LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
💛

💛 ಸ್ವತಂತ್ರ ಪತ್ರಿಕೋದ್ಯಮ ಬೆಂಬಲಿಸಲು ಲೇಖನದ ಕೆಳಭಾಗದಲ್ಲಿ UPI ಮೂಲಕ ಕಾಣಿಕೆ ನೀಡಿ!

State News

ನವ ತಂತ್ರಜ್ಞಾನ ಅಭಿವೃದ್ಧಿಗೆ ಪೂರಕವಾಗಿರಬೇಕು: ಶಿಕ್ಷಣ-ಕೈಗಾರಿಕಾ ತಜ್ಞರ ಅಭಿಮತ

ಬೆಂಗಳೂರು: ಇಂದಿನ ವಿದ್ಯಾರ್ಥಿಗಳಿಗೆ ನವ ತಂತ್ರಜ್ಞಾನವನ್ನು ಅತಿ ವೇಗವಾಗಿ ಕಲಿಸುವ ಮೂಲಕ ತಂತ್ರಜ್ಞಾನವನ್ನು ಅಭಿವೃದ್ಧಿ ಪೂರಕವಾಗಿ ಬಳಕೆ ಮಾಡುವುದಕ್ಕೆ ತಿಳಿಸಿಕೊಡುವ ಅವಶ್ಯಕತೆ ಇದೆ ಎಂದು ಕೈಗಾರಿಕಾ ಮತ್ತು ಶಿಕ್ಷಣ ಕ್ಷೇತ್ರದ ಪರಿಣಿತರು ಒಮ್ಮತ ವ್ಯಕ್ತಪಡಿಸಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು), ಬಿಎಂಎಸ್ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯದ ಸಹಯೋಗದೊಂದಿಗೆ ಆಯೋಜಿಸಿದ್ದ " ಉನ್ನತ ಶಿಕ್ಷಣದ ಪಠ್ಯಕ್ರಮದ ಪುನರ್ ರಚನೆ: ವಿಕಾಸಗೊಳ್ಳುತ್ತಿರುವ ಉದ್ಯೋಗ ಮಾರುಕಟ್ಟೆ ಮತ್ತು ಕೃತಕ ಬುದ್ಧಿಮತ್ತೆ(ಎಐ) ಸೇರ್ಪಡೆ" ವಿಷಯ ಕುರಿತಾಗಿ ಕೈಗಾರಿಕೋದ್ಯಮಿಗಳು ಮತ್ತು ಶಿಕ್ಷಣ ತಜ್ಞರು ತಮ್ಮ ಅಭಿಪ್ರಾಯ ಮಂಡಿಸಿದರು.

ವಿಟಿಯು ಡೀನ್ ಫ್ಯಾಕಲ್ಟಿ ಆಫ್ ಎಂಜಿನಿಯರಿಂಗ್ ಡಾ.ಎಚ್.ಎ. ಸಂಜಯ್, ಬೆಂಗಳೂರು ಪ್ರಾದೇಶಿಕ ಕೇಂದ್ರದ ನಿರ್ದೇಶಕ ಎಚ್.ಆರ್.ಸುದರ್ಶನ ರೆಡ್ಡಿ, ಯೂನಿಸೆಸ್ ಇಂಡಿಯಾದ ಉಪಾಧ್ಯಕ್ಷ ಲಲಿತಾನಂದ ಮೋಸೆ, ವೆಸ್ಟ್ ಫಾರ್ಮ ಕಂಪನಿಯ ಹಿರಿಯ ನಿರ್ದೇಶಕ ಸಿ.ವೆಂಕಟ ಶ್ರೀಧರ್, ಇಂಡಿಯ ಕಂಪನಿಯ ಮುಖ್ಯಸ್ಥ ಶ್ರೀನಾಥ್ ನಂದಕರ್ಣಿ ಸೇರಿದಂತೆ ಹಲವರು ಭಾಗವಹಿಸಿದ್ದರು.

"ಇಂದು ಹೆಚ್ಚು ಸದ್ದು ಮಾಡುತ್ತಿರುವ ತಂತ್ರಜ್ಞಾನದಲ್ಲಿ ಎಐ ಬಹಳ ಮುಖ್ಯವಾಗಿದೆ. ನಾವು ಇದನ್ನು ದುರ್ಬಳಕೆ ಮಾಡಿಕೊಳ್ಳುವ ಬದಲಾಗಿ ಸದ್ಬಳಕೆ ಮಾಡಿಕೊಳ್ಳಬೇಕಿದೆ. ವಿದ್ಯಾರ್ಥಿಗಳು ಪ್ರಾಧ್ಯಾಪಕರನ್ನು ಪ್ರಶ್ನೆ ಮಾಡುವ ರೀತಿಯಲ್ಲಿ ಕಲಿಸಬೇಕಿದೆ. ಪಠ್ಯದಲ್ಲೂ ಎಐಗೆ ಹೆಚ್ಚಿನ ಒತ್ತು ನೀಡಿ ಬದಲಾವಣೆ ತರಬೇಕಿದೆ. ಎಐ ಬಂದಾಕ್ಷಣ ಉದ್ಯೋಗ ಕಸಿಯಲಿದೆ ಎಂಬುದಕ್ಕಿಂತ ಇದರೊಟ್ಟಿಗೆ ಕೆಲಸ ಮಾಡುವುದಕ್ಕೆ ಪ್ರಯತ್ನಿಸಬೇಕು" ಎಂಬ ಅಭಿಪ್ರಾಯಗಳನ್ನು ಮಂಡಿಸಿದರು.

ಈ ವೇಳೆ ವಿಟಿಯು ಕಾರ್ಯುಕಾರಿ ಪರಿಷತ್ತಿನ ಸದಸ್ಯರಾದ ಪ್ರೋ.ಕೇಶವಮೂರ್ತಿ, ಡಾ.ಬಿ.ಕರುಣಾಕರ ರೈ, ವಿಶೇಷಾಧಿಕಾರಿ ಡಾ.ಅಜಿತ್ ಪದ್ಯಾಣ ಇತರರು ಇದ್ದರು.

ಮಾಧ್ಯಮ ಬೆಂಬಲಿಸಿ / Support Local Journalism

ನಿಮ್ಮ ಬೆಂಬಲ ಸ್ವತಂತ್ರ ಪತ್ರಿಕೋದ್ಯಮವನ್ನು ಜೀವಂತವಾಗಿರಿಸುತ್ತದೆ. Scan & Pay directly via PhonePe, GPay or Paytm.

0% Gateway Commission — Money goes 100% directly into publisher bank account.
Scan with Any UPI App
Scan QR Code to Support News via UPI
Pre-filled: ₹10.00
UPI ID: khushihost1@ybl
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
SHOCKING: ಬೆಂಗಳೂರಿನ ಸ್ಟಾರ್‌ ಹೋಟೆಲ್‌ಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳ ದಾಳಿ: ಅವಧಿ ಮೀರಿದ ಹಾಲು, ಮಾಂಸ, ಮೀನು ಪತ್ತೆ!ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ, 40 ದಾಟಿದ ನಂತರ ಕಣ್ಣಿನ ಪರೀಕ್ಷೆ ಮಾಡಿಸಿ: ಸಾಗರದಲ್ಲಿ ASP ಡಾ.ಬೆನಕ ಪ್ರಸಾದ್ ಸಲಹೆBIG NEWS: ಸಾಗರದಲ್ಲಿ 'ನಕಲಿ ನೋಟ್' ಜಾಲ ಸಕ್ರಿಯ: ವ್ಯಾಪಾರಿಗಳು, ಸಾರ್ವಜನಿಕರು ಜಾಗೃತರಾಗಿರಲು 'ಸುಭಾಷ್ ಕೌತಳ್ಳಿ' ಮನವಿಶಾಸಕರ ಅಭಿವೃದ್ಧಿ ಶೂನ್ಯ, ಆಡಳಿತಕ್ಕೆ ಜನರೇ ಉತ್ತರಿಸಲಿದ್ದಾರೆ: ಸಾಗರದಲ್ಲಿ ಬಿಜೆಪಿ ನಾಯಕರು ವಾಗ್ದಾಳಿಸಮಾಜವನ್ನು ಎಚ್ಚರಿಸುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದು: ಸಾಗರದಲ್ಲಿ ಪೌರಾಯುಕ್ತ ಎಚ್.ಕೆ. ನಾಗಪ್ಪ ಅಭಿಪ್ರಾಯಜೈಸ್ವಾಲ್‌ನನ್ನು ತಂಡದಿಂದ ಹೊರಗೆ ಕಳುಹಿಸಿದ್ದು 4 ಪಂದ್ಯಗಳ ನಿಷೇಧದಿಂದ ರಕ್ಷಿಸಲು: ಅಜಿಂಕ್ಯ ರಹಾನೆ ಸ್ಪೋಟಕ ಹೇಳಿಕೆ!AI ಕ್ರಾಂತಿ: ಭಾರತದಲ್ಲಿ ಉದ್ಯೋಗ ಕಡಿತಕ್ಕಿಂತ ಹೊಸ ನೇಮಕಾತಿಯೇ ಹೆಚ್ಚು! Nomura ವರದಿಕ್ಲೀನ್ ಅಪ್ ಬೆಂಗಳೂರಿಗೆ ಆಂದೋಲನದ ರೂಪ ನೀಡಿದ ಬೆಸ್ಕಾಂ: ಎಂಡಿ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯಬಿಡದಿ ಟೌನ್ ಶಿಪ್ ಅಭಿಪ್ರಾಯಗಳ ಸಮಗ್ರ ಪರಿಶೀಲನೆಗೆ ನ್ಯಾಯಮೂರ್ತಿ ಗುಹನಾಥನ್ ನರೇಂದರ್ ನೇತೃತ್ವದ ಸಮಿತಿ ರಚನೆBREAKING: ಮೊಜ್ತಬಾ ಖಮೇನೇಯಿ ಆರೋಗ್ಯ ಸ್ಥಿತಿ ಗಂಭೀರ! ಇರಾನ್‌ನಲ್ಲಿ ಸಾವಿನ ವದಂತಿ !