LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

Martin 100 ಡೇಸ್ ಪಕ್ಕಾ!'-ಸಿನಿಮಾ ನೋಡಿ ಥ್ರಿಲ್ ಆದ ವೀಕ್ಷಕರು ಹೇಳಿದ್ದು ಹೀಗೆ!

ಇಂದು ಮಾರ್ಟಿನ್ ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಿದ್ದು ಅದ್ದೂರಿ ಪ್ರದರ್ಶನ ಕಾಣುತ್ತಿದೆ. ಎ.ಪಿ. ಅರ್ಜುನ್‌ ನಿರ್ದೇಶನದ ‘ಮಾರ್ಟಿನ್’ ಸಿನಿಮಾಕ್ಕೆ ಎಲ್ಲೆಡೆ ಬೆಸ್ಟ್‌ ಪ್ರತಿಕ್ರಿಯೆ ಸಿಗ್ತಿದೆ. ಈ ಸಿನಿಮಾಕ್ಕೆ ಧ್ರುವ ಸರ್ಜಾ ನಾಯಕರಾಗಿದ್ದಾರೆ. ಇನ್ನು ಪ್ರಾದೇಶಿಕ ಸೆನ್ಸಾರ್‌ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿತ್ತು. ಕರ್ನಾಟಕದಲ್ಲಿ ಇನ್ನೂ ಮಾರ್ಟಿನ್ ಬಗ್ಗೆ ವಿಮರ್ಶೆ ಹೊರಬೀಳಬೇಕಿದೆ. ಆದರೆ ಆಂಧ್ರಪ್ರದೇಶದಲ್ಲಿ ಈ ಸಿನಿಮಾ ರಿಲೀಸ್ ಆಗಿದ್ದು, ಅಲ್ಲಿ ಪಾಸಿಟಿವ್ ಪ್ರತಿಕ್ರಿಯೆ ಸಿಗುತ್ತಿದೆ. ತೆಲುಗು ವೀಕ್ಷಕರು ಹೇಳಿದ್ದೇನು? ‘ಮಾರ್ಟಿನ್’ ಸಿನಿಮಾ ಆಕ್ಷನ್ ಸಖತ್ ಆಗಿದೆ. ಹಾಲಿವುಡ್ ರೇಂಜ್‌ನಲ್ಲಿ ಸಖತ್ ಆಗಿ ಮಾಡಿದ್ದಾರೆ. ಒಳ್ಳೆಯ ಮೆಸೇಜ್ ಕೊಟ್ಟಿದ್ದಾರೆ ಸಿಂಪಲ್ ಟ್ವಿಸ್ಟ್ ಇದೆ ಭಾರತದಲ್ಲಿ ಬಂದ ಉತ್ತಮ ಸಿನಿಮಾವಿದು ಅವರೇನು ಮನುಷ್ಯನಾ? ಚೈನಾ ಗೋಡೆ ಥರ ಧ್ರುವ ಸರ್ಜಾ ಇದ್ದಾರೆ. ಈ ಚಿತ್ರದ ಮುಂದೆ ಕೆಜಿಎಫ್ ಸಣ್ಣದಾಗಿ ಕಾಣುತ್ತದೆ, ಧ್ರುವ ಸರ್ಜಾ ಮಾತ್ರ ಡೈನೋಸರ್ ಥರ ಇದ್ದಾರೆ ಈ ಸಿನಿಮಾದ ಕಾನ್ಸೆಪ್ಟ್ ಸಖತ್ ಆಗಿದೆ ಈ ಥರದ ಕಾನ್ಸೆಪ್ಟ್ ಎಲ್ಲಿಂದ ಬರತ್ತೋ ಏನೋ! ‘ದೇವರ’ ಸಿನಿಮಾಕ್ಕೂ ಮೀರಿದ ವಿಷಯಗಳು ಇಲ್ಲಿವೆ ನೂರು ದಿನ ಈ ಸಿನಿಮಾ ಓಡತ್ತೆ KGF ಸಿನಿಮಾ ನಂತರ ಈ ಸಿನಿಮಾನೇ ಹಿಟ್ ಆಗಲಿದೆ ಇದು ಪಕ್ಕಾ ಮಾಸ್ ಸಿನಿಮಾ, ವೀಕ್ಷಕರಿಗೆ ಮೋಸ ಇಲ್ಲ. ಒಂದು ಸಲ ಸಿನಿಮಾ ನೋಡಬಹುದು, ಮತ್ತೆ ನೋಡಲು ಬೇಸರ ಆಗಬಹುದು ಎಂದು ನೆಗೆಟಿವ್ ವಿಷಯವನ್ನು ಹೇಳಿದ್ದಾರೆ. ಮೊದಲ ಭಾಗ ಚೆನ್ನಾಗಿದೆ, ಧ್ರುವ ಸರ್ಜಾ ಚೆನ್ನಾಗಿ ನಟಿಸಿದ್ದಾರೆ ಚೆನ್ನಾಗಿದೆ ನೋಡೋ ಥರ ಸಿನಿಮಾ ಇದೆ ಆಕ್ಷನ್ ಸಖತ್ ಆಗಿದೆ ದಸರಾ ಹಬ್ಬದ ಟೈಮ್‌ನಲ್ಲಿ ದರ್ಬಾರ್ ಮಾಡಿದೆ ಕೊಟ್ಟಿರೋ ದುಡ್ಡಿಗೆ ಮೋಸ ಇಲ್ಲ ಈ ಸಿನಿಮಾ ಜಾತ್ರೆ ಥರ ಇಲ್ಲ, ಚೆನ್ನಾಗಿದೆ ಎಂದು ಕನ್ನಡ ಅಭಿಮಾನಿಗಳು ಹೇಳಿದ್ದಾರೆ. ಒಟ್ಟು 10 ವಿಭಿನ್ನ ಶೇಡ್‌ಗಳಲ್ಲಿ ಧ್ರುವ ಸರ್ಜಾ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲೂ ಅವರದ್ದೇ ಆದ ಅನೇಕ ಶೇಡ್‌ಗಳಿವೆ’ ಎಂದು ಹೇಳಿದ್ದಾರೆ. ಅದ್ದೂರಿ ಮೇಕಿಂಗ್ ಭಾವನಾತ್ಮಕ ವಿಷಯವೂ ಇದೆ. ಮಾರ್ಟಿನ್ ಸಿನಿಮಾದಲ್ಲಿ ಚಿತ್ರಕಥೆಯೇ ವಿಶೇಷವಾಗಿದೆ. ಸಾಂಗ್, ದೃಶ್ಯಗಳೆಲ್ಲವೂ ರೋಮಾಂಚನವಾಗಿವೆ. ದೃಶ್ಯಕಾವ್ಯ’ ಎಂದಿದ್ದಾರೆ ಎಪಿ ಅರ್ಜುನ್. ವೈಭವಿ ಶಾಂಡಿಲ್ಯ ಅವರು ಈ ಸಿನಿಮಾ ನಾಯಕಿ. ಉದಯ್ ಕೆ ಮೆಹ್ತಾ ಅವರು ಈ ಸಿನಿಮಾಕ್ಕೆ ಹಣ ಹೂಡಿದ್ದಾರೆ. ಅನ್ವೇಷಿ ಜೈನ್, ಸುಕೃತಾ ವಾಗ್ಲೆ, ಅಚ್ಯುತ್ ಕುಮಾರ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರನ್ಯಾ ಚಿನ್ನ ಸಾಗಣೆ ಪ್ರಕರಣ: ಡಿಜಿಪಿ ರಾಮಚಂದ್ರ ರಾವ್ ವಿರುದ್ಧ ತನಿಖೆಗೆ ಆದೇಶಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಾಲಿವುಡ್‌ ನಟಿ ಕತ್ರಿನಾ ಕೈಫ್‌ ಭೇಟಿಚಾಲಕ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿದರೂ ಇನ್ಸೂರೆನ್ಸ್ ಕಂಪನಿ ವಿಮೆ ಪಾವತಿಸಬೇಕು - ಹೈಕೋರ್ಟ್ ಮಹತ್ವದ ತೀರ್ಪುಹೆಚ್‌ಡಿಕೆಗೆ ಅನಾರೋಗ್ಯ-ಜಿಂದಾಲ್ ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ'ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ತಮ್ಮ ಸ್ವಂತ ವಾಹನದ ಮೇಲೆ ಪೊಲೀಸ್ ಎಂದು ಬರೆಸುವಂತಿಲ್ಲ'- ಪರಮೇಶ್ವರ್‌ಈ ತಿಂಗಳಲ್ಲಿ ಸಂಭವಿಸಲಿದೆ ಎರಡು ಗ್ರಹಣಮತ್ತೊಂದು ಪ್ರಶಸ್ತಿ ಮುಡಿಗೇರಿಸಿಕೊಂಡ ಮಂಗಳೂರು ವಿಮಾನ ನಿಲ್ದಾಣಮಾರಿಷಸ್‌ಗೆ ತೆರಳಿದ ಪ್ರಧಾನಿ ಮೋದಿ: ಪ್ರಮುಖ ಒಪ್ಪಂದಗಳಿಗೆ ಸಹಿ ನಿರೀಕ್ಷೆಅನರ್ಹ ಬಿಪಿಎಲ್ ಫಲಾನುಭವಿಗಳ ಪತ್ತೆಗೆ ಮನೆ ಮನೆ ಪರಿಶೀಲನೆಗೆ ಸರ್ಕಾರ ನಿರ್ಧಾರ: ಸಚಿವ ಮುನಿಯಪ್ಪ‘ಗ್ರೇಟರ್‌ ಬೆಂಗಳೂರು ಆಡಳಿತ ಮಸೂದೆ ಅಂಗೀಕಾರ….!