ಸಾಕ್ಷರತೆ ಭವಿಷ್ಯದ ಶಿಕ್ಷಣಕ್ಕೆ ಸಹಕಾರಿ-ಎಂ.ನಾಸಿರುದ್ದೀನ್.!
ಚಿತ್ರದುರ್ಗ: ಮಕ್ಕಳಲ್ಲಿ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾ£ವನ್ನು ಪರಿಣಾಮಕಾರಿಯಾಗಿ ಬೆಳೆಸುವುದರಿಂದ ಭವಿಷ್ಯದ ಶಿಕ್ಷಣಕ್ಕೆ ಸಹಕಾರಿಯಾಗುತ್ತದೆಎಂದುಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು.
ನಗರದಡಯಟ್‌ನಲ್ಲಿಎಫ್.ಎಲ್.ಎನ್ ನಲ್ಲಿ ಶೇ.100 ರಷ್ಟು ಪ್ರಗತಿ ಸಾಧಿಸಿದ ಚಿತ್ರದುರ್ಗತಾಲೂಕಿನಶಾಲಾ ಶಿಕ್ಷಕರಿಗೆ ಈಚೆಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಿ ಮಾತನಾಡಿದಅವರುಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಓದು, ಬರಹ ಸಾಮರ್ಥ್ಯ ಬೆಳೆಸಿ ಭಾಷಾ ಕೌಶಲಗಳಲ್ಲಿ ಸಾಮರ್ಥ್ಯ ಹೆಚ್ಚಿಸಬೇಕು. ಇದರಿಂದಉನ್ನತ ಶಿಕ್ಷಣ ಪಡೆಯಲು ಸುಲಭವಾಗುತ್ತದೆಎಂದರು.
ಶಿಕ್ಷಕರಿಗೆ ಪ್ರೇರಣೆ ನೀಡಲು ಬುನಾದಿ ಸಾಕ್ಷರತೆ, ಸಂಖ್ಯಾಜ್ಞಾನದಲ್ಲಿ 100 ರಷ್ಟು ಸಾಧನೆ ಮಾಡಿರುವ ಪ್ರತಿತಾಲೂಕಿನಿಂದ 5 ಶಾಲೆಗಳನ್ನು ಆಯ್ಕೆ ಮಾಡಿದ್ದು ಪ್ರಶಸ್ತಿ ಪತ್ರ ನೀಡಿಅಭಿನಂದಿಸಲಾಗುತ್ತಿದೆ.ಪ್ರತಿ ಶೈಕ್ಷಣಿಕ ವರ್ಷದಲ್ಲಿಜಿಲ್ಲೆಯಎಲ್ಲಾತಾಲೂಕಿನಿಂದ ಸಾಧನೆ ಮಾಡಿರುವ ಶಾಲೆಗಳನ್ನು ಗುರುತಿಸಿ ಡಯಟ್ ವತಿಯಿಂದ ಪ್ರಶಸ್ತಿ ಪತ್ರ ನೀಡಿಗೌರವಿಸಲಾಗುವುದುಎಂದರು.
ಹಿರಿಯಉಪನ್ಯಾಸಕಿಎಚ್.ಗಿರಿಜ, ಉಪನ್ಯಾಸಕರಾದ ಯು.ಸಿದ್ದೇಶಿ, ಎಸ್.ಬಸವರಾಜು, ಬಿ.ಆರ್.ಸಿ ತಿಪ್ಪೇರುದ್ರಪ್ಪ, ಶ್ರೀನಿವಾಸ್, ಬಿ.ಆರ್.ಪಿ ಖಲಂದರ್, ಸಿ.ಆರ್.ಪಿ ವರಲಕ್ಷಿö್ಮ, ಹಲಗಪ್ಪನ ಹಟ್ಟಿಮತ್ತುಕೆಳಗಳಹಟ್ಟಿ ಸ.ಕಿ.ಪ್ರಾ.ಶಾಲೆ ಸಿಂಗಾಪುರ ಮತ್ತು ಮಲ್ಲಾಪುರ ಸ.ಹಿ.ಪ್ರಾ.ಶಾಲೆ ಶಿಕ್ಷಕರು ಇದ್ದರು.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.