LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಡಿ.12ರಂದು ಪದ್ಮಗಂಧಿ ಚಿತ್ರ ರಿಲೀಸ್ಗೆ ತಯಾರಿ

ಬೆಂಗಳೂರು : ಪ್ರಸ್ತುತ ಕಾಲಘಟ್ಟದಲ್ಲಿ ಮಾಸ್ ಆರ್ ಆರ್ ,ಕಾಮಿಡಿ, ಥ್ರಿಲ್ಲರ್ ನಂತಹ ಕಮರ್ಷಿಯಲ್ ಸಿನಿಮಾಗಳಿಗೆ ಜನ ಹೆಚ್ಚು ಮನ್ನಣೆ ಕೊಡುತ್ತಿದ್ದಾರೆ, ನೋಡುತ್ತಿದ್ದಾರೆ ಇಷ್ಟಪಡುತ್ತಿದ್ದಾರೆ. ಅವೆಲ್ಲದಕ್ಕಿಂತ ಮೀರಿ ರಾಷ್ಟ್ರೀಯ ಪುಷ್ಪ(ಕಮಲ) ಎಂದೇ ಕರೆಸಿಕೊಳ್ಳುವ ಒಂದು ಹೂವಿನ ಮಹತ್ವವನ್ನು, ಇತಿಹಾಸವನ್ನು ಭಕ್ತಿ ಸ್ವರೂಪವನ್ನು ಕಟ್ಟಿಕೊಡುವ ಕೆಲಸವನ್ನು ಸುಚೇಂದ್ರ ಪ್ರಸಾದ್ ಅವರ ಸಂಭಾಷಣೆ, ನಿರ್ದೇಶನ, ಚಿತ್ರಕಥೆ ಮೂಲಕ ಪದ್ಮಗಂಧಿ ಸಿನಿಮಾವನ್ನು ವಿಭಿನ್ನವಾಗಿ ಕಟ್ಟಿಕೊಟ್ಟಿದ್ದಾರೆ.


ಪ್ರಾಚೀನದಿಂದ ಅರ್ವಾಚೀನದವರೆಗೆ  ಒಂದು ಹೂವಿನ ಸುತ್ತ ನಡೆಯುವ ಕಥೆ ಇದಾಗಿದ್ದು, ಪದ್ಮ ಗಂಧಿ ಎರಡು ಪದಗಳಿಗೂ ವಿಶೇಷವಾದಂತಹ ಅರ್ಥ ಕಲ್ಪಿಸಿಕೊಡಲಾಗಿದೆ. ಪದ್ಮ ಎಂದರೆ ಕಮಲ ಗಂಧಿ ಎಂದರೆ ಪರಿಮಳ. ಕಮಲದಲ್ಲಿ ಸುವಾಸನೆ ಬೀರುವದು ಎಂದರ್ಥ,  ಎಲ್ಲರಿಗೂ ಆಶ್ಚರ್ಯವಾಗಬಹುದು ಕಮಲದಲ್ಲಿ ಯಾವುದೇ ಸುವಾಸನೆ ಬೀರುವುದಿಲ್ಲ. ಆದರೆ ಒಬ್ಬ ನಿರ್ದೇಶಕ ಚಿತ್ರದ ಮೂಲಕ ಒಂದು ಪುಷ್ಪದ ಮಹತ್ವವನ್ನು ಪರಿಮಳವನ್ನು ಬೀರುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ.


ಪುಷ್ಪ ಗಂಧಿ ಸಿನಿಮಾ ಕೆಲಸ ಕಾರ್ಯಗಳು ಮುಕ್ತಾಯವಾಗಿದ್ದು ಇದೇ ಡಿಸೆಂಬರ್ 12ರಂದು 25-39 ಕೇಂದ್ರಗಳಲ್ಲಿ ರಿಲೀಸ್ ಮಾಡಲು ಇಡೀ ಚಿತ್ರತಂಡ ಸನ್ನದವಾಗಿದೆ. ಪ್ರೋ.ಎಸ್.ಆರ್.ಲೀಲಾ ಪರಿಕಲ್ಪನೆ ಮತ್ತು ನಿರ್ಮಾಣ, ನಟ ಕ.ಸುಚೇಂದ್ರ ಪ್ರಸಾದ ಚಿತ್ರಕಥೆ,ಸಂಭಾಷಣೆ, ನಿರ್ದೇಶನ ಮಾಡಿದ್ದಾರೆ, ಡಾ.ದೀಪಕ್ ಪರಮಶಿವನ್ ಸಂಗೀತ, ವೈಬಿಆರ್.ಮನು-ನಾಗರಾಜ ಅದ್ವಾನಿ-ಗಿರಿದರ್ ದಿವಾನ್ ಛಾಯಾಗ್ರಹಣ ಮೂಲಕ ಸೆರೆ ಹಿಡಿಯುವ ಕೆಲಸ ಮಾಡಿದ್ದಾರೆ.


*ತಾರಾಗಣದಲ್ಲಿ*


ಮಹಾಪದ್ಮ, ಪರಿಪೂರ್ಣ ಚಂದ್ರಶೇಖರ್, ಶತಾವಧಾನಿ ಡಾ.ಆರ್.ಗಣೇಶ್, ಡಾ.ಗೌರಿಸುಬ್ರಹ್ಮಣ್ಯ, ಡಾ.ಪ್ರೇಮಾ,  ಡಾ.ಹೇಮಂತ್‌ಕುಮಾರ್, ಆಚಾರ್ಯ ಮೃತ್ಯುಂಜಯಶಾಸ್ತ್ರಿ, ಜಿ.ಎಲ್.ಭಟ್(ಶಿಲ್ಪಜ್ಞ) ಮುಂತಾದವರು ಅಭಿನಯಿಸಿದ್ದಾರೆ. ಸುಮಾರು ಮೂವತ್ತಕ್ಕಿಂತ ಹೆಚ್ಚು ಪಾತ್ರಗಳು ಈ ಒಂದು ವಿಶೇಷವಾದಂತಹ ಸುಗಂಧ ಪರಿಮಳ ಬೀರುವ ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದಾರೆ. ಬಹುತೇಕವಾಗಿ ಎಲ್ಲರೂ ಸಹ ಹೊಸ ಪರಿಚಯದವರೇ ಆಗಿದ್ದಾರೆ.  ಕನ್ನಡ, ಹಿಂದಿ ಹಾಗೂ ಸಂಸ್ಕೃತ ಭಾಷೆಯಲ್ಲಿ ಸಿನಿಮಾ ನಿರ್ಮಾಣ ಮಾಡಲಾಗಿದೆ ಮೊದಲು ಕನ್ನಡದಲ್ಲಿ ತೆರೆ ಕಾಣಲಿದೆ.


ಸಿನಿಮಾ ಏಕೆ ನೋಡಬೇಕು?


ಸಿನೆಮಾ ಏಕೆ ನೊಡಬೇಕು ಎಂಬುದು  ಪದ್ಮಗಂಧಿ ಸಿನಿಮಾದಲ್ಲಿ ತೋರಿಸಿಕೊಟ್ಟಿದ್ದಾರೆ ಸುಚೇಂದ್ರ ಪ್ರಸಾದ್, ಒಂದು ಸಿನಿಮಾ ಅಂದರೆ ಶುಚಿ,ರುಚಿ,ಸವಿರುಚಿ ಅಭಿರುಚಿ ಇದೆ ಅದನ್ನು ಇಲ್ಲಿ ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ.  ಈ ಸಿನಿಮಾ ಹೆಚ್ಚು ಮನೋರಂಜನೆ ಇಲ್ಲದಿದ್ದರೂ ಸಹ ಜ್ಞಾನಾರ್ಜನೆಗೆ ಹೆಚ್ಚು ಮಹತ್ವ ಕೊಡಲಾಗಿದೆ ಇದರಿಂದ ತಿಳಿದುಕೊಳ್ಳಬೇಕಾದಂತಹ ವಿಷಯಗಳು ಹಾಗೂ ವಿಷಯಗಳು ಹೆಚ್ಚು ಇರುವುದರಿಂದ ಪ್ರತಿಯೊಬ್ಬರಿಗೂ ಭಕ್ತಿಯ ಪರಾಕ್ಷ್ಯಲ್ಲಿ ತಿಳಿಸುವ ಪ್ರಯತ್ನ ಮಾಡಿದ್ದಾರೆ. ಇದನ್ನು ಒಂದು ಬಾರಿ ನೋಡಿದರೆ ಅರ್ಥ ಆಗುವುದಿಲ್ಲ ಎನಿಸುತ್ತದೆ ಎರಡು ಮೂರು ಬಾರಿ ಸಿನಿಮಾ ವೀಕ್ಷಣೆ ಮಾಡಿದರೆ ಸಿನಿಮಾದ ಮಹತ್ವ ಸಾಕಷ್ಟು ತಿಳಿಯುತ್ತದೆ ಎಂದು ಚಿತ್ರತಂಡ ಅಭಿಪ್ರಾಯ ಪಟ್ಟಿದೆ.


ಪದ್ಮಗಂಧಿ ಸಿನಿಮಾಗೆ ಈಗಾಗಲೇ ಕನ್ನಡ ಸಂಸ್ಕೃತ ಭಾಷೆಯ ನೇರ ಚಿತ್ರ ಎಂದು ಪ್ರಮಾಣ ಪತ್ರ ಕೊಡಲಾಗಿದೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಕ್ಕಿದೆ. ಇಡೀ ಸಿನೆಮಾದಲ್ಲಿನ ಕಥೆ,ಸನ್ನಿವೇಶ, ಪ್ರಾರಂಭದಿಂದ ಅಂತ್ಯದ ವರೆಗೆ ಎಲ್ಲವನ್ನು ಇಡೀ ಸಿನೆಮಾ ತಂಡ ಹೇಳಿಕೊಂಡಿದೆ.


ಇಡೀ ಸಿನಿಮಾದ ನಿರ್ಮಾಣ ಹಾಗೂ ಪರಿಕಲ್ಪನೆ ಹೊತ್ತಿರುವ ಪ್ರೊ. ಎಸ್ ಆರ್ ಲೀಲಾ ಅವರು ಈಗಾಗಲೇ ಒಂದೆರಡು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದು, ಯಾವುದು ಸಹ ಚಿತ್ರಮಂದಿರದಲ್ಲಿ ರಿಲೀಸ್ ಆಗಿಲ್ಲ, ವೈಯಕ್ತಿಕವಾಗಿ ಬಳಸಿಕೊಳ್ಳಲಾಗಿದೆ, ಸಿನಿಮಾ ಕ್ಷೇತ್ರದಲ್ಲಿ ಲೀಲಾ ಅವರಿಗೆ ಅನುಭವವಿತ್ತು, ಸಾಕಷ್ಟು ವರ್ಷಗಳ ಕಾಲ ಅಧ್ಯಯನ ನಡೆಸಿ ಕಮಲ ಹೂವಿನ ವಿಚಾರವಾಗಿ ದಾಖಲೆಗಳನ್ನು ಕಲೆಹಾಕಿ ಅದರ ಮಹತ್ವವನ್ನು ತಿಳಿದುಕೊಂಡು ಅವಿರತ ಸಂಶೋಧನೆಯಿಂದ ಸಿನಿಮಾದ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ.


ಇಡೀ ಸಿನಿಮಾ ಎರಡು ಗಂಟೆಯ ಕಾಲಾವಧಿಯಿದ್ದು ಎಲ್ಲಾ ವಿಚಾರಧಾರೆಗಳನ್ನು ಸಹ ಒಂದೇ ಸೂರಿನ ಅಡಿಯಲ್ಲಿ ಕಟ್ಟಿಕೊಡುವ ಹಾಗೂ ಪ್ರಾಚೀನವಾದಂತಹ ವಿಚಾರಧಾರೆಗಳನ್ನು ಸಮಾಜಕ್ಕೆ ತಿಳಿಯಪಡಿಸುವ ವಿಶಿಷ್ಟ ಕೆಲಸಕ್ಕೆ ಕೈ ಹಾಕಿದ್ದು ಇನ್ನೇನು ಕೆಲವೇ ದಿನಗಳಲ್ಲಿ ರಿಲೀಸ್ ಆಗಲಿದೆ. ರಿಲೀಸ್ ಆದ ಮೇಲೆ ಪ್ರೇಕ್ಷಕರಿಂದ ಯಾವ ಪ್ರತಿಕ್ರಿಯೆ ಬರುತ್ತದೆ ಎಂಬುದನ್ನು ಕಾದು ನೋಡಬೇಕು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆಉಡಾನ್' ಯೋಜನೆ ಮೂಲಕ ಭಾರತದ ಭವಿಷ್ಯದ ವೈದ್ಯಕೀಯ ಕಾರ್ಯಪಡೆಯನ್ನು ನಿರ್ಮಿಸುವ ಬದ್ಧತೆಯನ್ನು ಸಾರಿದ ನಾರಾಯಣ ಹೆಲ್ತ್ಮೆಟ್ರೋ ಟಿಕೆಟ್ ದರ: ಕೇಂದ್ರದತ್ತ ಬೊಟ್ಟು ಮಾಡಿದ ರಾಜ್ಯ ಸರ್ಕಾರಕ್ಕೆ ದಾಖಲೆ ಸಮೇತ ಟಾಂಗ್ ಕೊಟ್ಟ ನಿಖಿಲ್ಬಿಜೆಪಿ ಜಾಹೀರಾತಿನ ವಿರುದ್ಧ ಎಎಪಿ ದೂರುಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ, 20 ವರ್ಷ ಕಳೆದರೂ ರೈತರಿಗೆ ಸಿಗತ ಪರಿಹಾರಕಾಂಗ್ರೆಸ್ ಪಕ್ಷ ಪಾರ್ಕಿಂಗ್ ವಿಚಾರದಲ್ಲಿ ಅಂದಾ ದರ್ಬಾರ್ ಮಾಡಲು ಹೊರಟಿದೆ