LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕುಂಡೇಸಿ ಮತ್ತೆ ಕೋಸುಡಿಯ "ವಲವಾರ" ಟ್ರೈಲರ್ ಸೂಪರ್

ಬೆಂಗಳೂರು: ಕುಂಡೇಸಿ...ಕೋಸುಡಿ , ಎಲ್ಲಾದ್ರು ಈ ಹೆಸರುಗಳನ್ನ ಕೇಳಿದಿರಾ, ಇಲ್ಲ ಅಲ್ವಾ, ಹೌದು ಎನ್ನುತ್ತಾರೆ ಸಿನಿ ಪ್ರಿಯರು. ಮಾರ್ಪ್ ಪ್ರೊಡಕ್ಷನ್ಸ್ ನಿರ್ಮಿಸಿರುವ "ವಲವಾರ" ಕನ್ನಡ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ.


ಈ ಚಿತ್ರದ ಟ್ರೈಲರ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು ಹೆಸರಿಗೆ ತಕ್ಕನಾಗಿ ಕೇಳಲು, ನೋಡಲು  ತುಂಬಾ ಮಜವಾಗಿದೆ. ಬಹುತೇಕ ಹೊಸ ಕಲಾವಿದರೇ ನಟಿಸಿರುವ ಈ ಚಿತ್ರಕ್ಕೆ ಸುತನ್ ಗೌಡ ನಿರ್ದೇಶಕರು, ಪಶ್ಚಿಮ ಘಟ್ಟದ ಪರ್ವತಗಳ ಸಾಲಿನ ನಡುವೆ ಇರುವ ಸುಂದರ ಹಳ್ಳಿಯಲ್ಲಿ ಒಂದೇ ದಿನದಲ್ಲಿ ನಡೆಯುವ ಕತೆ ಇದಾಗಿದ್ದು ಪ್ರೇಕ್ಷಕರಿಗೆ ಸಾಕಷ್ಟು ಮನರಂಜನೆಯ ನಿರೀಕ್ಷೆ ಹುಟ್ಟಿಸಿದೆ.


https://youtu.be/q95vVeOrjfQ?si=1ui8ghmI87odbMxM

ಕನ್ನಡ ಚಿತ್ರರಂಗದಲ್ಲಿ ಒಂದೊಳ್ಳೆಯ ಮಕ್ಕಳ ಸಿನಿಮಾ ಬಂದು ಹಲವು ವರ್ಷಗಳೇ ಕಳೆದಿದೆ, ವಲವಾರ ಆ ಬರ ನೀಗಿಸಲಿ ಎಂದು ಆಶಿಸುತ್ತಾ ನೀವಿನ್ನೂ ಚಿತ್ರದ ಟ್ರೈಲರ್ ನೋಡಿಲ್ಲವಾದರೆ ಯೂಟ್ಯೂಬ್ ನಲ್ಲಿದೆ ಹೋಗಿ ನೋಡಿ. ಟ್ರೇಲರ್ ರೋಚಕ ವಾಗಿರುವಾಗ ಸಿನೆಮಾ ಅದರ ದುಪ್ಪುಟ್ಟು ಚಂದವಾಗಿ ಮೂಡಿಬರುವುದರಲ್ಲಿ ಅನುಮಾನವೇ ಇಲ್ಲಾ.


ವಲವಾರ ಸಿನೆಮಾ ಅಂದರೆ Trelar ನೋಡಿದರೆ ಥಟ್ ಅಂತ ನಮ್ಮನ್ನು Tean Age ಗೆ ಕರೆದೊಯ್ಯುತ್ತದೆ. ಪುಟಾಣಿ ವಯಸ್ಸಿನ ಕಡೆಗೆ ಸೆಳೆಯುವುದರಲ್ಲಿ ಯಾವ ಡೌಟು ಇಲ್ಲ. ಅಂದು ತುಂಟಾಟದ ನೆನಪುಗಳು ಕಣ್ಣಿಗೆ ರಾಚುವಂತೆ ಭಾಸವಾಗುತ್ತವೆ. ಸಿನೆಮಾ ನೋಡುತ್ತಾ ನೋಡುತ್ತಾ ನಮ್ಮನ್ನು ನಾವು ಮರೆತು ಮಕ್ಕಳಾಗಿಬಿಡುತ್ತೇವೆ ಎನ್ನುವ ಹಾಗೆ ಕಾಣುತ್ತದೆ.


ಪ್ರಕೃತಿಯ ಸೌಂದರ್ಯದ ನಡುವೆ ದನ-ಕರುಗಳ ಮಧ್ಯೆ , ತುಂತುರು ಮಳೆಯಲ್ಲಿ ಮೈ ಮರೆತು ಮುಗ್ದ ಪ್ರಾಣಿಗಳ ನಡುವೆ ಅನ್ಯೊನ್ಯತೆ, ಪ್ರೀತಿ-ವಾತ್ಸಲ್ಯ, ಆಟ-ಪಾಟ ಎಲ್ಲವೂ ಒಂದೇ ಸೂರಿನಡಿ ಕಟ್ಟಿಕೊಡುವ ಕೆಲಸವನ್ನು ನಿರ್ದೇಶಕ ಮಾಡಿರುವುದು ಸಾಮಾಜಿಕ ಕಳಕಳಿಯನ್ನು ಎತ್ತಿ ತೋರಿಸುತ್ತದೆ.


ಇಂತಹ ಸಿನೆಮಾಗಳು ಮಾಯವಾಗುತ್ತಿದ್ದು ಮಕ್ಕಳಿಗೆ ಬೇಕಾಗುವ ಮನೋರಂಜನಾತ್ಮಕ ಚಲನಚಿತ್ರಗಳು ದೂರ ಸರಿಯುತ್ತಿವೆ. ಇತ್ತೀಚಿನ ಮಕ್ಕಳಿಗೆ ಬುದ್ದಿ ಶಕ್ತಿ, ಕೌಶಲ್ಯ, ಹಳೆಯ ನೆನಪುಗಳು, ಕುಟುಂಬದಲ್ಲಿ ಪ್ರೀತಿ ಮಮತೆ ಕಾಣಬಹುದು.


ಸಿನಿ ಪ್ರಿಯರು ಸೇರಿದಂತೆ ಮಕ್ಕಳು ವಿಶೇಷವಾಗಿ ಸಿನೆಮಾವನ್ನು ಕುಟುಂಬ ಸಮೇತರಾಗಿ ನೋಡಬೇಕು, ಅದಕ್ಕು ಮುನ್ನ ಸಿನೆಮಾ ಟ್ರೇಲರ್ ನೋಡಿ ನಾಡಿನ ಪ್ರತಿಯೊಬ್ಬನಿಗು ತಿಳಿಸುವ ಹಾಗೆ ಪಸರಿಸಬೇಕಾಗಿದೆ

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆಉಡಾನ್' ಯೋಜನೆ ಮೂಲಕ ಭಾರತದ ಭವಿಷ್ಯದ ವೈದ್ಯಕೀಯ ಕಾರ್ಯಪಡೆಯನ್ನು ನಿರ್ಮಿಸುವ ಬದ್ಧತೆಯನ್ನು ಸಾರಿದ ನಾರಾಯಣ ಹೆಲ್ತ್ಮೆಟ್ರೋ ಟಿಕೆಟ್ ದರ: ಕೇಂದ್ರದತ್ತ ಬೊಟ್ಟು ಮಾಡಿದ ರಾಜ್ಯ ಸರ್ಕಾರಕ್ಕೆ ದಾಖಲೆ ಸಮೇತ ಟಾಂಗ್ ಕೊಟ್ಟ ನಿಖಿಲ್ಬಿಜೆಪಿ ಜಾಹೀರಾತಿನ ವಿರುದ್ಧ ಎಎಪಿ ದೂರುಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ, 20 ವರ್ಷ ಕಳೆದರೂ ರೈತರಿಗೆ ಸಿಗತ ಪರಿಹಾರಕಾಂಗ್ರೆಸ್ ಪಕ್ಷ ಪಾರ್ಕಿಂಗ್ ವಿಚಾರದಲ್ಲಿ ಅಂದಾ ದರ್ಬಾರ್ ಮಾಡಲು ಹೊರಟಿದೆ