LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಶೇ. 100ರಷ್ಟು ಸುಂಕ ಕಡಿತಕ್ಕೆ ಭಾರತ ಸರ್ಕಾರ ಒಪ್ಪಿಗೆ: ಶೀಘ್ರದಲ್ಲೇ ವ್ಯಾಪಾರ ಒಪ್ಪಂದ- ಟ್ರಂಪ್

ವಾಷಿಂಗ್ಟನ್ : ಅಮೆರಿಕದ ವಸ್ತುಗಳಿಗೆ ವಿಧಿಸುತ್ತಿದ್ದ ಸುಂಕವನ್ನು ಶೇ100ರಷ್ಟು ಕಡಿತ ಮಾಡಲು ಭಾರತ ಸರ್ಕಾರ ಒಪ್ಪಿಕೊಂಡಿದ್ದು, ಶೀಘ್ರದಲ್ಲಿ ವಾಷಿಂಗ್ಟನ್ ಮತ್ತು ನವದೆಹಲಿ ನಡುವೆ ವ್ಯಾಪಾರ ಒಪ್ಪಂದ ನೆರವೇರಲಿದೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಹಿತಿ ನೀಡಿದ್ದಾರೆ.

ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಅವರು, 'ಜಗತ್ತಿನಲ್ಲೇ ಭಾರತವು ಅತಿ ಹೆಚ್ಚು ಸುಂಕ ವಿಧಿಸುವ ರಾಷ್ಟ್ರ. ಈ ವ್ಯಾಪಾರ ಒಪ್ಪಂದಕ್ಕೆ ನಾನು ಅವಸರ ಮಾಡುವುದಿಲ್ಲ. ದಕ್ಷಿಣ ಕೊರಿಯಾ ವ್ಯಾಪಾರ ಒಪ್ಪಂದಕ್ಕೆ ಮುಂದಾಗಿದೆ. ಆದರೆ ನಾನು ಎಲ್ಲರೊಂದಿಗೂ ಒಪ್ಪಂದ ಮಾಡಿಕೊಳ್ಳುವುದಿಲ್ಲ. ನಮ್ಮ ಬಳಿ 150 ರಾಷ್ಟ್ರಗಳಿವೆ. ಎಲ್ಲರನ್ನೂ ಭೇಟಿಯಾಗಲು ಸಾಧ್ಯವಿಲ್ಲ. ಅದಕ್ಕೊಂದು ಮಿತಿ ಹೇರುತ್ತೇನೆ. ಕೆಲವು ಒಪ್ಪಂದ ಮಾಡಿಕೊಳ್ಳುತ್ತೇನೆ' ಎಂದಿದ್ದಾರೆ.

ಅಮೆರಿಕದ ವಸ್ತುಗಳಿಗೆ ಭಾರತವು ಸುಂಕ ಕಡಿತಕ್ಕೆ ಮುಂದಾಗಿದೆ ಎಂದು ಟ್ರಂಪ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು, 'ಇವು ಸಂಕೀರ್ಣ ಮಾತುಕತೆಗಳು. ಎಲ್ಲವೂ ಆಗುವವರೆಗೆ ಏನನ್ನೂ ನಿರ್ಧರಿಸಲಾಗುವುದಿಲ್ಲ. ಯಾವುದೇ ವ್ಯಾಪಾರ ಒಪ್ಪಂದವು ಪರಸ್ಪರ ಲಾಭದಾಯಕವಾಗಿರಬೇಕು. ವ್ಯಾಪಾರ ಒಪ್ಪಂದದಿಂದ ನಮ್ಮ ನಿರೀಕ್ಷೆಯೂ ಅದೇ ಆಗಿದೆ' ಎಂದು ಸ್ಪಷ್ಟನೆ ನೀಡಿದರು.

ಇನ್ನು ವ್ಯಾಪಾರ ಒಪ್ಪಂದದ ಮಾತುಕತೆ ನಡೆಯುತ್ತಿದ್ದು, ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಸದ್ಯ ವಾಷಿಂಗ್ಟನ್‌ನಲ್ಲಿದ್ದಾರೆ. ಅವರು ಅಲ್ಲಿನ ವಾಣಿಜ್ಯ ಕಾರ್ಯದರ್ಶಿ ಹಾವರ್ಡ್ ಲುಟ್‌ನಿಕ್ ಮತ್ತು ವ್ಯಾಪಾರ ಕ್ಷೇತ್ರದ ಪ್ರತಿನಿಧಿ ಜೇಮೀಸನ್ ಗ್ರೀರ್ ಅವರೊಂದಿಗೆ ಚರ್ಚಿಸುವ ಸಾಧ್ಯತೆಯಿದೆ. ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದಲ್ಲಿ ಜವಳಿ, ಆಭರಣ, ಬೆಲೆಬಾಳುವ ರತ್ನಗಳು, ವಸ್ತ್ರ, ಪ್ಲಾಸ್ಟಿಕ್, ರಾಸಾಯನಿಕ, ಸೀಗಡಿ, ಎಣ್ಣೆ ಕಾಳುಗಳು, ದ್ರಾಕ್ಷಿ, ಬಾಳೆಹಣ್ಣು ಕ್ಷೇತ್ರಗಳಲ್ಲಿ ಒಪ್ಪಂದ ನಡೆಸುವ ನಿರೀಕ್ಷೆ ಇದೆ.

ಇನ್ನೊಂದೆಡೆ ಕೈಗಾರಿಕಾ ಸಾಮಗ್ರಿಗಳು, ಇವಿ ವಾಹನಗಳನ್ನು ಒಳಗೊಂಡು ಆಟೋಮೊಬೈಲ್, ವೈನ್‌ಗಳು, ಪೆಟ್ರೋಕೆಮಿಕಲ್ ಉತ್ಪನ್ನ, ಹೈನು ಪದಾರ್ಥ, ಸೇಬು ಮತ್ತು ಒಣ ಹಣ್ಣುಗಳ ಸಹಿತ ಕೃಷಿ ಉತ್ಪನ್ನಗಳ ಮೇಲಿನ ಸುಂಕವನ್ನು ಕಡಿತಗೊಳಿಸಬೇಕು ಎಂಬುದು ಅಮೆರಿಕದ ಬೇಡಿಕೆಯಾಗಿದೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
9 ತಿಂಗಳ ಅಸಾಧಾರಣ ಬಾಹ್ಯಾಕಾಶ ಪಯಣದ ಬಳಿಕ ಸುನೀತಾ ವಿಲಿಯಮ್ಸ್ ನಾಸಾದಿಂದ ನಿವೃತ್ತಿಜೈಪುರ ಬಳಿ ತಪ್ಪಿದ ದೊಡ್ಡ ರೈಲು ಅಪಘಾತಉದ್ಘಾಟನೆಗೂ ಮುನ್ನವೇ ಕುಸಿದ 21 ಕೋಟಿ ವೆಚ್ಚದ ನೀರಿನ ಟ್ಯಾಂಕ್!ಐಎಎಸ್ ಸುಲೋಚನಾ ಮೀನಾ ಯಶಸ್ಸಿನ ಕಥನಕಲ್ಲೇಟಿಗಿಂತ ಕಣ್ಣೇಟು ಜೋರಂತೆ ಮನೆ ಕಟ್ಟಡಕ್ಕೆ ದೃಷ್ಟಿ, ಅದರ ಪರಿಹಾರಕ್ಕಾಗಿ ಕೆಲವೊಂದು ಇಲ್ಲಿ ಸೃಷ್ಟಿ.ಈ ಕಾರಣಕ್ಕೆ ಜ್ಞಾನಭಾರತಿ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಎಂ.ಎಸ್. ರವಿ ಅಮಾನತ್ತು.!ಜಿಲ್ಲೆಯ ಸುಸ್ಥಿರ ಅಭಿವೃದ್ಧಿಗೆ ನಿಖರ ಹಾಗೂ ವಾಸ್ತವ ಅಂಕಿ ಅಂಶಗಳ ಕ್ರೋಢೀಕರಣ ಅಗತ್ಯನೀವುಗಳು ಯಾವ ಪಕ್ಷದಲ್ಲಿಯಾದರೂ ಇರಿ ಸಮಾಜಕ್ಕೆ ಧಕ್ಕೆ ಬಂದಾಗ ಮಾತ್ರ ಒಂದಾಗಿ: ಸಚಿವ ಕೆ.ಎಚ್.ಮುನಿಯಪ್ಪಸಮಾನತೆಗೆ ಪೂರಕವಾಗಿ ಗ್ಯಾರಂಟಿ ಯೋಜನೆಗಳು ಜಾರಿ:  ಶಾಸಕ ಟಿ.ರಘುಮೂರ್ತಿ..!ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 21-01-2026.!