ಬೆಂಗಳೂರು: ಬಾಲಿವುಡ್ ನಟ ಶಾರುಖ್ ಖಾನ್ ಹುಟ್ಟುಹಬ್ಬ ಹಾಗೂ ಕರ್ನಾಟಕ ರಾಜ್ಯೊತ್ಸವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. 
ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ಸಮಿತಿ ಬೀದಿಬದಿ ವ್ಯಾಪಾರಿಗಳ ವಿಭಾಗ ಉಪಾದ್ಯಕ್ಷರಾದ ಹಿಘ್ಬುಲ್ ರೆಹಮಾನ್ ಅವರ ನೇತೃತ್ವದಲ್ಲಿ 70ನೇ ಕರ್ನಾಟಕ ರಾಜ್ಯೋತ್ಸವ, ಶಾರುಖ್ ಖಾನ್ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ವಿಶೇಚವಾಗಿ ಆಚರಣೆ ಮಾಡಲಾಯಿತು.
ಬೆಂಗಳೂರು ಕೇಂದ್ರದಲ್ಲಿನ ಬೀದಿಬದಿ ವ್ಯಾಪಾರಿಗಳನ್ನು ಗಮನದಲ್ಲಿಟ್ಟುಕೊಂಡು ಕನ್ನಡ ನಾಡಿನ ಭಾಷೆ, ಸಂಸ್ಕೃತಿ, ಆಚಾರ,ವಿಚಾರದ ಬಗ್ಗೆ ಸಂಭ್ರಮಿಸುವ ಕೆಲಸವನ್ನು ಅನ್ಯಧರ್ಮದವರು ಮಾಡುತ್ತಿರುವುದು ಹೆಗ್ಗಳಿಕೆಯ ವಿಚಾರವಾಗಿದೆ.
ಅಲ್ಲದೆ ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆಯ ಯನಕ ಕರ್ನಾಟಕ ರಾಜ್ಯೋತ್ಸವ ಹಿನ್ನಲೆ ಕನ್ನಡದ ಹಾಡುಗಳು ಹಾಗೂ ಶಾರುಖ್ ಖಾನ್ ಅವರ ನಟನೆಯ ಗೀತೆಗಳನ್ನು ಗಾಯಕರು ಹಾಡುವ ಮೂಲಕ ನೆರೆದಿದ್ದವರನ್ನು ರಂಜಿಸಿದರು.
ಅಲ್ಲದೆ ಕಾರ್ಯಕ್ರಮಕ್ಕೆ BBMPಯ ಮಾಜಿ ಸದಸ್ಯ ಹಾಗೂ ಆರ್ ವಿ ದೇವರಾಜ್ ಪುತ್ರ ಯುವರಾಜ್ ಅವರು ಆಗಮಿಸಿ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಮುಂದಿನ ಶಾಸಕ ಯುವರಾಜ್ ಎಂದು ಅಭಿಮಾನಿಗಳು ಘೋಷಣೆ ಕೂಗಿದರು. ಕ್ಷೇತ್ರದಲ್ಲಿ ಶಾಸಕನಾಗುವ ಅರ್ಹತೆ ಇದ್ದರೆ ಮಾತ್ರ ಜನರು ಹೇಳಲಿ, ಇಲ್ಲ ಅಂದ್ರೆ ಬೇಡ ಎನ್ನುವ ಮೂಲಕ ಜನರ ನೀವೆ ನಿರ್ಧಾರ ಮಾಡಿ ಎಂದು ತಿಳಿಸಿದರು. 
ಇನ್ನು ಇದೇ ವೇಳೆ ಬೀದಿಬದಿ ಬೆಂಗಳೂರು ನಗರ ಕೇಂದ್ರದ ವ್ಯಾಪಾರಿಗಳನ್ನು ವೇದಿಕೆ ಮೇಲೆ ಸನ್ಮಾನಿಸಿದರು. ಈ ವೇಳೆ ಕಾಂಗ್ರೆಸ್ ನ ಕಾರ್ಯಕರ್ತರು ಮುಖಂಡರು ಉಪಸ್ಥಿತರಿದ್ದರು.