ಬೆಂಗಳೂರು: ಮೈಸೂರು ಹೆಸರನ್ನು ಹಾಗೂ ಜಿಲ್ಲೆಯನ್ನು ಸಾಂಕೇತಿಕವಾಗಿ ಇಟ್ಟುಕೊಂಡು ವಿಭಿನ್ನವಾಗಿ ವಿಶೇಷವಾಗಿ ಕೇವಲ 40 ದಿನಗಳಲ್ಲಿ ಸಿನಿಮಾ ಚಿತ್ರೀಕರಣ ಮಾಡಿ ಮುಗಿಸುವ ಒಂದು ಮಹತ್ವವಾದಂತಹ ಯೋಜನೆಗೆ ಕ್ಲಾಸ್ ಆಫ್ ಮೈಸೂರ್ ಸಿನಿಮಾವನ್ನು ಗೌತಮ್ ಬಸವರಾಜ್ ಅವರ ನಿರ್ದೇಶನದಲ್ಲಿ ವಿಭಿನ್ನವಾಗಿ ಕಟ್ಟಿಕೊಡಲು ಸಜ್ಜಾಗಿದ್ದು ಮುಹೂರ್ತವು ಸಹ ಆಗಿದೆ. ಮಾಕ್ಟ್ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ನ ಅಡಿಯಲ್ಲಿ ನಿರ್ಮಾಣವಾಗಲಿದೆ.
ಕ್ಲಾಸ್ ಆಫ್ ಮೈಸೂರು ಸಿನಿಮಾ ಮುಹೂರ್ತವು ಬೆಂಗಳೂರಿನ ಹನುಮಂತನಗರದಲ್ಲಿರುವ ಬಂಡೆ ಮಹಾಕಾಳಿ ದೇವಾಲಯದಲ್ಲಿ ಚಾಲನೆ ನೀಡಲಾಯಿತು. ಚಿತ್ರದ ಹೆಸರು ಕೇಳುತ್ತಿದ್ದಂತೆ ಒಂದು ರೀತಿಯಲ್ಲಿ ನೋಡುಗರಿಗೆ ಅಥವಾ ಸಿನಿಮಾ ವೀಕ್ಷಕರಿಗೆ ತಟ್ಟಂತ ಹೊಳೆಯುವುದು ಇದೊಂದು ಇಂಗ್ಲಿಷ್ ಮೂವಿನ ಅಂತ. ಕ್ಲಾಸು ಮಾಸು ಎಂದೆಲ್ಲಾ ಹೆಸರುಗಳು ಸರ್ವೇಸಾಮಾನ್ಯವಾಗಿ ಬೆಂಬಿತವಾಗುತ್ತವೆ . ಹಾಗೆ ಅಂದುಕೊಂಡಿದ್ದರೆ ಅದೆಲ್ಲ ತಪ್ಪು. ನಿವೃತ್ತಿಯಾದವರ ಜೀವನದಲ್ಲಿ ಕಳೆದುಕೊಂಡಿರುವುದನ್ನು ಹೇಗೆ ಪಡೆದು ಅನುಭವಿಸುತ್ತೀರಿ ಎಂಬುದು ಚಿತ್ರದಲ್ಲಿ ಕಥೆ ಪ್ರಧಾನವಾಗಿದೆ.
ಬೇರೆ ಎಂಟರ್ಟೈನ್ಮೆಂಟ್ ಸಿನಿಮಾಗಳು ಇರುವ ಹಾಗೆ ಇದರಲ್ಲಿ ಸಹ ಕಾಮಿಡಿ ಥ್ರಿಲ್ಲರ್ ಆರ್ ಆರ್ ಎಲ್ಲವೂ ಸಹ ಅಡಕವಾಗಿದ್ದು, ಎಲ್ಲವನ್ನು ನಿರ್ದೇಶಕರು ಒಂದೇ ಸೂರಿನಲ್ಲಿ ಕಟ್ಟಿಕೊಡುವಂತಹ ಪ್ರಯತ್ನವನ್ನು ಮಾಡಿದ್ದಾರೆ. ಸಿನಿ ಆಸಕ್ತರನ್ನು 2 ಗಂಟೆಗಳ ಕಾಲ ಕುಳಿತು ನೋಡುವ ನಿಟ್ಟಿನಲ್ಲಿ ಸಿನಿಮಾ ನಿರ್ಮಾಣ ಮಾಡುವ ಉದ್ದೇಶವನ್ನು ಇಡೀ ತಂಡ ಮಾಡಲು ಹೊರಟಿದೆ.
ಇನ್ನು ಸಿನಿಮಾ ಚಿತ್ರೀಕರಣವನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಾಡುವ ಆಲೋಚನೆ ಇದು ಅದರಲ್ಲಿ ಮುಖ್ಯವಾಗಿ ಬೆಂಗಳೂರು, ಮೈಸೂರು,ಕೂರ್ಗ್,ಗೊವಾ, ಸಕಲೇಶ ಪುರ, ಗೋಕರ್ಣ,ಚಿಕ್ಕಮಗಳೂರು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಸಿನಿಮಾದಲ್ಲಿ ಐದಾರು ಹಾಡುಗಳು ಇವೆ. ಪ್ರಧಾನವಾಗಿ ಮೈಸೂರು ಇದ್ದರೂ ಸಹ ಬೇರೆ ಬೇರೆ ಕಡೆ ಚಿತ್ರೀಕರಣ ನಡೆಯಲಿದೆ.
ಹಳೆ ನಟ ನಟಿಯರಿಗೆ ಮಣೆ:
ಇನ್ನು ಕ್ಲಾಸ್ ಆಫ್ ಮೈಸೂರು ಸಿನಿಮಾದಲ್ಲಿ ಇಡೀ ಕಥೆಯೇ ಹೀರೋ, ಅದರಲ್ಲಿ ತಾಯಿಯ ಪಾತ್ರವಾಗಿ ಹಿರಿಯ ನಟಿ ತಾರಾ ಅನುರಾಧ ಕಾಣಿಸಿಕೊಳ್ಳದಿದ್ದು ವಿಶೇಷ ಪಾತ್ರದಲ್ಲಿ ಮಿಂಚಲಿದ್ದಾರೆ. ಕಾಮಿಡಿಯಲ್ಲಿ ಹೆಚ್ಚು ಖ್ಯಾತಿಗಳಿಸಿರುವ ರಂಗಾಯಣ ರಘು, ಹಿರಿಯ ಪೋಷಕ ಕಲಾವಿದರಾದ ದತ್ತಣ್ಣ, ಬಿರಾದಾರ್, ಖಳನಾಯಕ ಶರತ್ ಲೋಹಿತಾಶ್ವ, ಒಂದು ವಿಶೇಷ ಪಾತ್ರದಲ್ಲಿ ತಬಲಾ ನಾಣಿ, ಕಾಮಿಡಿ ಕಿಲಾಡಿ ಖ್ಯಾತಿಯ ಜಗ್ಗಪ್ಪ, ಶಿವು ,ಮಹಾಂತೇಶ್ ತಾರಾಗಣದಲ್ಲಿ ಇದ್ದಾರೆ. ಇದರಲ್ಲಿ ರಂಗಭೂಮಿ ಕಲಾವಿದ ವಿಜಯೇಂದ್ರ ಅವರ ಹೊಸ ಮುಖ ಅನಾವರಣ ಆಗಲಿದೆ.
ಪರದೆ ಹಿಂದೆ ಕೆಲಸ ಮಾಡುವವರ ವಿವರ:
ಸಿನಿಮಾ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿರುವ ಅನುಭವವಿದೆ , ಹೈದರಾಬಾದ್ ನಲ್ಲಿ ಸಿನಿಮಾದ ವಿಚಾರಗಳ ಬಗ್ಗೆ ಸಾಕಷ್ಟು ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಸಿನಿಮಾದ ನಿರ್ದೇಶಕರಾಗಿ ಗೌತಮ್ ಬಸವರಾಜ್, ನಿರ್ಮಾಪಕ ಸಹನಾ ಶಿಂದೆ, ಸಂಗೀತ ಜಾಯ್ ಕಾಸ್ಟ್ , ಡಿಒಪಿ ಎಸ್ ಕೆ ರಾವ್, ಕಲಾ ನಿರ್ದೇಶಕ ಉಲ್ಲಾಸ್ ಹೈದರ್, ವಸ್ತ್ರ ವಿನ್ಯಾಸಕಿ ಶಾಶ್ವತಿ ಚಂದ್ರಶೇಖರ್ ಸೇರಿದಂತೆ ಅನುಭವ ಇರುವ ಹಲವರು ತೆರೆಯ ಹಿಂದಿನ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ.
ಫೆಬ್ರವರಿ ಇಂದ ಆರಂಭವಾಗುವ ಚಿತ್ರೀಕರಣ ಕೇವಲ 40 ದಿನಗಳ ಮುಕ್ತಾಯವಾಗಲಿದೆ ಎಂದು ನಿರ್ದೇಶಕ ಗೌತಮ್ ಬಸವರಾಜ ಖಡಕ್ಕಾಗಿ ಹೇಳಿದ್ದಾರೆ. ಆದರೆ ಪ್ರೊಡಕ್ಷನ್ ಪೋಸ್ಟ್ ಪ್ರೊಡಕ್ಷನ್ ಗೆ ಕಾಲಾವಧಿ ಬೇಕಾಗಬಹುದೆಂದು ತಿಳಿಸಿದರು. ಇಡೀ ಚಿತ್ರ 2:00 ಆಗಲಿದ್ದು ಎಲ್ಲರೂ ನೋಡಲೇಬೇಕಾದಂತಹ ಹಾಗೂ ಸಮಾಜಕ್ಕೆ ಹತ್ತಿರವಾದ ಅಂತಹ ಅದರ ಜೊತೆಗೆ ಒಂದು ಉತ್ತಮ ಸಂದೇಶವನ್ನು ಕೊಡುವ ನಿಟ್ಟಿನಲ್ಲಿ ಈ ಚಿತ್ರ ನಿರ್ಮಾಣವಾಗಿದೆ ಎಂದು ಇಡೀ ಕಲಾವಿದರ ಅಭಿಪ್ರಾಯವಾಗಿದೆ.
ಹಿರಿ ನಟಿ ತಾರಾ ಅನುರಾಧ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿ, ಸಿನಿಮಾ ಮಾಡುವುದಕ್ಕೂ ಮಾಡಲು ಯಾವುದೇ ಗೊಂದಲಗಳು ಸಮಸ್ಯೆಗಳು ಇಲ್ಲ ಆದರೆ ಜನರ ಇಚ್ಛಾಶಕ್ತಿ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಾ ಬರುತ್ತದೆ. ಸಿನಿಮಾ ನೋಡುವರ ಸಂಖ್ಯೆಯು ವಿರಳವಾಗುತ್ತದೆ ಇದು ದುರಂತದ ಸಂಗತಿಯಾಗಿದೆ.
ಸಿನಿಮಾ ವಿಚಾರಗಳ ಬಗ್ಗೆ ಸಾಕಷ್ಟು ತಿಳಿದುಕೊಳ್ಳಬೇಕಾದಂತಹ ವಿಷಯಗಳು ಸಹ ಇರುತ್ತದೆ ಅದರ ಬಗ್ಗೆ ಜಾಗೃತಿ ಅವಶ್ಯಕತೆ ಇದ್ದು ನಾವೆಲ್ಲರೂ ಎಚ್ಚರಗೊಳ್ಳಬೇಕಾಗಿದೆ ಇಂದು ಸಿನಿಮಾ ಆಸಕ್ತರ ಕಡಿಮೆಯಾಗುವ ವಿಚಾರದಲ್ಲಿ ಆತಂಕ ವ್ಯಕ್ತಪಡಿಸಿದರು.
ಸಿನಿಮಾವು ಎಲ್ಲರಿಗೂ ಒಂದು ಪ್ರೇರಣಾದಾಯಕವಾಗಿರಲಿ, ಅದರ ಜೊತೆ ಜೊತೆಯಲ್ಲಿ ಒಂದು ಒಳ್ಳೆ ಚಿತ್ರ ಬೆಳ್ಳಿತೆರೆಗೆ ಬರುತ್ತಿದೆ ಎನ್ನುವುದಾದರೆ ಎಲ್ಲರೂ ಸೇರಿಕೊಂಡು ಶುಭ ಹಾರೈಸುವ ಕೆಲಸ ಆಗಬೇಕಾಗಿದೆ ಎಂದು ಸಿನಿ ಆಸಕ್ತರಿಗೆ ಮನವಿ ಮಾಡಿಕೊಂಡರು.