ಮೈಸೂರು: ಮೈಸೂರು ವಿಭಾಗದ ಶ್ರೀವಾಗಿಲು ಮತ್ತು ಯಡಕುಮರಿ ರೈಲು ನಿಲ್ದಾಣಗಳ ನಡುವೆ ಹಳಿ ನಿರ್ವಹಣೆ ಮತ್ತು ಎಂಜಿನಿಯರಿಂಗ್ ಕಾಮಗಾರಿಗಳಿಗಾಗಿ ಲೈನ್ ಬ್ಲಾಕ್ ಇರುವುದರಿಂದ, ಈ ಕೆಳಗಿನ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.
ರೈಲು ಸಂಖ್ಯೆ 16575 ಯಶವಂತಪುರ – ಮಂಗಳೂರು ಜಂಕ್ಷನ್ ಟ್ರೈ-ವೀಕ್ಲಿ ಎಕ್ಸ್’ಪ್ರೆಸ್ ರೈಲು ದಿನಾಂಕ 04.10.2026, 06.10.2026, 08.10.2026, 11.10.2026, 13.10.2026, 15.10.2026, 22.10.2026, 25.10.2026, 27.10.2026, 29.10.2026, 01.11.2026 ಮತ್ತು 03.11.2026 ರಂದು (ಒಟ್ಟು 12 ದಿನಗಳು) ರದ್ದುಗೊಳ್ಳಲಿದೆ, ಅದೇ ರೀತಿ, ರೈಲು ಸಂಖ್ಯೆ 16576 ಮಂಗಳೂರು ಜಂಕ್ಷನ್ – ಯಶವಂತಪುರ ಟ್ರೈ-ವೀಕ್ಲಿ ಎಕ್ಸ್’ಪ್ರೆಸ್ ರೈಲು ದಿನಾಂಕ 05.10.2026, 07.10.2026, 09.10.2026, 12.10.2026, 14.10.2026, 16.10.2026, 23.10.2026, 26.10.2026, 28.10.2026, 30.10.2026, 02.11.2026 ಮತ್ತು 04.11.2026 ರಂದು (ಒಟ್ಟು 12 ದಿನಗಳು) ರದ್ದುಗೊಳ್ಳಲಿದೆ.
ರೈಲು ಸಂಖ್ಯೆ 16515 ಯಶವಂತಪುರ – ಕಾರವಾರ ಟ್ರೈ-ವೀಕ್ಲಿ ಎಕ್ಸ್’ಪ್ರೆಸ್ ರೈಲು ದಿನಾಂಕ 05.10.2026, 07.10.2026, 09.10.2026, 12.10.2026, 14.10.2026, 21.10.2026, 23.10.2026, 26.10.2026, 28.10.2026, 30.10.2026 ಮತ್ತು 02.11.2026 ರಂದು (ಒಟ್ಟು 11 ದಿನಗಳು) ರದ್ದುಗೊಳ್ಳಲಿದೆ. ಹಾಗೆಯೇ, ರೈಲು ಸಂಖ್ಯೆ 16516 ಕಾರವಾರ – ಯಶವಂತಪುರ ಟ್ರೈ-ವೀಕ್ಲಿ ಎಕ್ಸ್’ಪ್ರೆಸ್ ರೈಲು ದಿನಾಂಕ 06.10.2026, 08.10.2026, 10.10.2026, 13.10.2026, 15.10.2026, 22.10.2026, 24.10.2026, 27.10.2026, 29.10.2026, 31.10.2026 ಮತ್ತು 03.11.2026 ರಂದು (ಒಟ್ಟು 11 ದಿನಗಳು) ರದ್ದುಗೊಳ್ಳಲಿದೆ.
ರೈಲು ಸಂಖ್ಯೆ 16539 ಯಶವಂತಪುರ – ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್’ಪ್ರೆಸ್ ರೈಲು ದಿನಾಂಕ 10.10.2026, 24.10.2026 ಮತ್ತು 31.10.2026 (03 ದಿನಗಳು) ರಂದು ರದ್ದುಗೊಳ್ಳಲಿದೆ, ಅದೇ ರೀತಿ, ರೈಲು ಸಂಖ್ಯೆ 16540 ಮಂಗಳೂರು ಜಂಕ್ಷನ್ – ಯಶವಂತಪುರ ಸಾಪ್ತಾಹಿಕ ಎಕ್ಸ್’ಪ್ರೆಸ್ ರೈಲು ದಿನಾಂಕ 11.10.2026, 25.10.2026 ಮತ್ತು 01.11.2026 (03 ದಿನಗಳು) ರಂದು ರದ್ದುಗೊಳ್ಳಲಿದೆ.