Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
International News

ಕಾರ್ಗಿಲ್ ಯುದ್ಧದಲ್ಲಿ ಮೃತಪಟ್ಟ ತನ್ನದೇ ಸೈನಿಕರ ಶವಗಳನ್ನು ತಿರಸ್ಕರಿಸಿದ್ದ ಪಾಕಿಸ್ತಾನ: ಕರಾಳ ಸತ್ಯ ಬಯಲು ಮಾಡಿದ ಭಾರತ

ನವದೆಹಲಿ: ವಿಶ್ವಸಂಸ್ಥೆಯಲ್ಲಿ ಭಾರತ ಪಾಕಿಸ್ತಾನಕ್ಕೆ ಖಡಕ್ ತಿರುಗೇಟು ನೀಡಿದೆ. ಪಾಕಿಸ್ತಾನದ ದ್ವಿಮುಖ ನೀತಿಯನ್ನು ಕಟುವಾಗಿ ಟೀಕಿಸಿರುವ ಭಾರತ ಭಯೋತ್ಪಾದನೆಗೆ ಬೆಂಬಲ, ಅಲ್ಪಸಂಖ್ಯಾತರ ಹಕ್ಕುಗಳ ದಮನ ಮತ್ತು ಕಾರ್ಗಿಲ್ ಯುದ್ಧದಲ್ಲಿ ಸೈನಿಕರ ಶವಗಳನ್ನು ತಿರಸ್ಕರಿಸಿದ ಕರಾಳ ಸತ್ಯವನ್ನು ಬಯಲು ಮಾಡಿದೆ.

ವಿಶ್ವಸಂಸ್ಥೆಯಲ್ಲಿ ಭಾರತದ ಪ್ರಥಮ ಕಾರ್ಯದರ್ಶಿ ಭಾವಿಕಾ ಮಂಗಳಾನಂದನ್ ಅವರು ನೆರೆ ರಾಷ್ಟ್ರದ ನಕಲಿ ಕಾಳಜಿ ಹಾಗೂ ಇಬ್ಬಗೆಯ ನೀತಿಯನ್ನು ಕಟು ಶಬ್ದಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ, ಜಾಗತಿಕ ದಕ್ಷಿಣದ ದೇಶಗಳ ವಿರುದ್ಧ ಮಾತ್ರ ಪಕ್ಷಪಾತ ಹೊಂದಿರುವ ವಿಶ್ವಸಂಸ್ಥೆಯ ವಲಸಿಗರ ಮಾನವ ಹಕ್ಕುಗಳ ವಿಶೇಷ ವರದಿಯ ವಿಧಾನವನ್ನು ಭಾರತ ಇದೇ ವೇಳೆ ಬಲವಾಗಿ ತಿರಸ್ಕರಿಸಿದೆ.

ಪಾಕಿಸ್ತಾನದಲ್ಲಿ ಹಿಂದೂ, ಕ್ರಿಶ್ಚಿಯನ್, ಸಿಖ್ ಸೇರಿದಂತೆ ಅಲ್ಪಸಂಖ್ಯಾತರ ಸಂಖ್ಯೆ ದಿನೇ ದಿನೆ ಕ್ಷೀಣಿಸುತ್ತಿದೆ. ಅವರ ಮೂಲಭೂತ ಹಕ್ಕುಗಳನ್ನು ನಿರಂತರವಾಗಿ ದಮನಮಾಡಲಾಗುತ್ತಿದೆ. ತನ್ನ ದೇಶದ ಅಲ್ಪಸಂಖ್ಯಾತರ ಸುರಕ್ಷತೆಯನ್ನೇ ಖಚಿತಪಡಿಸಿಕೊಳ್ಳಲು ಸಾಧ್ಯವಾಗದ ರಾಷ್ಟ್ರವೊಂದು, ಭಾರತದಂತಹ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವಕ್ಕೆ ಮಾನವ ಹಕ್ಕುಗಳ ಕುರಿತು ಪಾಠ ಮಾಡುವ ಯಾವುದೇ ಹಕ್ಕನ್ನು ಹೊಂದಿಲ್ಲ ಎಂದು ಮಂಗಳಾನಂದನ್ ಗುಡುಗಿದರು.

ತನ್ನದೇ ಸೈನಿಕರ ಮೃತದೇಹ ಪಡೆಯದ ಪಾಕಿಸ್ತಾನ

1999ರ ಕಾರ್ಗಿಲ್ ಯುದ್ಧದ ಕರಾಳ ಇತಿಹಾಸವನ್ನು ನೆನಪಿಸಿದ ಮಂಗಳಾನಂದನ್, “ಯುದ್ಧದಲ್ಲಿ ಪ್ರಾಣ ಕಳೆದುಕೊಂಡ ತನ್ನದೇ ಸೇನೆಯ ಯೋಧರ ಮೃತದೇಹಗಳನ್ನು ಸ್ವೀಕರಿಸಲು ಹಿಂದೇಟು ಹಾಕಿ ನಿರಾಕರಿಸಿದ ನಾಚಿಕೆಗೇಡಿನ ಇತಿಹಾಸ ಪಾಕಿಸ್ತಾನಕ್ಕಿದೆ. ಅಂದು ಆ ಮೃತ ಸೈನಿಕರಿಗೆ ಇಸ್ಲಾಮಿಕ್ ವಿಧಿವಿಧಾನಗಳ ಪ್ರಕಾರ ಸಕಲ ಸೇನಾ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಿದ್ದು ಭಾರತೀಯ ಸೇನೆ. ತನ್ನ ಸೈನಿಕರನ್ನೇ ಧಿಕ್ಕರಿಸಿದ ದೇಶ ಇಂದು ಸಮಾಧಿ, ಧರ್ಮ ಮತ್ತು ನಂಬಿಕೆಯ ಬಗ್ಗೆ ನಾಚಿಕೆಯಿಲ್ಲದೆ ಮಾತನಾಡುತ್ತಿರುವುದು ದೊಡ್ಡ ವಿಪರ್ಯಾಸ” ಎಂದು ಛೀಮಾರಿ ಹಾಕಿದರು.

ಪಾಕಿಸ್ತಾನದಲ್ಲಿ ಮೋಸ್ಟ್ ವಾಂಟೆಡ್ ಉಗ್ರರು ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಒಬ್ಬ ಭಯೋತ್ಪಾದಕ ಕೇವಲ ಅಮಾಯಕರನ್ನು ಕೊಲ್ಲುವುದು ಮಾತ್ರವಲ್ಲ, ಇಡೀ ರಾಷ್ಟ್ರದ ಶಾಂತಿ ಮತ್ತು ಸ್ವಾಸ್ಥ್ಯವನ್ನು ಹಾಳುಮಾಡುತ್ತಾನೆ. ಮಾನವನ ಅತ್ಯಂತ ಪವಿತ್ರವಾದ ‘ಬದುಕುವ ಹಕ್ಕನ್ನು’ ಕಸಿದುಕೊಳ್ಳುವ ಭಯೋತ್ಪಾದಕರ ಹಕ್ಕುಗಳಿಗಾಗಿ ವಿಶ್ವಸಂಸ್ಥೆಯ ವೇದಿಕೆಯಲ್ಲಿ ವಕಾಲತ್ತು ವಹಿಸುವವರಿಗೆ, ಆ ಭಯೋತ್ಪಾದನೆಯಿಂದ ಬಲಿಯಾದ ಮುಗ್ಧ ಜನರ ಬಗ್ಗೆ ಕನಿಷ್ಠ ಕಾಳಜಿಯೂ ಇಲ್ಲದಿರುವುದು ದುರಂತ ಎಂದರು.

ಜಮ್ಮು-ಕಾಶ್ಮೀರದ ಕುರಿತು ಪಾಕಿಸ್ತಾನ ಪದೇ ಪದೇ ಹಸ್ತಕ್ಷೇಪ ಮಾಡುವುದನ್ನು ತಳ್ಳಿಹಾಕಿದ ಅವರು, “ಭಾರತದ ಅವಿಭಾಜ್ಯ ಅಂಗವಾದ ಜಮ್ಮು-ಕಾಶ್ಮೀರದ ಬಗ್ಗೆ ಮಾತನಾಡುವುದನ್ನು ಬಿಟ್ಟು, ರಾವಲಕೋಟ್ ಸೇರಿದಂತೆ ತನ್ನ ಅಕ್ರಮ ಆಕ್ರಮಣದಲ್ಲಿರುವ ಪಾಕ್ ಆಕ್ರಮಿತ ಕಾಶ್ಮೀರದ (PoK) ಜನರ ಅಭಿವೃದ್ಧಿ ಮತ್ತು ಅಲ್ಲಿನ ದುಸ್ಥಿತಿಯ ಕಡೆಗೆ ಪಾಕಿಸ್ತಾನ ಗಮನಹರಿಸಲಿ” ಎಂದು ಸಲಹೆ ನೀಡಿದರು.

ಇದೇ ವೇಳೆ ಕೋವಿಡ್-19 ಸಾಂಕ್ರಾಮಿಕದ ಅವಧಿಯ ವಲಸಿಗರ ಸ್ಥಿತಿಗತಿಯ ಕುರಿತ ವರದಿಯನ್ನು ಪ್ರಶ್ನಿಸಿದ ಭಾರತ, “ಎಲ್ಲಾ ತಪ್ಪುಗಳು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲೇ ನಡೆದಿವೆ ಎಂಬಂತೆ ವರದಿ ಸಿದ್ಧಪಡಿಸಲಾಗಿದೆ. ಆದರೆ, ಅಭಿವೃದ್ಧಿ ಹೊಂದಿದ ಶ್ರೀಮಂತ ಪಾಶ್ಚಿಮಾತ್ಯ ದೇಶಗಳಲ್ಲಿ ಸಂಭವಿಸಿದ ಇದೇ ರೀತಿಯ ದುರಂತ ಸನ್ನಿವೇಶಗಳಿಗೆ ವರದಿಗಾರರು ಜಾಣಕುರುಡು ಪ್ರದರ್ಶಿಸಿದ್ದಾರೆ” ಎಂದು ಆಕ್ಷೇಪ ವ್ಯಕ್ತಪಡಿಸಿತು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಂಗೀತಪ್ರಿಯರ ಗಮನ ಸೆಳೆಯುತ್ತಿರುವ ‘ಗಾಮಿನಿ’ ಚಿತ್ರದ ಹೊಸ ಹಾಡು: ಅನುರಾಧಾ ಭಟ್ ಗಾಯನಕ್ಕೆ ಮನಸೋತ ಪ್ರೇಕ್ಷಕರುಐಫಾ ವೇದಿಕೆಯಲ್ಲಿ ಕರೀನಾ ಕಪೂರ್ ಕಪ್ಪು ಲೆದರ್ ಲುಕ್ ಧಮಾಕ: ಫ್ಯಾಷನ್ ಪ್ರಿಯರ ಕಣ್ಣು ಕುಕ್ಕಿದ ಬಾಲಿವುಡ್ ಬೆಡಗಿಮಾಂಜಾ ದಾರ ಬಳಸದಂತೆ ಬೆಳಗಾವಿ ಎಸ್​ಪಿ ರಾಮರಾಜನ್ ಖಡಕ್ ಎಚ್ಚರಿಕೆ: ಹುಬ್ಬಳ್ಳಿ ಘಟನೆ ಬೆನ್ನಲ್ಲೇ ಕಠಿಣ ಕ್ರಮಮೊದಲ ವಾರದಲ್ಲೇ ಭರ್ಜರಿ ಯಶಸ್ಸು ಕಂಡ ರಣಬಾಲಿ: ಒಟಿಟಿ ಮತ್ತು ಥಿಯೇಟರ್ ಚರ್ಚೆಯ ಮಧ್ಯೆಯೂ ಬಾಕ್ಸ್ ಆಫೀಸ್‌ನಲ್ಲಿ ಮಿಂಚುBREAKING : ಏಷ್ಯನ್ ಪ್ಯಾರಾ ಗೇಮ್ಸ್ 2026 ; ರೈಫಲ್ ಶೂಟಿಂಗ್‌ನಲ್ಲಿ ಭಾರತದ ಮೊನಾ ಅಗರ್ವಾಲ್’ಗೆ 2ನೇ ಚಿನ್ನದ ಪದಕರೈಹಾನ್ ವಾದ್ರಾ ಕಲಾ ಪ್ರದರ್ಶನ ವಿವಾದ: ರಾಹುಲ್ ಗಾಂಧಿ ಮೌನಕ್ಕೆ ಬಿಜೆಪಿಯಿಂದ ಟೀಕೆ, ಕಾಂಗ್ರೆಸ್‌ನಲ್ಲಿ ಆಂತರಿಕ ಕಲಹದ ಆರೋಪವೆಬ್‌ಸೈಟ್‌ಗಳ ಮೇಲೆ ಹ್ಯಾಕರ್‌ಗಳ ಕಣ್ಣು! ಲಕ್ಷಾಂತರ ತಾಣಗಳಿಗೆ ಅಪಾಯ; ‘ಇಂಟರ್ನೆಟ್‌ ಲಾಕ್‌ಡೌನ್‌’ ಎಚ್ಚರಿಕೆ!ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಭಾರತದ ತಿರುಗೇಟು: ಕಾರ್ಗಿಲ್ ಯುದ್ಧ ಉಲ್ಲೇಖಿಸಿ ಭಯೋತ್ಪಾದನೆ, ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಟೀಕೆಸಿಜೆಪಿಗೆ ನಮ್ಮ ಬೆಂಬಲವಿಲ್ಲ, ಆದರೆ ಪ್ರತಿಭಟನೆಯ ಹಕ್ಕಿದೆ: ಅಣ್ಣಾಮಲೈ ಸ್ಪಷ್ಟನೆಉತ್ತರ ಪ್ರದೇಶ ಚುನಾವಣೆ: ಎಸ್‌ಪಿಗೆ 170 ಕ್ಷೇತ್ರಗಳ ಪಟ್ಟಿ ನೀಡಿದ ಕಾಂಗ್ರೆಸ್; 115–120 ಸ್ಥಾನಗಳಿಗೆ ಬೇಡಿಕ