ಹುಡುಗಿಯರು ಮುಟ್ಟಿನ ಸಮಸ್ಯೆಗಳಿಗೆ ಹೋಮಿಯೋಪತಿಯಲ್ಲಿ ಇದೆಯಂತೆ ಪರಿಹಾರ.!
ನವದೆಹಲಿ: ದೇಶದಲ್ಲಿ ಸುಮಾರು ಶೇ 80ರಷ್ಟು ಹದಿಹರೆಯದ ಹುಡುಗಿಯರು ಮುಟ್ಟಿನ ಸಮಸ್ಯೆಗಳಿಂದಾಗಿ ದೈನಂದಿನ ಚಟುವಟಿಕೆಗಳಲ್ಲಿ ಅಡಚಣೆಗಳನ್ನು ಅನುಭವಿಸುತ್ತಿದ್ದಾರೆ. ಶೇ 30ರಷ್ಟು ಮಂದಿ ಶಾಲೆಯನ್ನು ತಪ್ಪಿಸುತ್ತಿದ್ದಾರೆ ಎಂದು ಕೇಂದ್ರೀಯ ಹೋಮಿಯೋಪತಿ ಸಂಶೋಧನಾ ಮಂಡಳಿಯ ನೇತೃತ್ವದಲ್ಲಿ ನಡೆದ ಸಂಶೋಧನೆಗಳು ತಿಳಿಸಿವೆ.
ಏಪ್ರಿಲ್ 10ರಂದು ವಿಶ್ವ ಹೋಮಿಯೋಪತಿ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ಥೀಮ್ 'ಸುಸ್ಥಿರ ಆರೋಗ್ಯಕ್ಕಾಗಿ ಹೋಮಿಯೋಪತಿ' (Homoeopathy for Sustainable Health) ಎಂಬುವುದಾಗಿದೆ. ಈ ದಿನದಂದು ಮಹಿಳೆಯರು ಮತ್ತು ಹದಿಹರೆಯದವರಲ್ಲಿ ಮುಟ್ಟಿನ ಆರೋಗ್ಯ ಪರಿಸ್ಥಿತಿಗಳನ್ನು ನಿರ್ವಹಿಸಲು ಸಮಗ್ರ ಮತ್ತು ದೀರ್ಘಾವಧಿಯ ವಿಧಾನಗಳತ್ತ ಗಮನಹರಿಸಲಾಗುತ್ತಿದೆ.
ಕೇಂದ್ರ ಆಯುಷ್ ಸಚಿವ ಪ್ರತಾಪ್ರಾವ್ ಜಾಧವ್ ಮಾತನಾಡಿ, 'ಮುಟ್ಟಿನ ಆರೋಗ್ಯವು ಮಹಿಳೆಯರ ಒಟ್ಟಾರೆ ಯೋಗಕ್ಷೇಮ ಮತ್ತು ಘನತೆಗೆ ಮುಖ್ಯವಾಗಿದೆ ಎಂದು ಹೇಳಿದ್ದಾರೆ. ಸಮಗ್ರ ಆರೋಗ್ಯದ ರಕ್ಷಣೆಗೆ, ವಿಶೇಷವಾಗಿ ದೀರ್ಘಕಾಲೀನ ನಿರ್ವಹಣೆಯ ಅಗತ್ಯವಿರುವ ಪರಿಸ್ಥಿತಿಗಳಿಗೆ (ಕಾಯಿಲೆ) ಹೋಮಿಯೋಪತಿ ಸುರಕ್ಷಿತ ಮತ್ತು ಪರಿಣಾಮಕಾರಿ ವಿಧಾನವಾಗಿದೆ' ಎಂದು ಅವರು ತಿಳಿಸಿದ್ದಾರೆ.
ಮುಟ್ಟಿನ ಆರೋಗ್ಯ ಸುಧಾರಿಸಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಆದಾಗ್ಯೂ, ವಿಶೇಷವಾಗಿ ಹದಿಹರೆಯದವರಲ್ಲಿ ಅಸ್ವಸ್ಥತೆಗೆ ಸಕಾಲಿಕ ಚಿಕಿತ್ಸೆ ಮತ್ತು ನಿರಂತರ ಆರೈಕೆಯಲ್ಲಿ ಸವಾಲುಗಳು ಉಳಿದಿವೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.