Press ID & Credential Portal
Apply / Verify  ➔
LIVE TV LocalCrimeNationalInternationalPoliticsFinancialEducationTechnologyEntertainmentSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
International News

ಅಣುಗಳ ‘ಕನ್ನಡಿ ರಹಸ್ಯ’ ಭೇದಿಸಿದ ವಿಜ್ಞಾನಿಗಳಿಗೆ ನೊಬೆಲ್‌

ಸ್ಟಾಕಹೋಮ್‌, ಅ.7: ರಾಸಾಯನಿಕ ಅಣುಗಳಲ್ಲಿನ ‘ಕನ್ನಡಿ ಪ್ರತಿಬಿಂಬ’ದ ರಹಸ್ಯವನ್ನು ಭೇದಿಸಿ, ಅಸಮಮಿತ ಸಾವಯವ ಸಂಶ್ಲೇಷಣೆಯಲ್ಲಿ ಮಹತ್ವದ ಸಾಧನೆ ಮಾಡಿದ ಫ್ರಾನ್ಸ್‌ ಮೂಲದ ಹೆನ್ರಿ ಬಿ. ಕಾಗನ್‌ ಮತ್ತು ಜಪಾನ್‌ನ ಕೆನ್ಸೊ ಸೋಯಿ ಅವರಿಗೆ 2026ನೇ ಸಾಲಿನ ರಸಾಯನ ವಿಜ್ಞಾನ ನೊಬೆಲ್‌ ಪ್ರಶಸ್ತಿ ಘೋಷಿಸಲಾಗಿದೆ.

ಸ್ಟಾಕ್‌ಹೋಮ್‌ನ ರಾಯಲ್‌ ಸ್ವೀಡಿಷ್‌ ಅಕಾಡೆಮಿ ಆಫ್‌ ಸೈನ್ಸಸ್‌ ಬುಧವಾರ ವಿಜೇತರ ಹೆಸರು ಪ್ರಕಟಿಸಿದ್ದು, ‘ಅಸಮಮಿತ ಸಾವಯವ ಸಂಶ್ಲೇಷಣೆಯಲ್ಲಿ ನಾನ್‌-ಲೀನಿಯರ್‌ ಪರಿಣಾಮಗಳು ಮತ್ತು ಆಟೋಕ್ಯಾಟಲಿಸಿಸ್‌ನ ಆವಿಷ್ಕಾರಕ್ಕಾಗಿ’ ಇಬ್ಬರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಫ್ರಾನ್ಸ್‌ ಮೂಲದ 95 ವರ್ಷದ ಕಾಗನ್‌ ಓರ್ಸೆಯ್‌ನ ಯೂನಿವರ್ಸಿಟಿ ಪ್ಯಾರಿಸ್‌-ಸುಡ್‌ನೊಂದಿಗೆ ಗುರುತಿಸಿಕೊಂಡಿದ್ದರೆ, ಕೆನ್ಸೊ ಸೋಯಿ ಜಪಾನ್‌ನ ಟೊಕಿಯೊ ಯೂನಿವರ್ಸಿಟಿ ಆಫ್‌ ಸೈನ್ಸ್‌ನಲ್ಲಿ ಕಾರ್ಯನಿರ್ವಹಿಸಿದ್ದಾರೆ.

ಅನೇಕ ರಾಸಾಯನಿಕ ಅಣುಗಳು ಎಡಗೈ ಮತ್ತು ಬಲಗೈಗಳಂತೆ ಪರಸ್ಪರ ಕನ್ನಡಿ ಪ್ರತಿಬಿಂಬಗಳಾಗಿರುತ್ತವೆ. ಇವುಗಳನ್ನು ‘ಕೈರಲ್‌’ ಅಣುಗಳು ಎಂದು ಕರೆಯಲಾಗುತ್ತದೆ. ಜೀವಜಗತ್ತಿನಲ್ಲಿ ಇಂತಹ ಎರಡು ರೂಪಗಳಲ್ಲಿ ಸಾಮಾನ್ಯವಾಗಿ ಒಂದೇ ರೂಪ ಪ್ರಾಬಲ್ಯ ಪಡೆಯುತ್ತದೆ. ಇದನ್ನು ‘ಹೋಮೋಕೈರಾಲಿಟಿ’ ಎನ್ನಲಾಗುತ್ತದೆ. ಈ ಪ್ರಕ್ರಿಯೆ ಸ್ವಯಂಪ್ರೇರಿತವಾಗಿ ಹೇಗೆ ಉಂಟಾಗುತ್ತದೆ ಎಂಬ ಶತಮಾನಕ್ಕೂ ಹೆಚ್ಚು ಹಳೆಯ ಪ್ರಶ್ನೆಗೆ ಕಾಗನ್‌ ಮತ್ತು ಸೋಯಿ ಅವರ ಸಂಶೋಧನೆ ಉತ್ತರ ನೀಡಿದೆ.

ಕಾಗನ್‌ ಅಸಮಮಿತ ರಾಸಾಯನಿಕ ಕ್ರಿಯೆಗಳಲ್ಲಿ ಅತ್ಯಂತ ಸಣ್ಣ ಆರಂಭಿಕ ವ್ಯತ್ಯಾಸವೂ ದೊಡ್ಡ ಪರಿಣಾಮಕ್ಕೆ ಕಾರಣವಾಗಬಲ್ಲ ನಾನ್‌-ಲೀನಿಯರ್‌ ಪರಿಣಾಮಗಳನ್ನು ಗುರುತಿಸುವಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ.

ಸೋಯಿ ಅಸಮಮಿತ ಆಟೋಕ್ಯಾಟಲಿಸಿಸ್‌ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ‘ಸೋಯಿ ರಿಯಾಕ್ಷನ್‌’ನಲ್ಲಿ ಉತ್ಪತ್ತಿಯಾಗುವ ಅಣುವೇ ಅದೇ ರೀತಿಯ ಮತ್ತಷ್ಟು ಅಣುಗಳ ಉತ್ಪಾದನೆಗೆ ವೇಗ ನೀಡುತ್ತದೆ. ಇದರಿಂದ ಆರಂಭದಲ್ಲಿರುವ ಅತಿ ಸಣ್ಣ ಕೈರಾಲಿಟಿ ಅಸಮತೋಲನವನ್ನು ದೊಡ್ಡ ಪ್ರಮಾಣದಲ್ಲಿ ವೃದ್ಧಿಸಲು ಸಾಧ್ಯವಾಗುತ್ತದೆ.

“ಒಂದು ಶತಮಾನಕ್ಕೂ ಹೆಚ್ಚು ಹಳೆಯದಾದ ರಾಸಾಯನಿಕ ರಹಸ್ಯಕ್ಕೆ ಹೆನ್ರಿ ಕಾಗನ್‌ ಮತ್ತು ಕೆನ್ಸೊ ಸೋಯಿ ಪರಿಹಾರ ಕಂಡುಹಿಡಿದಿದ್ದಾರೆ. ಸ್ವಯಂಪ್ರೇರಿತವಾಗಿ ಹೋಮೋಕೈರಾಲಿಟಿ ಹೇಗೆ ಹೊರಹೊಮ್ಮುತ್ತದೆ ಎಂಬುದನ್ನು ತಮ್ಮ ಪ್ರಯೋಗಗಳ ಮೂಲಕ ತೋರಿಸಿದ್ದಾರೆ. ಅವರು ಅಭಿವೃದ್ಧಿಪಡಿಸಿದ ರಾಸಾಯನಿಕ ಪ್ರಕ್ರಿಯೆಗಳು ಅದ್ಭುತವಾಗಿವೆ” ಎಂದು ರಸಾಯನ ವಿಜ್ಞಾನ ನೊಬೆಲ್‌ ಸಮಿತಿ ಅಧ್ಯಕ್ಷ ಹೈನರ್ ಲಿಂಕೆ ಹೇಳಿದ್ದಾರೆ.

ಇವರ ಸಂಶೋಧನೆ ಔಷಧ ತಯಾರಿಕೆಯಲ್ಲಿಯೂ ಮಹತ್ವದ್ದಾಗಿದೆ. ಒಂದೇ ರಾಸಾಯನಿಕ ಸಂಯೋಜನೆಯ ಎರಡು ಕನ್ನಡಿ ರೂಪದ ಅಣುಗಳು ಮಾನವ ದೇಹದಲ್ಲಿ ವಿಭಿನ್ನ ಪರಿಣಾಮ ಉಂಟುಮಾಡಬಹುದು. ಹೀಗಾಗಿ ಅಗತ್ಯವಿರುವ ನಿರ್ದಿಷ್ಟ ರೂಪದ ಅಣುವನ್ನು ನಿಖರವಾಗಿ ತಯಾರಿಸುವುದು ಔಷಧಗಳ ಸುರಕ್ಷತೆ ಮತ್ತು ಪರಿಣಾಮಕಾರಿತ್ವಕ್ಕೆ ನಿರ್ಣಾಯಕವಾಗಿದೆ.

ಈ ಬಾರಿಯ ನೊಬೆಲ್‌ ಪ್ರಶಸ್ತಿಯ ಬಹುಮಾನ ಮೊತ್ತ 12 ಮಿಲಿಯನ್‌ ಸ್ವೀಡಿಷ್‌ ಕ್ರೋನರ್‌, ಅಂದರೆ ಸುಮಾರು 1.2 ಮಿಲಿಯನ್‌ ಅಮೆರಿಕನ್‌ ಡಾಲರ್‌ (ಸುಮಾರು ₹11.5 ಕೋಟಿ) ಆಗಿದ್ದು, ಇಬ್ಬರು ವಿಜ್ಞಾನಿಗಳು ಹಂಚಿಕೊಳ್ಳಲಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಿಸೆಂಬರ್ 7ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಸಾಧ್ಯತೆಎಂಎಸ್‌ಪಿ ಆಧರಿಸಿ ಕಬ್ಬಿಗೆ ದರ: ಡಿ.ಕೆ. ಶಿವಕುಮಾರಮತದಾರರ ಅಂತಿಮ ಪಟ್ಟಿಯಲ್ಲಿ ನಿಮ್ಮ ಹೆಸರು ಪರಿಶೀಲಿಸಿಚುನಾವಣಾ ಆಯೋಗದ ಸಮರ್ಥನೆಗೆ ಆಕ್ಷೇಪಣೆ ಸಲ್ಲಿಸಲು 10 ದಿನ ಕಾಲಾವಕಾಶಸಚಿವ ಜಿ. ಪರಮೇಶ್ವರ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು‘ಬಟ್ಟೆ ಹರಿದು ರಕ್ತಸ್ರಾವವಾಗಿತ್ತು’: ಟ್ರಂಪ್ ವಿರುದ್ಧ ಮಾಜಿ ಮಿಸ್ ಸ್ವಿಟ್ಜರ್ಲ್ಯಾಂಡ ಅತ್ಯಾಚಾರ ಆರೋಪ!ಮತದಾರರ ಪಟ್ಟಿಯಿಂದ 1 ಕೋಟಿ ಹೆಸರು ಡಿಲೀಟ್!ಕಬ್ಬಿನ ದರ ನಿಗದಿ ಸಭೆಯಲ್ಲಿ ರೈತ ಮುಖಂಡರ ಮಾರಾಮಾರಿ: ಸುವರ್ಣಸೌಧದಲ್ಲೇ ಕೈಕೈ ಮಿಲಾಯಿಸಿದ ಎರಡು ಬಣಗಳು!ಕನ್ನಡಿಗರಿಗೆ ಉದ್ಯೋಗ ನಿರಾಕರಿಸಿದರೆ ಖಾಸಗಿ ಸಂಸ್ಥೆಗಳ ವಿರುದ್ಧ ಕ್ರಮ: ಡಿ.ಕೆ. ಶಿವಕುಮಾರಜಲವಿದ್ಯುತ್ ಯೋಜನೆ ವಿರೋಧಿಸಿ ಅರುಣಾಚಲದಲ್ಲಿ ಹಿಂಸಾಚಾರ: ಭದ್ರತಾ ಪಡೆಯ ಎರಡು ತುಕಡಿ ರವಾನೆ