LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ದಾಂಪತ್ಯದಲ್ಲಿ ಬಿರುಕು, ಎಆರ್​ ರೆಹಮಾನ್​ಗೆ ವಿಚ್ಛೇದನ ನೀಡಿದ ಸೈರಾ ಬಾನು..!

ನವದೆಹಲಿ : ಎಆರ್ ರೆಹಮಾನ್ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಪತ್ನಿ ಸೈರಾ ಬಾನು ಪತಿಯಿಂದ ವಿಚ್ಛೇದನ ಪಡೆದು ಬೇರ್ಪಡುವುದಾಗಿ ಘೋಷಿಸಿದ್ದಾರೆ. ವಂದನಾ ಶಾ ಮತ್ತು ಅಸೋಸಿಯೇಟ್ಸ್ ದಂಪತಿಗಳ ಪ್ರತ್ಯೇಕತೆಯ ನಿರ್ಧಾರದ ಬಗ್ಗೆ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು 29 ವರ್ಷಗಳ ದಾಂಪತ್ಯಕ್ಕೆ ಇಬ್ಬರು ತೆರೆ ಎಳೆದಿದ್ದಾರೆ.

ಮದುವೆಯಾದ ಹಲವು ವರ್ಷಗಳ ನಂತರ ಸೈರಾ ಅವರು ತಮ್ಮ ಪತಿ ಎಆರ್ ರೆಹಮಾನ್ ನಿಂದ ಬೇರ್ಪಡುವ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಒತ್ತಡ ಮತ್ತು ತೊಂದರೆಗಳು ತಮ್ಮ ನಡುವೆ ಸರಿಪಡಿಸಲಾಗದ ಅಂತರ ಸೃಷ್ಟಿಸಿವೆ. ಈ ಸವಾಲಿನ ಸಮಯದಲ್ಲಿ ಸಾರ್ವಜನಿಕರಿಂದ ಗೌಪ್ಯತೆ ಹಾಗೂ ನಿರ್ಧಾರ ಗೌರವಿಸಲು ಮನವಿ ಮಾಡಿದ್ದೇನೆ ಎಂದು ಸೈರಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಎಂದು ವರದಿ ಆಗಿದೆ.

ಎ.ಆರ್​ ರೆಹಮಾನ್ 1995 ರಲ್ಲಿ ಸೈರಾ ಅವರನ್ನು ಅರೇಂಜ್ಡ್ ಮ್ಯಾರೇಜ್ ಮಾಡಿಕೊಂಡಿದ್ರ. ಬಾಲಿವುಡ್​ನ ಬಹುಬೇಡಿಕೆ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಅವರ ಹಾಡುಗಳಿಗೆ ತಲೆದೂಗದವರೇ ಇಲ್ಲ ಎನ್ನಬಹುದು. 7 ಬಾರಿ ನ್ಯಾಷನಲ್ ಅವಾರ್ಡ್ ಗೆದ್ದ ಭಾರತದ ಏಕೈಕ ಮ್ಯೂಸಿಕ್ ಡೈರೆಕ್ಟರ್ ಆಗಿದ್ದಾರೆ. 1992ರಲ್ಲಿ ಮಣಿರತ್ನಂ ಅವರ ರೋಜಾ ಸಿನಿಮಾ ಮೂಲಕ ತಮಿಳು ಚಿತ್ರರಂಗಕ್ಕೆ ಸಂಗೀತ ನಿರ್ದೇಶಕರಾಗಿ ಪದಾರ್ಪಣೆ ಮಾಡಿದರು.

ಅವರು ಮೊದಲ ಸಿನಿಮಾದ ಮೂಲಕವೇ ರೋಜಾಗಾಗಿ ಮೊದಲ ನ್ಯಾಷನಲ್ ಅವಾರ್ಡ್ ಗಳಿಸಿದರು. ಗೋಲ್ಡನ್ ಗ್ಲೋಬ್ಸ್, ಕ್ರಿಟಿಕ್ ಚಾಯ್ಸ್ ಮೂವಿ ಅವಾರ್ಡ್ಸ್ ಹಾಗೂ ಆಸ್ಕರ್ ಕೂಡಾ ಸೇರಿದೆ. ಸ್ಲಮ್ ಡಾಗ್ ಮಿಲಿಯನೇರ್​​ಗಾಗಿ ಅವರು ಆಸ್ಕರ್ ಪಡೆದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ.ವಿಷ್ಣುವರ್ಧನ್ ಸ್ಮಾರಕಕ್ಕೆ ಜಾಗ ಖರೀದಿಸಿದ ಕಿಚ್ಚ ಸುದೀಪ್ಆ. 23, 24 ರಂದು ಕೆಲವು ರೈಲುಗಳು ರದ್ದು, ಸಂಚಾರದಲ್ಲಿ ಬದಲಾವಣೆಸ್ಫೋಟಕ ತಿರುವು ಪಡೆದುಕೊಂಡ ಧರ್ಮಸ್ಥಳ ಪ್ರಕರಣಲಕ್ಷಗಟ್ಟಲೆ ಸಂಬಳದ ಕೆಲಸ ಬಿಟ್ಟು ಐಎಎಸ್ ಟಾಪರ್ ಆದ ಉತ್ಸವ್ ಗೌತಮ್ ಸಕ್ಸಸ್‌ ಸ್ಟೋರಿವಾಯುಭಾರ ಕುಸಿತ : ಆಗಸ್ಟ್ 19 ಮತ್ತು 20ರಂದು ರಾಜ್ಯಾದ್ಯಂತ ವ್ಯಾಪಕ ಮಳೆ.!ಆಗಸ್ಟ್ 19 ಮಳೆ ಅಬ್ಬರ ಮುಂದುವರೆದಿದ್ದು ಮುನ್ನೆಚ್ಚರಿಕೆ ಕ್ರಮ ಈ ಜಿಲ್ಲೆಗಳಲ್ಲಿ ಶಾಲಾ-ಕಾಲೇಜು ರಜೆ.!ಗ್ರಾಮಾಂತರ ಪ್ರದೇಶ ಹಾಗೂ ದಾವಣೆಗರೆ ಈ ಭಾಗಗಳಲ್ಲಿ ಕರಂಟ್ ಇರಲ್ಲ.!ಒಳ ಮೀಸಲಾತಿ : ನಾಗಮೋಹನ್ದಾಸ್ ಆಯೋಗ ದತ್ತಾಂಶ ಸರಿ: ಜೆ.ಯಾದವರೆಡ್ಡಿಸರ್ಪಸಂಸ್ಕಾರ ಒಂದೇ ಸಾಕು ಮದುವೆ ಸಂತಾನ ಆರೋಗ್ಯದ ಸಮಸ್ಯೆಗೆ ಶಾಶ್ವತ ಪರಿಹಾರ ಸರ್ಪ ಸಂಸ್ಕಾರದ ಮಹತ್ವ ತಿಳಿದು ಪರಿಹಾರ ಮಾಡಿಕೊಳ್ಳಿ....!ದಿನದ ಮಂಡಕ್ಕಿ ಒಗ್ಗರಣೆ –ಮಿರ್ಚಿ.! 19-08-2025..!