LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ರೈತರಿಗೆ ಮುಖ್ಯ ಮಾಹಿತಿ: ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು ಹರಿಸುವ ಅವಧಿ 17ಕ್ಕೆ ಅಂತ್ಯ

ದಾವಣಗೆರೆ: ಭದ್ರಾ ಜಲಾಶಯ ಅಚ್ಚುಕಟ್ಟು ಪ್ರದೇಶಗಳಿಗೆ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು ಹರಿಸುವ ಅವಧಿ ವಿಸ್ತರಣೆ 17 ಕ್ಕೆ ಅಂತ್ಯವಾಗಲಿದೆ.

2025-26ನೇ ಸಾಲಿನ ಬೇಸಿಗೆ ಹಂಗಾಮಿನ ಬೆಳೆಗಳಿಗಾಗಿ ನೀರಾವರಿ ಸಲಹಾ ಸಮಿತಿಯ ತೀರ್ಮಾನದಂತೆ ಭದ್ರಾ ಜಲಾಶಯದ ಬಲದಂಡೆ ಮತ್ತು ಎಡದಂಡೆ ಕಾಲುವೆಗಳಿಗೆ ನೀರನ್ನು ಹರಿಸಲಾಗುತ್ತಿತ್ತು.

ಕಾಲುವೆಗಳ ತುರ್ತು ದುರಸ್ಥಿ ಕಾರ್ಯದಿಂದಾಗಿ ಈ ಹಿಂದೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಸದರಿ ಕಡಿತಗೊಂಡ ಅವಧಿಯ ಬೆಳೆಗಳಿಗೆ ನೀರನ್ನು ಪೂರೈಸಲು, ಬೇಸಿಗೆ ಬೆಳೆಗಾಗಿ ಮೀಸಲಿಟ್ಟ ನೀರಿನ ಮಿತಿಯೊಳಗೆ ನೀರು ಹರಿಸುವ ಅವಧಿಯನ್ನು ಮೇ 17, 2026ರವರೆಗೆ ವಿಸ್ತರಿಸಲಾಗಿತ್ತು.

ಭದ್ರಾ ಜಲಾಶಯದ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಲ್ಲಿ ಹರಿಸುತ್ತಿರುವ ನೀರನ್ನು ಮೇ 17, 2026ರ ಮಧ್ಯರಾತ್ರಿಯ ನಂತರ ಅಧಿಕೃತವಾಗಿ ನಿಲ್ಲಿಸಲಾಗುವುದು. ಪ್ರಸ್ತುತ ಜಲಾಶಯದಲ್ಲಿ ಕುಡಿಯುವ ನೀರಿನ ಅಗತ್ಯತೆಗಾಗಿ ಮಾತ್ರ ನೀರನ್ನು ಶೇಖರಿಸಿಡಲಾಗಿದ್ದು, ಬೆಳೆಗಳಿಗೆ ಹೆಚ್ಚುವರಿಯಾಗಿ ನೀರನ್ನು ಹರಿಸಲು ಜಲಾಶಯದಲ್ಲಿ ನೀರಿನ ಲಭ್ಯತೆ ಇಲ್ಲದಿರುವುದರಿಂದ ರೈತರು ಈ ವಿಷಯವನ್ನು ಗಮನಿಸಬೇಕೆಂದು ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು ಹಾಗೂ ಸದಸ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲೆಗಳಲ್ಲಿ ಹಿಜಾಬ್ ಧರಿಸಬಹುದಾದರೆ ಹಿಂದೂಗಳಿಗೆ ಕೇಸರಿ ಶಾಲು ಹಾಕಲೂ ಅವಕಾಶ ನೀಡಬೇಕು: ಯತ್ನಾಳ್ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್: ಟಿಕೆಟ್ ಕನ್ಫರ್ಮ್ ಆಗುತ್ತೋ ಇಲ್ಲವೋ ಅಂತ ಬುಕಿಂಗ್‌ಗೂ ಮುನ್ನವೇ ಹೇಳುತ್ತೆ ಈ ಹೊಸ ಆ್ಯಪ್!ವರ್ಗಾವಣೆ ನಿರೀಕ್ಷೆಯಲ್ಲಿದ್ದ ಪದವಿ ಕಾಲೇಜು ಬೋಧಕರಿಗೆ ಗುಡ್ ನ್ಯೂಸ್: ವೇಳಾಪಟ್ಟಿ ಪ್ರಕಟಶೇ. 12.5 ರಷ್ಟು ವೇತನ ಹೆಚ್ಚಳ ಒಪ್ಪದ ಸಾರಿಗೆ ನೌಕರರು, ಮೇ 20ರಿಂದ ಮುಷ್ಕರದ ಎಚ್ಚರಿಕೆBIG NEWS : ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು: ಸರ್ಕಾರದಿಂದ ಮಹತ್ವದ ಆದೇಶALERT : ಸಾರ್ವಜನಿಕರೇ ಎಚ್ಚರ : ಶೇರು ಮಾರುಕಟ್ಟೆ ಹೂಡಿಕೆ ಹೆಸರಲ್ಲಿ ಉದ್ಯಮಿಗೆ 16 ಕೋಟಿ ರೂ. ವಂಚನೆ!ಮೇ 18 ರಿಂದ SSLC ಪರೀಕ್ಷೆ-2 ಆರಂಭ ; ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆGOOD NEWS : ಉದ್ಯೋಗಿಗಳಿಗೆ ಗುಡ್ ನ್ಯೂಸ್ ; ಬೆಂಗಳೂರಿನ ಕೆಲ ಕಂಪನಿಗಳಿಂದ ‘ವರ್ಕ್ ಫ್ರಮ್ ಹೋಮ್’ ನೀಡಲು ಚಿಂತನೆ.!ಬೈಕ್ ಬಾಕ್ಸ್ ನಲ್ಲಿದ್ದ 1 ಲಕ್ಷ ಹಣ ಕದ್ದು ಪರಾರಿಯಾದ ಖದೀಮರು: ಪೊಲೀಸ್ ಠಾಣೆ ಎದುರೇ ಘಟನೆBIG NEWS : ಬೆಂಗಳೂರಿನ ರೈಲ್ವೇ ನಿಲ್ದಾಣದಲ್ಲಿ 24 ಮಕ್ಕಳ ರಕ್ಷಣೆ : ಮದರಸಾದ ನರಕಯಾತನೆ ಬಿಚ್ಚಿಟ್ಟ ಬಿಹಾರದ ಬಾಲಕರು.!