ಹೃದಯಾಘಾತ ಹಾಗೂ ಪಾರ್ಶ್ವವಾಯು ನಿಂದ ಪಾರಾಗಲು ಎಷ್ಟು ನಿಮಿಷ ವ್ಯಾಯಾಮ
ಬೆಂಗಳೂರು: ಇಂದಿನ ವೇಗದ ಬದುಕಿನಲ್ಲಿ ಹೃದಯಾಘಾತ (Heart Attack) ಮತ್ತು ಪಾರ್ಶ್ವವಾಯು (Stroke) ಸಂಭವಿಸುವುದು ಸಾಮಾನ್ಯವಾಗಿದೆ. ಆದರೆ, ಇವುಗಳಿಂದ ಪಾರಾಗಲು ನೀವು ಕಠಿಣ ವ್ಯಾಯಾಮ ಅಥವಾ ಕಟ್ಟುನಿಟ್ಟಿನ ಆಹಾರ ಕ್ರಮವನ್ನೇ ಪಾಲಿಸಬೇಕಿಲ್ಲ ನಿಮ್ಮ ದಿನನಿತ್ಯದ ಜೀವನದಲ್ಲಿ ಮಾಡುವ ಅತ್ಯಂತ ಸಣ್ಣ ಬದಲಾವಣೆಗಳು ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡಬಲ್ಲವು ಎಂದು ಸಿಡ್ನಿ ವಿಶ್ವವಿದ್ಯಾಲಯದ ಇತ್ತೀಚಿನ ಸಂಶೋಧನೆ ತಿಳಿಸಿದೆ.
ಸಂಶೋಧನೆ ಹೇಳುವುದೇನು?
ಸುಮಾರು 53,242 ಜನರ ಮೇಲೆ 8 ವರ್ಷಗಳ ಕಾಲ ನಡೆಸಿದ ಈ ಅಧ್ಯಯನದಲ್ಲಿ ಆಶ್ಚರ್ಯಕರ ವಿಷಯಗಳು ಹೊರಬಂದಿವೆ. ದಿನಕ್ಕೆ ಕೇವಲ ಕೆಲವು ನಿಮಿಷಗಳ ಬದಲಾವಣೆಯು ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಶೇ. 10 ರಷ್ಟು ಕಡಿಮೆ ಮಾಡುತ್ತದೆ.
ಹೃದಯವನ್ನು ಸುಸ್ಥಿತಿಯಲ್ಲಿಡಲು ನೀವು ಮಾಡಬೇಕಾದ್ದು ಇಷ್ಟೇ:
ಕೇವಲ 11 ನಿಮಿಷಗಳ ಹೆಚ್ಚುವರಿ ನಿದ್ರೆ:
ದಿನನಿತ್ಯದ ನಿದ್ರೆಯ ಜೊತೆಗೆ ಕೇವಲ 11 ನಿಮಿಷಗಳ ಕಾಲ ಹೆಚ್ಚಿನ ನಿದ್ರೆ ಮಾಡುವುದು ನಿಮ್ಮ ಹೃದಯದ ಒತ್ತಡವನ್ನು ಕಡಿಮೆ ಮಾಡುತ್ತದೆ. ಸರಿಯಾದ ನಿದ್ರೆ ಹೃದಯದ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.
5 ನಿಮಿಷಗಳ ಚಟುವಟಿಕೆ:
ನೀವು ಜಿಮ್ಗೆ ಹೋಗಲು ಸಮಯವಿಲ್ಲದಿದ್ದರೆ ಚಿಂತಿಸಬೇಡಿ. ದಿನಕ್ಕೆ ಕೇವಲ 4.5 ರಿಂದ 5 ನಿಮಿಷಗಳ ಕಾಲ ವೇಗವಾಗಿ ನಡೆಯುವುದು (Brisk Walk), ಮೆಟ್ಟಿಲು ಹತ್ತುವುದು ಅಥವಾ ಮನೆಯ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ಹೃದಯಕ್ಕೆ ಉತ್ತಮ ವ್ಯಾಯಾಮ ನೀಡುತ್ತದೆ.
ಕಾಲು ಕಪ್ ತರಕಾರಿ ಹೆಚ್ಚಿಸಿ:
ನಿಮ್ಮ ಊಟದಲ್ಲಿ ಪ್ರತಿದಿನ ಕೇವಲ ಒಂದು ಸಣ್ಣ ಕಪ್ನಷ್ಟು ಹೆಚ್ಚುವರಿ ತರಕಾರಿಗಳನ್ನು ಸೇರಿಸಿಕೊಳ್ಳಿ. ಹಸಿರು ತರಕಾರಿಗಳಲ್ಲಿರುವ ನಾರಿನಂಶ ಮತ್ತು ಜೀವಸತ್ವಗಳು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತವೆ.
ಸಿಡ್ನಿ ವಿಶ್ವವಿದ್ಯಾಲಯದ ಸಂಶೋಧಕರು ತಿಳಿಸುವಂತೆ, ಈ ಮೇಲಿನ ಮೂರು ಸಣ್ಣ ಬದಲಾವಣೆಗಳನ್ನು ಒಟ್ಟಾಗಿ ಮಾಡುವುದರಿಂದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಶೇಕಡಾ 10 ರಷ್ಟು ಕಡಿಮೆ ಮಾಡಬಹುದು. ಒಂದು ವೇಳೆ ನೀವು ಉತ್ತಮ ಆಹಾರ, 8 ಗಂಟೆ ನಿದ್ರೆ ಮತ್ತು 40 ನಿಮಿಷಗಳ ವ್ಯಾಯಾಮ ಮಾಡಿದರೆ ಈ ಅಪಾಯವನ್ನು ಶೇ. 57 ರಷ್ಟು ಕಡಿಮೆ ಮಾಡಬಹುದು
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.