
ಸಿರುಗುಪ್ಪ. ಜನವರಿ 28. ನಗರದ ಬಳ್ಳಾರಿ ರಸ್ತೆಯಲ್ಲಿರುವ ಶ್ರೀಮೌನೇಶ್ವರದೇವಸ್ಥಾನದಲ್ಲಿಶ್ರೀಮೌನೇಶ್ವರಮಹಾಸ್ವಾಮಿಗಳ7ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಬುಧವಾರ ಬೆಳಿಗ್ಗೆ ಶ್ರೀ ಕಾಳಿಕಾ ದೇವಸ್ಥಾನದಲ್ಲಿ ಶ್ರೀದೇವಿಗೆ ಪಂಚಾಮೃತ ಅಭಿಷೇಕ, ವಿವಿಧ ಪೂಜೆಗಳನ್ನು ನೆರವೇರಿಸಿ ಹೂಗಳಿಂದ ವಿಶೇಷ ಅಲಂಕಾರ ಮಾಡಿದ ನಂತರ, ಶ್ರೀ ಮೌನೇಶ್ವರ ಉತ್ಸವ ಮೂರ್ತಿಯನ್ನು ಪುರಂತರ ಸೇವೆ, ಮಂಗಳ ವಾದ್ಯಗಳೊಂದಿಗೆ ಶ್ರೀ ಮೌನೇಶ್ವರ ದೇವಸ್ಥಾನಕ್ಕೆ ತರಲಾಯಿತು.
ಶ್ರೀ ಮೌನೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ಶ್ರೀ ಮೌನೇಶ್ವರ ಸ್ವಾಮಿಯ ಮೂರ್ತಿಗೆ ವಿವಿಧ ಅಭಿಷೇಕಗಳನ್ನು ನೆರವೇರಿಸಿ, ವಿವಿಧ ಹೂಗಳಿಂದ ಅಲಂಕರಿಸಿ ಮಹಾಮಂಗಳಾರತಿ ಮಾಡಲಾಯಿತು. ನಂತರ ದೇವಸ್ಥಾನದ ಆವರಣದಲ್ಲಿ ಶ್ರೀ ಮೌನೇಶ್ವರನ ಭಾವಚಿತ್ರವನ್ನು ಇಟ್ಟು ವಿಶಿಷ್ಟ ಖಾದ್ಯ ಮಾದಲಿಗೆ ಪೂಜೆಯನ್ನು ನೆರವೇರಿಸಿ ಮಹಾಮಂಗಳಾರತಿ ಮಾಡಿದ ನಂತರ ಭಕ್ತರಿಗೆ ಮಾದಲಿ ಪ್ರಸಾದವನ್ನು ವಿತರಿಸಲಾಯಿತು. ನಂತರ ಅನ್ನ ದಾಸೋಹ ನಡೆಯಿತು. ಇದೇ ಸಂದರ್ಭದಲ್ಲಿ ಮೂರುಜನ ಮಕ್ಕಳಿಗೆ ಉಪನಯನ ಕಾರ್ಯಕ್ರಮ ನಡೆಯಿತು.
ಪುರೋಹಿತರಾದ ಬ್ರಹ್ಮಶ್ರೀ ಆಯ್ಯಪ್ಪಸ್ವಾಮಿ ವಿಶ್ವಕರ್ಮ, ವೇ.ಪಂ. ಮಲ್ಲಿಕಾರ್ಜುನ ಶಾಸ್ತ್ರಿ,ಆದಿವಿಷ್ಣು ಆಚಾರಿ, ಮಾನಪ್ಪ ಆಚಾರಿ, ಎಚ್ ಶಂಕ್ರಾಚಾರಿ, ಸಿದ್ದಾರ್ಥ ಆಚಾರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಶ್ರೀ ಮೌನೇಶ್ವರ ದೇವಸ್ಥಾನ ಟ್ರಸ್ಟ್ (ರಿ.) ಕಾಳಿಕಾ ಕಮಠೇಶ್ವರ ದೇವಸ್ಥಾನ ಟ್ರಸ್ಟ್ (ರಿ.) ಸಿರುಗುಪ್ಪ ಮತ್ತು ವಿಶ್ವಕರ್ಮಸಮಾಜದ ಮುಖಂಡರರಾದ ,ಮೌನೇಶ ಆಚಾರಿ , ಅರಳಿಗನೂರ ರಾಮಲಿಂಗ ಆಚಾರಿ , ಹಳೆಕೊಟೆ ವಿರೇಶ ಆಚಾರಿ ಸೇರಿದಂತೆ,ವಿರೇಶ ಆಚಾರಿ ತಾಲೂಕಿನ ವಿಶ್ವಕರ್ಮ ಸಮಾಜದ ಬಂದುಗಳು ಉಪಸ್ಥಿತಿರಿದ್ದರು