E-PAPER
17 Nov 2026, 05:21:21 PM|
Gold₹13521/gGold24K ₹13,521/g - 22K ₹12,383/gTap for full details
Press ID & Credential Portal
Apply / Verify  ➔
LIVE TV State NewsLocalCrimeNationalInternationalPoliticsBusinessEditorialEducationTechnologyEntertainmentSportsHealthFeatureTraveling
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಶಿವಾ ಪ್ರಿಂಟರ್ಸ್ ರಿಂದ ಎರಡು ಕೃತಿ ಲೋಕಾರ್ಪಣೆ - ವಚನಗಳಲ್ಲಿ ಅಡಗಿರುವ ನೈತಿಕತೆ ಮಕ್ಕಳು ತಿಳಿಯಬೇಕಿದೆ- ಶ್ರೀ ಮೃತ್ಯುಂಜಯ ಸ್ವಾಮಿ ಅಭಿಮತ

ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಮೌಲ್ಯಗಳು ನೈತಿಕತೆಯ ಗುಣಗಳು ದೂರವಾಗುತ್ತಿರುವ ಸಂದರ್ಭದಲ್ಲಿ ವಚನಗಳಲ್ಲಿ ಅಡಗಿರುವ ಸತ್ಯ ಮತ್ತು ನೈತಿಕತೆಯ ಗುಣಗಳನ್ನು ತಿಳಿಯಲು ಶಾಲಾ ಹಂತದಲ್ಲಿ ಶರಣರ ವಚನಗಳಲ್ಲಿಯ ನೈತಿಕತೆಯ ಪಾಠ ತಿಳಿಯಪಡಿಸಬೇಕಾದ ಅಗತ್ಯತೆ ಇದೆ ಎಂದು ಗಂದಿಗವಾಡದ ರಾಜಗುರು ಸಂಸ್ಥಾನಮಠದ ಮೃತ್ಯುಂಜಯಸ್ವಾಮಿ ಹಿರೇಮಠರವರು ರವಿವಾರ ದಿ. 23ರಂದು ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸಾಹಿತಿ ಡಾ. ಸುನಿಲ್ ಪರಿಟ್ ರವರು ರಚಿಸಿದ 'ಮಕ್ಕಳ ನೈತಿಕ ವಚನಗಳು' ಮತ್ತು ' ನಮ್ಮ ಕರುನಾಡು' ಕೃತಿಗಳನ್ನು ಲೋಕಾರ್ಪಣೆ ಮಾಡಿ ಪರಿಚಯಿಸಿದರು. ಮಕ್ಕಳ ಬೌದ್ಧಿಕತೆಯ ವೃದ್ಧಿಗೆ ಅನುಕೂಲಕರವಾಗುವ ಸರಳ ವಚನಗಳನ್ನು ವಿಶ್ಲೇಷಿಸಿ ಅವುಗಳಲ್ಲಿರುವ ಮೌಲ್ಯಗಳನ್ನು ಮಕ್ಕಳಿಗೆ ತಿಳಿಯಪಡಿಸಬೇಕಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯ ವಹಿಸಿದ್ದ ಸಾಹಿತಿ ಬಿ.ಕೆ ಮಲಾಬಾದಿ ನಾಡು ನುಡಿಯ ಬಗ್ಗೆ ಮತ್ತು ಮಕ್ಕಳ ಕುರಿತಾದ ಕೃತಿಗಳು ರಚಿಸಿದ ಪರಿಟ್ ರವರ ಕಾರ್ಯ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದರು ಸಾಹಿತಿ ಡಾ ರೇಣುಕಾ ಕಠಾರಿ 'ನಮ್ಮ ಕರುನಾಡು' ಕೃತಿ ಪರಿಚಯಿಸಿದರು.

ವಚನ ಪುಸ್ತಕ ಎಲ್ಲ ಶಾಲೆಯವರು ತೆಗೆದುಕೊಳ್ಳಲು ಅನುಮತಿನಿಡಬೇಕು ಶಾಲಾಮಕ್ಕಳಿಗೆ ಉಪಯುಕ್ತವಾಗಿದೆ ಎಂದು ಎಂ ವೈ ಮೆಣಸಿನಕಾಯಿಯವರು ತಿಳಿಸಿದರು. ಕೃತಿಯ ಲೇಖಕ ಡಾ ಸುನಿಲ ಪರೀಟ ಮಾತನಾಡಿ ಎಲ್ಲರ ಪ್ರೇರಣೆಯಿಂದ ಇತ್ತೀಚಿನ ದಿನಗಳಲ್ಲಿ ರೈತ, ಸೈನಿಕ ಮತ್ತು ಮಕ್ಕಳ ಕೃತಿಗಳನ್ನು ರಚಿಸಿರುವೆ ಮುಂಬರುವ ದಿನಗಳಲ್ಲಿ ಮಕ್ಕಳೇ ಬರೆದಿರುವ ಕವಿತೆಗಳನ್ನು ಪುಸ್ತಕ ರೂಪದಲ್ಲಿ ಹೊರ ತರುವ ಯೋಜನೆ ಇದೆ ಎಂದರು. ಎರಡು ಕೃತಿಗಳ ಪ್ರಕಾಶಕರು ಮತ್ತು ಬೆಳಗಾವಿಯಲ್ಲಿ ಕನ್ನಡ ಪುಸ್ತಕಗಳು ಬರುವಲ್ಲಿ ತನು ಮನ ಧನದಿಂದ ಸೇವೆ ಮಾಡಿ ಕವಿಗಳಿಗೆ ಲೇಖಕರಿಗೆ ಉತ್ತೇಜನ ಮಾಡುತ್ತಿರುವ ಶಿವಾ ಆಪ್ ಸೆಟ್ ಮತ್ತು ಪ್ರಿಂಟರ್ಸ್ ಮಾಲೀಕರಾದ ಡಾ. ಶಿವು ನಂದಗಾವ್ ಮತ್ತು ಬಸು ನಂದಗಾವ್ ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಬೆಳಗಾವಿ ಕ.ಸಾ.ಪ ಜಿಲ್ಲಾ ಕಾರ್ಯದರ್ಶಿ ಎಂ ವೈ ಮೆಣಸಿನಕಾಯಿ ತಾಲೂಕು ಅಧ್ಯಕ್ಷ ಸುರೇಶ್ ಹಂಜಿ ಬರಹಗಾರರ ಸಂಘದ ಅಧ್ಯಕ್ಷ ಸುರೇಶ ಸಕ್ರೆಣ್ಣವರ,ರಜನಿ ಜೀರಗ್ಯಾಳ, ದಯಾನಂದ ಚಿಕ್ಕಮಠ ಆರ್ ಬಿ ಬನಶಂಕರಿ,ಜಯಶೀಲಾ ಬ್ಯಾಕೋಡ, ಡಾ. ಹೇಮಾವತಿ ಸೋನೋಳ್ಳಿ, ,ನಿರ್ಮಲಾ ಪಾಟೀಲ, ವಿಜಯ್ ಕಿಳ್ಳಿಕೇತರ, ಬಿ ಬಿ ಮಠಪತಿ, ಅನುರಾಧಾ ಕೋಲಕಾರ ಸೇರಿದಂತೆ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಡಾ. ಸುನಿಲ್ ಪರೀಟ್ ಸ್ವಾಗತಿಸಿದರು. ಶಿವಾನಂದ ತಲ್ಲೂರ ನಿರೂಪಿಸಿದರು ಸುಮನ್ ಪರೀಟ್ ವಂದಿಸಿದರು

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಂಗೀತ ಲೋಕದಲ್ಲಿ ಮಿಂಚಿದ ಬೆಳಗಾವಿಗರು – ಅದ್ದೂರಿಯಾಗಿ ನಡೆದ ರಿಯಲ್ ಸ್ಟಾರ್ ಪಬ್ಲಿಕ್ ಇವೆಂಟ್ಪಟ್ಟದ ಆನೆ ಧ್ರುವನಿಗೆ ಹೋಮ-ಹವನದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆಮಹಾದೇವ ಭಾಂದುರ್ಗೆ ನಿಧನಸಮಾಜಕ್ಕೆ ಉತ್ತಮ ಸಂದೇಶ ನೀಡುವ ಗುಣಮಟ್ಟದ ಚಿತ್ರಗಳು ನಿರ್ಮಾಣವಾಗಲಿ : ಮಾಜಿ ಶಾಸಕ ವಿ.ಐ. ಪಾಟೀಲ್ನಿನ್ನೆ ನಡೆದ  ಗೋಕಾಕ್ ಬಳಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ! ಸ್ಥಳದಲ್ಲೇ ಮೂವರ ಸಾವು, ನಾಲ್ವರ ಸ್ಥಿತಿ ಗಂಭೀರಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಬೆಳಗಾವಿ ಆರ್.ಎಲ್. ಕಾನೂನು ಮಹಾವಿದ್ಯಾಲಯದಲ್ಲಿ ಪ್ರವೇಶ ಮತ್ತು ಅಭಿಮುಖೀಕರಣ ಕಾರ್ಯಕ್ರಮವೀರ ವನಿತೆ ಒನಕೆ ಓಬವ್ವ ಜಯಂತ್ಯೋತ್ಸವ ಕಾರ್ಯಕ್ರಮ - 2026ಮಂಡೋಳ್ಳಿಯಲ್ಲಿ ₹1.70 ಕೋಟಿ ವೆಚ್ಚದಲ್ಲಿ ಶ್ರೀ ಮಾರುತಿ ದೇವಸ್ಥಾನ ನಿರ್ಮಾಣ