LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಇನಿಯನ ಆತ್ಮ ಚಿತ್ರದ ಟ್ರೇಲರ್, ಹಾಡು ಬಿಡುಗಡೆ

ಬೆಂಗಳೂರು:   ಹೆಸರೇ ಹೇಳುವಂತೆ ಇನಿಯಾ ಅಂದ್ರೆ ಸ್ನೇಹಿತನ ಆತ್ಮ ಪಕ್ಕಾ RR ಸಿನೆಮಾ, ದೆವ್ವದ ಕಥೆ ಹೇಳುವ ಚಲನಚಿತ್ರವಾಗಿದ್ದು, ಚಿತ್ರದ ಟ್ರೇಲರ್   ಪ್ರೇಕ್ಷಕರಿಗೆ  ಭಯ ಹುಟ್ಟಿಸುವ ತುಣುಕುಗಳು ಸಿನೆಮಾ ಇದ್ದಾವೆ.


ಚಿನ್ನದ ನಾಡು ಕೋಲಾರ ಮೂಲದ ಹೊಸ ಪ್ರತಿಭೆಗಳೇ ಸೇರಿಕೊಂಡು ಸಿದ್ದಪಡಿಸಿರುವ *ಇನಿಯನ ಆತ್ಮ* ಚಿತ್ರದ ಟ್ರೇಲರ್ ಮತ್ತು ಹಾಡುಗಳನ್ನು ಉದ್ಯಮಿ ಪುಂಡರೀಕ ಮೂರ್ತಿ  ಲೋಕಾರ್ಪಣೆ ಮಾಡಿ ತಂಡಕ್ಕೆ ಶುಭ ಹಾರೈಸಿದರು.


ಶ್ರೀ ವಿನಾಯಕ ವೆಂಕಟೇಶ್ವರ ಫಿಲಂಸ್ ಅಡಿಯಲ್ಲಿ *ಬಿ.ಕಲಾವತಿ ಹಣ ಹೂಡಿ ನಿರ್ಮಾಣ* ಮಾಡಿದ್ದಾರೆ. *ಕಥೆ,ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಹಾಗೂ ನಿರ್ದೇಶನದ ಜವಬ್ದಾರಿಯನ್ನು ನರೇಶ್ ಸಿದ್ದಘಟ್ಟ ಸಂಪೂರ್ಣವಾಗಿ ವಹಿಸಿಕೊಂಡಿದ್ದಾರೆ.


ನಂತರ ಮಾತನಾಡಿದ ನಿರ್ದೇಶಕರು, ಏಳು ಜನ ಯುವ ತಂಡದವರು ಪ್ರವಾಸಕ್ಕೆಂದು ದೂರದ ಸ್ಥಳಕ್ಕೆ ಹೋಗುತ್ತಾರೆ. ಅಲ್ಲಿ ಇವರನ್ನೆ ಗುರಿಯಾಗಿಸಿಕೊಂಡು ಒಂದಷ್ಟು ಘಟನೆಗಳು ನಡೆಯುವುದು ಯಾಕೆ? ಕರ್ಮ ಯಾರನ್ನು ಬಿಡುವುದಿಲ್ಲ. ಪ್ರೇಯಸಿ ಆತ್ಮ ಹೇಗಾಗುತ್ತದೆ. ಇಂತಹ ಹಲವು ಸ್ವಾರಸ್ಯಕರ ವಿಷಯಗಳು ಹಾರರ್, ಥ್ರಿಲ್ಲರ್ ರೀತಿಯಲ್ಲಿ ನೋಡುಗರಿಗೆ ಕುತೂಹಲ ಮೂಡಿಸುತ್ತದೆ ಹಾಗೂ ಕಾಮಿಡಿಯಾಗಿ ಸನ್ನಿವೇಶಗಳು ಇರಲಿದೆ.


https://www.youtube.com/live/nK3FGft6r54?si=dW9aQohLT4b7uQCu

 ಕೋಲಾರ, ಚಿಕ್ಕಾಬಳ್ಳಾಪುರ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ರಿವೇಂಜ್ ತೀರಿಸಿಕೊಳ್ಳಲು  ಹರ ಸಾಹಸಪಡುತ್ತಿರುವ ಚಿತ್ರಣ ಸೆರೆ ಹಿಡಿಯಲಾಗಿದೆ. ನವೆಂಬರ್ 14ರಂದು ಸಿನೆಮಾ ಬೆಳ್ಳಿ ತೆರೆ ಮೇಲೆ ಬರಲಿದೆ. ಹಕವು ಅಡೆತಡೆಗಳ ಮಧ್ಯೆ 3-4 ವರ್ಷ ಸಿನೆಮಾ ನಿರ್ಮಾಣ ಮಾಡಲಾಗಿದೆ. ಸಿನೆಮಾ ಬಜೆಟ್ 50 ಲಕ್ಷ ಇಟ್ಟುಕೊಂಡಿದ್ದಾರೆ.


ಹೊಸ ಪರಿಚಯದಲ್ಲಿ ನಾಯಕ ಸಿದ್ದರ್ಥ್ ಹರಿ, ನಾಯಕಿ ನಿಶಾರೆಡ್ಡಿ. ಉಳಿದಂತೆ ಕೋಲಾರ ಸೂರ್ಯ, ರಾಜ್‌ವೀರ್, ಕಿಟ್ಟಿ ತಾಳಿಕೋಟೆ, ಆದಿಮಧುಗಿರಿ, ಸುಶ್ಮಿತ, ನಯನ ಮುಂತಾದವರು ನಟಿಸಿದ್ದಾರೆ. ಸಂಗೀತ ಎ.ಟಿ.ರವೀಶ್, ಛಾಯಾಗ್ರಹಣ ಚರಣ್‌ತೇಜ್, ಸಂಕಲನ ಪವನ್.ಬಿ.ಕೆ, ಸಾಹಸ ಥ್ರಿಲ್ಲರ್‌ಮಂಜು-ಕೌರವವೆಂಕಟೇಶ್, ನಿರ್ವಹಣೆ ಮೋಹನ್, ನೃತ್ಯ ಕರಿಯನಂದ,ಸನ್ ಸುನಿಲ್ ಅವರದಾಗಿದೆ. ಹೇಮಂತ್‌ಕುಮಾರ್, ರವಿಶಾಸ್ತ್ರೀ, ಸುರಭಿ ಭರದ್ವಾಜ್, ಸಚಿನ್ ಹಾಡುಗಳಿಗೆ ಕಂಠದಾನ ಮಾಡಿದ್ದಾರೆ. ಜಯದೇವ್ ಫಿಲಂಸ್ ಮುಖಾಂತರ ಚಿತ್ರವು ಟ್ರೇಲರ್ ಮೂಲಕ ಮನೆ ಮಾತಾಗಿದ್ದು , ಪ್ರದರ್ಶನ ಕಂಡ ನಂತ್ರ ಎಷ್ಟರಮಟ್ಟಿಗೆ ಜನ ಸ್ವೀಕಾರ ಮಾಡುತ್ತಾರೆ ಎಂಬುದನ್ನು ನ.14ರ ವರೆಗೆ ಕಾಯಲೇ ಬೇಕು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆಉಡಾನ್' ಯೋಜನೆ ಮೂಲಕ ಭಾರತದ ಭವಿಷ್ಯದ ವೈದ್ಯಕೀಯ ಕಾರ್ಯಪಡೆಯನ್ನು ನಿರ್ಮಿಸುವ ಬದ್ಧತೆಯನ್ನು ಸಾರಿದ ನಾರಾಯಣ ಹೆಲ್ತ್ಮೆಟ್ರೋ ಟಿಕೆಟ್ ದರ: ಕೇಂದ್ರದತ್ತ ಬೊಟ್ಟು ಮಾಡಿದ ರಾಜ್ಯ ಸರ್ಕಾರಕ್ಕೆ ದಾಖಲೆ ಸಮೇತ ಟಾಂಗ್ ಕೊಟ್ಟ ನಿಖಿಲ್ಬಿಜೆಪಿ ಜಾಹೀರಾತಿನ ವಿರುದ್ಧ ಎಎಪಿ ದೂರುಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ, 20 ವರ್ಷ ಕಳೆದರೂ ರೈತರಿಗೆ ಸಿಗತ ಪರಿಹಾರಕಾಂಗ್ರೆಸ್ ಪಕ್ಷ ಪಾರ್ಕಿಂಗ್ ವಿಚಾರದಲ್ಲಿ ಅಂದಾ ದರ್ಬಾರ್ ಮಾಡಲು ಹೊರಟಿದೆ