
ಹೊಸ ಮಳಿಗೆ ಉದ್ಘಾಟನೆಯನ್ನು ಇಂದ್ರಿಯ, ಆದಿತ್ಯ ಬಿರ್ಲಾ ಜ್ಯುವೆಲ್ಲರಿಯ ನಿರ್ದೇಶಕ ದಿಲಿಪ್ ಗೌರ್ ನೆರವೇರಿಸಿ ಮಾತನಾಡಿದರು, ಭಾರತದಾದ್ಯಂತ ನಾವು ನಮ್ಮ ಅಸ್ತಿತ್ವವನ್ನು ಹೆಚ್ಚಿಸಿಕೊಳ್ಳುತ್ತಿರುವಂತಹ ಸಂದರ್ಭದಲ್ಲಿ 50 ಮಳಿಗೆಯನ್ನು ತಲುಪುವುದು ನಮಗೆ ಒಂದು ಅರ್ಥಪೂರ್ಣ ಮೈಲಿಗಲ್ಲಾಗಿದೆ. ಇದು, ಶಿಸ್ತಿನ, ಪ್ರಬಲ ಗ್ರಾಹಕ ವಿಶ್ವಾಸ ಹಾಗೂ ಒಂದು ಸ್ಪಷ್ಟ ಬ್ರ್ಯಾಂಡ್ ದೂರದೃಷ್ಟಿಯನ್ನು ಪ್ರತಿಫಲಿಸುತ್ತದೆ. ಈ ವಿಸ್ತರಣೆಯು ರಾಷ್ಟ್ರೀಯವಾಗಿ ಮೆಚ್ಚಿಕೊಂಡ ಆಭರಣ ಬ್ರ್ಯಾಂಡ್ ನಿರ್ಮಾಣ ಮಾಡಬೇಕೆನ್ನುವ ನಮ್ಮ ದೀರ್ಘಾವಧಿ ಬದ್ಧತೆಯನ್ನು ಎತ್ತಿತೋರಿಸುತ್ತದೆ. ಇಂದ್ರಿಯಾದ ಬೆಳವಣಿಗೆ ಕಥೆಯು, ಆದಿತ್ಯ ಬಿರ್ಲಾ ಗ್ರೂಪ್‍ನ ವಿಶ್ವಾಸ ಮತ್ತು ಪರಂಪರೆಯಿಂದ ಇನ್ನಷ್ಟು ಆಳವಾಗಿ ಬಲಗೊಂಡಿದೆ.
ಒಂದು ಶತಮಾನಕ್ಕಿಂತ ಹೆಚ್ಚಿನ ಕಾಲದಿಂದ ಗ್ರೂಪ್ ವಿಶ್ವಸನೀಯತೆ, ಆಡಳಿತ ಹಾಗೂ ದೀರ್ಘಾವಧಿ ಮೌಲ್ಯಸೃಷ್ಟಿಗೆ ಹೆಸರುವಾಸಿಯಾಗಿದೆ. ಈ ಗುಣಗಳು, ಇಂದ್ರಿಯಾದ ದ್ಯೇಯೋದ್ದೇಶವನ್ನು ಸಹಜವಾಗಿಯೇ ವಿಸ್ತರಿಸುತ್ತವೆ.

ಈ ಸಾಧನೆಯು, ಇಂದ್ರಿಯಾದ ಕ್ಷಿಪ್ರಗತಿಯ ಬೆಳವಣಿಗೆ ಮತ್ತು ಪ್ರಮಾಣ ಸಾಮರ್ಥ್ಯಗಳನ್ನು ಎತ್ತಿ ತೋರಿಸುವುದು ಮಾತ್ರವಲ್ಲದೆ, ಸಂಘಟಿತ ಆಭರಣ ರೀಟೇಲ್ ಕ್ಷೇತ್ರದಲ್ಲಿ ಗ್ರಾಹಕರೊಡನೆ ಅದರ ಹೆಚ್ಚುತ್ತಿರುವ ಪ್ರತಿಧ್ವನಿಯನ್ನು ಪ್ರತಿಫಲಿಸಿ, ಆಭರಣಕ್ಕಾಗಿ ಇರುವ ಅಪಾರ ಪ್ರೀತಿಯನ್ನು ಆಚರಿಸಲು ಅದರ ಬದ್ಧತೆಯನ್ನೂ ಎತ್ತಿತೋರಿಸುತ್ತದೆ.
ಅಲ್ಪಾವಧಿಯಲ್ಲೇ ಇಂದ್ರಿಯ, ಭಾರತದ ಅತಿವೇಗವಾಗಿ ಬೆಳೆಯುತ್ತಿರುವ ಸೂಕ್ಷ್ಮ ಆಭರಣ ಬ್ರ್ಯಾಂಡ್‍ಗಳ ಪೈಕಿ ಒಂದಾಗಿ ಬೆಳೆದು ಕರಕುಶಲತೆ, ರೀಟೇಲ್ ಅತ್ಯುತ್ಕೃಷ್ಟತೆ ಮತ್ತು ಗ್ರಾಹಕ ಅನುಭವದ ಮೇಲೆ ತೀವ್ರ ಗಮನ ಕೇಂದ್ರೀಕರಣದೊಂದಿಗೆ ಮೆಟ್ರೋಗಳು ಮತ್ತು ಅತಿಸಂಭಾವ್ಯ ಮಾರುಕಟ್ಟೆಗಳಾದ್ಯಂತ ವಿಸ್ತಾರಗೊಳ್ಳುತ್ತಿದೆ. ಇಂದ್ರಿಯ ವಿಶೇಷ ಗುರುತಾಗಿ ತನ್ನ ಪ್ರಾದೇಶಿಕ ವಧು ಆಭರಣ ಸಂಗ್ರಹ ಮತ್ತು ವಿಶಿಷ್ಟ ವಿನ್ಯಾಸಗಳ ಮೂಲಕ ವಧುಗಳು ತಮ್ಮ ಕನಸಿನ ವಧುಗಳಾಗಿರುವುದಕ್ಕೆ ನೆರವಾಗುತ್ತಿದೆ.
ಇದು, ವರ್ಧಿತ ಮತ್ತು ತಲ್ಲೀನ ಆಭರಣ-ಖರೀದಿ ಅನುಭವ ಒದಗಿಸುತ್ತದೆ. ವಧು ಆಭರಣ, ತತ್ಕಾಲೀನ, ಹಬ್ಬ, ಮತ್ತು ಪ್ರತಿನಿತ್ಯ ಸಂಗ್ರಹಗಳಾದ್ಯಂತ ಸ್ವರ್ಣ, ಮತ್ತು ವಜ್ರಗಳಲ್ಲಿ 28,000ಕ್ಕಿಂತ ಹೆಚ್ಚು ಅತ್ಯಂತ ಎಚ್ಚರಿಕೆಯಿಂದ ರಚಿಸಲಾದ ವಿನ್ಯಾಸಗಳನ್ನು ಪ್ರದರ್ಶಿಸುವ ಈ ಸ್ಥಳವು, ಪ್ರತಿಯೊಂದು ರಚನೆಯ ಹಿಂದಿರುವ ಕಲಾವಂತಿಕೆಯನ್ನು ಆಚರಿಸುವ ವಿಶೇಷ ವಧು ಲೌಂಜ್ ಮತ್ತು ನಿಬದ್ಧ ಕಾರಿಗಾರ್ ಕೋಣೆ ಒಳಗೊಂಡಂತೆ, ಅತ್ಯಂತ ಆಲೋಚನಾಪೂರ್ವಕವಾಗಿ ನಿರ್ಮಾಣಮಾಡಲಾಗಿರುವ ವಲಯಗಳನ್ನು ಹೊಂದಿದೆ. ಸೂಕ್ಷ್ಮ ಸೌಂದರ್ಯವನ್ನು ಆನುಭವಿಕ ರೀಟೇಲ್‍ನೊಂದಿಗೆ ಮೇಳೈಸಿರುವ ಮಳಿಗೆಯು, ಇಂದ್ರಿಯಾದ ವಿನ್ಯಾಸ-ಮೊದಲು, ಅನುಭವ-ನಿರ್ದೇಶಿತ ಸಿದ್ಧಾಂತವನ್ನು ಒಳಗೊಂಡಿದೆ.

ಈ ಬಿಡುಗಡೆಯೊಂದಿಗೆ ಇಂದ್ರಿಯ, ರಾಷ್ಟ್ರವ್ಯಾಪಿಯಾಗಿ ಇರುವ ಪ್ರಮುಖ ಮೆಟ್ರೋಗಳು ಹಾಗೂ ಅತಿಬೆಳವಣಿಗೆಯ ಮಾರುಕಟ್ಟೆಗಳಾದ್ಯಂತ ತನ್ನ ಅಸ್ತಿತ್ವವನ್ನು ಇನ್ನಷ್ಟು ಬಲಪಡಿಸಿದೆ. ದೆಹಲಿ, ಮುಂಬೈ, ಹೈದರಾಬಾದ್, ಪುಣೆ, ಬೆಂಗಳೂರು, ಅಹಮದಾಬಾದ್, ಜೈಪುರ, ಪಾಟ್ನ, ಇಂದೋರ್ ಹಾಗೂ ಲಕ್ನೌ ಒಳಗೊಂಡಂತೆ ಅನೇಕ ಮುಂಚೂಣಿ ನಗರಗಳಲ್ಲಿ ಅನೇಕ ಮಳಿಗೆಗಳ ಕಾರ್ಯಾಚರಣೆ ಮಾಡುವ ಬ್ರ್ಯಾಂಡ್ ಪ್ರಮುಖ ನಗರಗಳಾದ್ಯಂತಲೂ ತನ್ನ ಬೆಳೆಯಿತ್ತಿರುವ ಅಸ್ತಿತ್ವದೊಂದಿಗೆ, ಆದಿತ್ಯ ಬಿರ್ಲಾ ಗ್ರೂಪ್‍ನ ಬೆಂಬಲ ಹೊಂದಿರುವ ಕ್ಷಿಪ್ರಗತಿಯ ಪ್ರಮಾಣೀಯ ರಾಷ್ಟ್ರೀಯ ಆಭರಣ ಬ್ರ್ಯಾಂಡ್ ಆಗಿ ಸ್ಥಾನವನ್ನು ಗಟ್ಟಿಗೊಳಿಸಿಕೊಳ್ಳುತ್ತಿದೆ.