
ನಗರದ ಎಕೆ ಫೌಂಡೇಶನ್ ಅಧ್ಯಕ್ಷ, ಲೋಕಸಭಾ ಬಿಜೆಪಿ ಟಿಕೆಟ್ ಆಕಾಂಕ್ಷಿ ಕೆ.ಬಿ.ಕೊಟ್ರೇಶ್ ಹಾಗೂ ಕನ್ನಡ ಪರ ಸಂಘಟನೆಗಳು ಜಯದೇವ ವೃತ್ತದಲ್ಲಿ ಮೇಣದ ಬತ್ತಿ ಹಚ್ಚುವ ಮೂಲಕ ಕನ್ನಡಕ್ಕಾಗಿ ಮಡಿದವರ ಆತ್ಮಕ್ಕೆ ಶಾಂತಿ ಕೋರಿದರು.
ನಂತರ ಮಾತನಾಡಿದ ಎ.ಕೆ.ಫೌಂಡೇಷನ್ ಅಧ್ಯಕ್ಷ ಕೆ.ಬಿ.ಕೊಟ್ರೇಶ್, ಕನ್ನಡಿಗರಿಗೆ ಸುಮ್ಮನೆ ಸ್ವಾತಂತ್ರ್ಯ ಸಿಕ್ಕಿಲ್ಲ, ಇದರ ಹಿಂದೆ ಸಾಕಷ್ಟು ಜನರ ಶ್ರಮವಿದೆ..ಕನ್ನಡ ಭಾಷೆ ಉಳಿವಿಗಾಗಿ ಗೋಕಾಕ್ ಚಳವಳಿ, ನಾಡು, ನುಡಿಗಾಗಿ ತ್ಯಾಗ, ಬಲಿದಾನ ನೀಡಿದ ಅನೇಕ ರಾಜ ಮಹಾರಾಜರನ್ನು ನೆನಸಿಕೊಳ್ಳಬೇಕು. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದವರ ರಾಜ ಮಹಾರಾಜರನ್ನು ಈಗಲೂ ನೆನಸಿಕೊಳ್ಳಬೇಕು. ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ, ಕೃಷ್ಣದೇವರಾಯ, ಅನಕೃ, ಕುವೆಂಪು, ಬೇಂದ್ರೆ, ನಾಲ್ವಡಿ ಕೃಷ್ಣರಾಜ್ ಒಡೆಯರ್ ಕನ್ನಡಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದು ಅವರನ್ನು ನೆನೆಯುವುದಕ್ಕಾಗಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.
[video width="640" height="368" mp4="https://beestimes.com/wp-content/uploads/2023/11/VID-20231103-WA0022.mp4"][/video]
ಕನ್ನಡಿಗರ ವಿರುದ್ದ ಪರ ಭಾಷಿಗರು ಹೋರಾಟ ನಡೆಸಿದಾಗ ಕನ್ನಡ ಪರ ಸಂಘಟನೆಗಳು ವಿಭಿನ್ನ ಹೋರಾಟದಲ್ಲಿ ಧುಮುಕಿವೆ..ಇನ್ನೂ ನಾಡು, ನುಡಿಗಾಗಿ ಸೇವೆ ಸಲ್ಲಿಸಲು ಸದಾ ಸಿದ್ದನಿದ್ದೇನೆ. ಅಲ್ಲದೇ ಕನ್ನಡ ಶಾಲೆ ಉಳಿವಿಗಾಗಿ ನಿಮ್ಮೆಲ್ಲ ಸಹಕಾರ ಅಗತ್ಯ ಎಂದು ಇದೇ ಸಂದರ್ಭದಲ್ಲಿ ಹೇಳಿದರು. ಕಾರ್ಯಕ್ರಮದ ನಂತರ ಮಹಿಳೆಯರು ಸೇರಿದಂತೆ ಇತರರು ಮೇಣದಬತ್ತಿ ಹಚ್ಚುವ ಮೂಲಕ ಕನ್ನಡಕ್ಕಾಗಿ ಹೋರಾಡಿದವರು ಅಜರಾಮರು ಎಂದು ತೋರಿಸಿಕೊಟ್ಟರು.
ಈ ಸಂದರ್ಭದಲ್ಲಿ ಪ್ರಮುಖರಾದ ಅರುಣ್ ಕುಮಾರ್, ಗೋಪಾಲಗೌಡ, ಮಾರುತಿ ಸೇರಿದಂತೆ ಕನ್ನಡ ಪರ ಸಂಘಟನೆಗಳು ಭಾಗವಹಿಸಿದ್ದವು.