LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಭೂ ರಹಿತ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಜಮೀನು ಖರೀದಿ – ಸಾರ್ವಜನಿಕ ಆಕ್ಷೇಪಣೆಗೆ ಆಹ್ವಾನ

ಬಳ್ಳಾರಿ ;  ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ 2025-26ನೇ ಸಾಲಿನ ‘ಭೂ ಒಡೆತನ ಯೋಜನೆ’ಯಡಿ ಭೂ ರಹಿತ ಪರಿಶಿಷ್ಟ ಪಂಗಡದ ಮಹಿಳಾ ಕೃಷಿ ಕಾರ್ಮಿಕರಿಗೆ ಜಮೀನು ಖರೀದಿಸಲು ಉದ್ದೇಶಿಸಲಾಗಿದ್ದು, ಈ ಯೋಜನೆಯಡಿ ಬಳ್ಳಾರಿ ತಾಲ್ಲೂಕಿನ ಭೂ ಮಾಲೀಕರೊಬ್ಬರು ತಮ್ಮ ಜಮೀನನ್ನು ನಿಗಮಕ್ಕೆ ಮಾರಾಟ ಮಾಡಲು ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಜಮೀನಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಏನಾದರೂ ಆಕ್ಷೇಪಣೆಗಳಿದ್ದಲ್ಲಿ, ಅವುಗಳನ್ನು ಸಲ್ಲಿಸಲು ನಿಗಮವು ಕಾಲಾವಕಾಶ ನೀಡಿದೆ.

ಜಮೀನಿನ ವಿವರ

ಬಳ್ಳಾರಿ ತಾಲ್ಲೂಕಿನ ರೂಪನಗುಡಿ ಹೋಬಳಿಯ ಕಮ್ಮರಚೇಡು ಗ್ರಾಮದ ಸರ್ವೆ ನಂಬರ್ 4/2, ವಿಸ್ತೀರ್ಣ 7 ಎಕರೆ 58 ಗುಂಟೆ.

ಮಾಲೀಕರ ವಿಳಾಸ: ಕೆ.ಹೆಚ್. ಮಹೇಶ್ (ತಂದೆ: ಹನುಮಂತ ರೆಡ್ಡಿ), ವಾರ್ಡ್ ನಂ. 29, ಬಂಡಿಹಟ್ಟಿ, ತಾಯಮ್ಮ ದೇವಸ್ಥಾನ ಹತ್ತಿರ, ಕೌಲ್ ಬಜಾರ್, ಬಳ್ಳಾರಿ ನಗರ.

ಈ ಜಮೀನಿನ ಮಾರಾಟ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಯಾವುದೇ ರೀತಿಯ ಕಾನೂನಾತ್ಮಕ ಅಥವಾ ಇತರ ಆಕ್ಷೇಪಣೆಗಳಿದ್ದಲ್ಲಿ ಮೇ 30 ರೊಳಗಾಗಿ ಲಿಖಿತ ರೂಪದಲ್ಲಿ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತ, ನಂ. 37/10, ನಂದಿ ಶಾಲೆ ಹಿಂಭಾಗ, 1ನೇ ತಿರುವು, ನಂದಿ ಕಾಲೋನಿ, ಕಂಟೋನ್ಮೆಂಟ್, ಬಳ್ಳಾರಿ ಇಲ್ಲಿಗೆ ಕಚೇರಿಯ ಅವಧಿಯಲ್ಲಿ ನೇರವಾಗಿ ಭೇಟಿ ನೀಡಿ ಸಲ್ಲಿಸಬಹುದು.ಹೆಚ್ಚಿನ ಮಾಹಿತಿಗಾಗಿ ದೂ.08392-245551 ಗೆ ಸಂಪರ್ಕಿಸಬಹುದಾಗಿದೆ. ನಿಗದಿತ ದಿನಾಂಕದ ನಂತರ ಬರುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲೆಗಳಲ್ಲಿ ಹಿಜಾಬ್ ಧರಿಸಬಹುದಾದರೆ ಹಿಂದೂಗಳಿಗೆ ಕೇಸರಿ ಶಾಲು ಹಾಕಲೂ ಅವಕಾಶ ನೀಡಬೇಕು: ಯತ್ನಾಳ್ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್: ಟಿಕೆಟ್ ಕನ್ಫರ್ಮ್ ಆಗುತ್ತೋ ಇಲ್ಲವೋ ಅಂತ ಬುಕಿಂಗ್‌ಗೂ ಮುನ್ನವೇ ಹೇಳುತ್ತೆ ಈ ಹೊಸ ಆ್ಯಪ್!ವರ್ಗಾವಣೆ ನಿರೀಕ್ಷೆಯಲ್ಲಿದ್ದ ಪದವಿ ಕಾಲೇಜು ಬೋಧಕರಿಗೆ ಗುಡ್ ನ್ಯೂಸ್: ವೇಳಾಪಟ್ಟಿ ಪ್ರಕಟಶೇ. 12.5 ರಷ್ಟು ವೇತನ ಹೆಚ್ಚಳ ಒಪ್ಪದ ಸಾರಿಗೆ ನೌಕರರು, ಮೇ 20ರಿಂದ ಮುಷ್ಕರದ ಎಚ್ಚರಿಕೆBIG NEWS : ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು: ಸರ್ಕಾರದಿಂದ ಮಹತ್ವದ ಆದೇಶALERT : ಸಾರ್ವಜನಿಕರೇ ಎಚ್ಚರ : ಶೇರು ಮಾರುಕಟ್ಟೆ ಹೂಡಿಕೆ ಹೆಸರಲ್ಲಿ ಉದ್ಯಮಿಗೆ 16 ಕೋಟಿ ರೂ. ವಂಚನೆ!ಮೇ 18 ರಿಂದ SSLC ಪರೀಕ್ಷೆ-2 ಆರಂಭ ; ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆGOOD NEWS : ಉದ್ಯೋಗಿಗಳಿಗೆ ಗುಡ್ ನ್ಯೂಸ್ ; ಬೆಂಗಳೂರಿನ ಕೆಲ ಕಂಪನಿಗಳಿಂದ ‘ವರ್ಕ್ ಫ್ರಮ್ ಹೋಮ್’ ನೀಡಲು ಚಿಂತನೆ.!ಬೈಕ್ ಬಾಕ್ಸ್ ನಲ್ಲಿದ್ದ 1 ಲಕ್ಷ ಹಣ ಕದ್ದು ಪರಾರಿಯಾದ ಖದೀಮರು: ಪೊಲೀಸ್ ಠಾಣೆ ಎದುರೇ ಘಟನೆBIG NEWS : ಬೆಂಗಳೂರಿನ ರೈಲ್ವೇ ನಿಲ್ದಾಣದಲ್ಲಿ 24 ಮಕ್ಕಳ ರಕ್ಷಣೆ : ಮದರಸಾದ ನರಕಯಾತನೆ ಬಿಚ್ಚಿಟ್ಟ ಬಿಹಾರದ ಬಾಲಕರು.!