದಂತೆ ಗ್ರಾಮಾಂತರ ಭಾಗಗಳಿಗೆ ಮಳೆರಾಯ ತಂಪೆರದಿದ್ದಾನೆ.
https://youtu.be/paQaEloJ3Jw?si=BbBceQkEGeX-j3dC
ಇನ್ನು ಗ್ರಾಮಾಂತರ ಭಾಗದಲ್ಲಿ ಮಳೆಯಿಂದಾಗಿ ರೈತರ ಮುಖದಲ್ಲಿ ಖುಷಿ ಅರಳಿದೆ. ಹತ್ತಿ, ಮೆಣಸಿನ ಕಾಯಿ, ತೊಗರಿ ಸೇರಿದಂತೆ ಹಲವು ಬೆಳೆಗಳಿಗೆ ಇದೀಗ ನೀರಿನ ಅವಶ್ಯಕತೆ ಇತ್ತು. ಮಳೆಯಿಂದಾಗಿ ಬೆಳೆಗಳಿಗೆ ನೀರು ಸಿಕ್ಕಂತಾಗಿದೆ.