Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಪ್ಯಾರಲಲ್ ಟ್ಯಾಕ್ಸಿ ಟ್ರ್ಯಾಕ್ ನಿರ್ಮಾಣದ ಕುರಿತು ಸಂಸದ ಶೆಟ್ಟರ ಸಭೆ

ಬೆಳಗಾವಿ : ಬೆಳಗಾವಿ ವಿಮಾನ ನಿಲ್ದಾಣದ ಸರ್ವಾಂಗೀಣ ಅಭಿವೃದ್ಧಿಗೆ ಸಂಬಂಧಿಸದಂತೆ, " ಪ್ಯಾರೆಲೆಲ್ ಟ್ಯಾಕ್ಸಿ ಟ್ರ್ಯಾಕ್ “ ನಿರ್ಮಾಣಕ್ಕೆ ಬೆಳಗಾವಿಯ ವಾಯುಸೇನಾ ಇಲಾಖೆಯ ಸುಮಾರು 16 ಎಕರೆ ಜಮೀನನ್ನು ಬೆಳಗಾವಿ ವಿಮಾನ ನಿಲ್ದಾಣಕ್ಕೆ ನೀಡಬೇಕಾಗಿರುವ ಕುರಿತು ಬೆಳಗಾವಿ ಸಂಸದ ಹಾಗೂ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಗುರುವಾರ ಜಿಲ್ಲಾಧಿಕಾರಿ ಮಹಮ್ಮದ ರೋಶನ್ ಅವರ ಉಪಸ್ಥಿತಿಯಲ್ಲಿ ಬೆಂಗಳೂರಿನ ಕರ್ನಾಟಕ ವ್ರತ್ತದ ರಕ್ಷಣಾ ಎಸ್ಟೇಟ್ ಅಧಿಕಾರಿ ದಿವ್ಯಾ ಹೊಸೂರ ಅವರೊಂದಿಗೆ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿದರು.

ಬೆಳಗಾವಿ ವಿಮಾನ ನಿಲ್ದಾಣದ ಅಭಿವೃದ್ಧಿ ನಿಟ್ಟಿನಲ್ಲಿ ಅನೇಕ ಕಾಮಗಾರಿಗಳು ಇಲ್ಲಿ ನಡೆಯುತ್ತಲಿವೆ, ಟರ್ಮಿನಲ್-2 ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಸಾಕಷ್ಟು ಪ್ರಗತಿ ಸಾಧಿಸಿದೆ ಇನ್ನು ವಿಮಾನ ನಿಲ್ದಾಣದಲ್ಲಿ “ಪ್ಯಾರೆಲೆಲ್ಲ ಟ್ಯಾಕ್ಸಿ ಟ್ರ್ಯಾಕ್” ನಿರ್ಮಾಣ ಅವಶ್ಯಕ ಆದರೆ ಇದಕ್ಕೆ ಅವಶ್ಯಕತೆ ಎನಿಸಿದ ಸುಮರು 16 ಎಕರೆ ಜಮೀನು ಬೆಳಗಾವಿ ವಾಯು ಸೇನಾ ಇಲಾಖೆ ಹಸ್ತಾಂತರಿಸಬೇಕಿದೆ. ಇದಕ್ಕೆ ಸರಿಸಮನಾಗಿ ಬೆಳಗಾವಿ ಜಿಲ್ಲಾಡಳಿತವು ಸಹ ಸಮಾನಳತೆಯ ಮತ್ತು ಸಮಾನ ಬೆಲೆಯನ್ನು ಹೊಂದಿರುವ ಜಮೀನನ್ನು ಗುರುತಿಸಿ ವಾಯು ಸೇನಾ ಇಲಾಖೆಗೆ ನೀಡಬೇಕಿದೆ. ಆದರೆ ಈ ಕಾರ್ಯ ಅನೇಕ ವರ್ಷಗಳಿಂದ ನಡೆಯದೆ ಇರುವುದರಿಂದ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಕೈಗೊಳ್ಳಬೇಕಾದ ಅವಶ್ಯಕ ಕಾಮಗಾರಿಗಳು ಸಮಯಕ್ಕನುಗುಣವಾಗಿ ಪೂರ್ಣಗೊಳ್ಳುತ್ತಿಲ್ಲ ಎಂದು ಸಂಸದರು ಸಭೆಯಲ್ಲಿ ತಿಳಿಸಿ, ಇದಕ್ಕೆ ಇರುವ ಕಾರಣಗಳ ಬಗ್ಗೆ ಅಧಿಕಾರಿಗಳಲ್ಲಿ ವಿಚಾರಿಸಿದರು.

ಬೆಳಗಾವಿ ಬಹು ವೇಗವಾಗಿ ಬೆಳೆಯುತ್ತಿರುವ ನಗರ, ಸಾರ್ವಜನಿಕರ ಹಿತದೃಷ್ಟಿಯಿಂದ, ಶೀಘ್ರ ಜಿಲ್ಲಾಧಿಕಾರಿಗಳು ಮತ್ತು ರಕ್ಷಣಾ ಎಸ್ಟೇಟ್ ಅಧಿಕಾರಿಗಳು ವಿಷಯ ಅವಲೋಕಿಸಿ ಪ್ರಸ್ತಾಪಿತ ಭೂಮಿಯ ಹಸ್ತಾಂತರದ ಕುರಿತು ಮುಂದಿನ ತುರ್ತು ಕ್ರಮವನ್ನು ಕೈಕೊಳ್ಳಲು ಸಂಸದ ಜಗದೀಶ ಶೆಟ್ಟರ ಅವರು ಸೂಚಿಸಿದರು.

ಸಭೆಯಲ್ಲಿ ಬೆಳಗಾವಿ ಪೋಲಿಸ್ ಆಯುಕ್ತ ಭೂಶನ್, ಏರ್ಪೋರ್ಟ್ ನಿರ್ದೆಶಕರು ತ್ಯಾಗರಾಜನ್ ವಾಯುಸೇನಾ ಅಧಿಕಾರಿಗಳು ಭಾಗವಹಿಸಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರುಭೀಕರ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣಪ್ರಜಾಪಿತ ಬ್ರಹ್ಮಾಕುಮಾರಿ ಶಹಾಪುರ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಸುರಂಗದಲ್ಲಿ 9 ದಿನ ಹರೇ ಕೃಷ್ಣ ಪಠಿಸುತ್ತಿದ್ದವ ಜನ್ಮಾಷ್ಟಮಿಯಂದು ಹೊರಬಂದಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ: ಅಸ್ತಿತ್ವಕ್ಕೆ ಬಂತು ಹೊಸ ಬಣ!ಅಯೋಧ್ಯೆ ದೇಗುಲದ ಅಭಿವೃದ್ಧಿಗೆ ಭಕ್ತಾದಿಗಳ ಬೆಂಬಲ ಕೋರಿದ ರಾಮಮಂದಿರದ ನೂತನ ಸಿಇಒ