LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಶಿವನ ಮತ್ತೊಂದು ಹೆಸರೇ ತ್ರಿಕಾರಂ, 2ನೇ ಹಾಡು ಬಿಡುಗಡೆ

*’ತ್ರಿಕಾರಂ’* (Trikaram) ಚಿತ್ರದ ಮೊದಲ ಹಾಡು ವೈರಲ್ ಆಗಿದ್ದರಿಂದ ತಂಡಕ್ಕೆ ಸಂತಸ ತಂದಿತ್ತು. ಇದರ ಪ್ರೇರಣೆಯಿಂದಲೇ, ಈಗ ಪ್ರೇಮಿಗಳ ದಿನಾಚರಣೆ ಅಂಗವಾಗಿ, ಎರಡನೇ ಹಾಡಿನ ಬಿಡುಗಡೆ ಕಾರ್ಯಕ್ರಮ ಉತ್ಸವ್ ಲೆಗೆಸಿಯಲ್ಲಿ ಅದ್ದೂರಿಯಾಗಿ ನಡೆಯಿತು. ರಾಜಕೀಯ ಧುರೀಣ ರವೀಂದ್ರ ಮತ್ತು ನಟ ಶಿವರಾಜ್.ಕೆ.ಆರ್.ಪೇಟೆ ಹಾಗೂ ನಿರ್ದೇಶಕ ಖದರ್ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು.

ಪಿನ್2ಪಿನ್ ಮ್ಯೂಸಿಕ್ ಸಂಸ್ಥೆಯಿಂದ ಹೊರಬಂದಿರುವ ’ಸೀದಾ ನಿಂತರೂ ಲೋಕ ಯಾಕೆ ಉಲ್ಟ ಕಾಣ್ತದೆ’ ಸಾಲಿನ ಗೀತೆಗೆ ಕೇಶು-ಚೇತನ್ ಬರವಣಿಗೆ, ರಾಜೇಶ್ ಕೃಷ್ಣನ್ ಧ್ವನಿಗೆ, ವಿವೇಕ್ ಚಕ್ರವರ್ತಿ ಸಂಗೀತ ಸಂಯೋಜಿಸಿದ್ದಾರೆ. ’ಇದು ಸ್ಮಶಾನ ಅಲ್ಲ’ ಎಂಬ ಅಡಿಬರಹ ಇದೆ.

ನಾಟಕ ಪ್ರೇಮಿ ಜಿ.ಗಣೇಶ್ ಮೂರ್ತಿ ಅವರು ಸದ್ಗುರು ಸಿನಿ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣ ಮಾಡುವುದರ ಜತೆಗೆ ಖತರ್‌ನಾಕ್ ಖಳನಾಯಕನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹಲವು ನಿರ್ದೇಶಕರ ಬಳಿ ಕೆಲಸ ಕಲಿತಿರುವ ಅಜ್ಜಂಪುರದ ದಿಲೀಪ್ ಕುಮಾರ್.ಜೆ.ಆರ್ ಬಡ್ತಿ ಎನ್ನುವಂತೆ ರಚಿಸಿ, ಆಕ್ಷನ್ ಕಟ್ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು, ದೈವ ಮತ್ತು ದುಷ್ಟ ನಡುವಿನ ಹೋರಾಟ ಕಥೆಯು ಸೆಸ್ಪೆನ್ಸ್ ಥ್ರಿಲ್ಲರ್ ಮಾದರಿಯಲ್ಲಿ ಸಾಗುತ್ತದೆ. ಅದು ಯಾವ ರೀತಿಯ ಹೋರಾಟ, ಯಾತಕ್ಕಾಗಿ? ಶಿವನನ್ನು ತ್ರಿಕಾರಂ ಅಂತಲೂ ಕರೆಯುತ್ತಾರೆ. ಇನ್ನು ಹೆಚ್ಚಿಗೆ ಹೇಳಿದರೆ ಸಿನಿಮಾದ ಸಾರಾಂಶವನ್ನು ಬಿಟ್ಟುಕೊಟ್ಟಂತೆ ಆಗುತ್ತದೆ. ಆದಕಾರಣ ದಯಮಾಡಿ ಎಲ್ಲರೂ ಚಿತ್ರಮಂದಿರಕ್ಕೆ ಬರಬೇಕೆಂದು ದಿಲೀಪ್ ಕುಮಾರ್.ಜೆ.ಆರ್ ಮಾಧ್ಯಮದವರನ್ನು ಕೋರಿಕೊಂಡರು.

ಮುಗ್ದ ಹಾಗೂ ರುದ್ರನಾಗಿ ಎರಡು ಶೇಡ್‌ಗಳಲ್ಲಿ ಹರ್ಷವರ್ಧನ್ ನಾಯಕ. ಅದೇ ರೀತಿ ಜಂಬದಹುಡುಗಿ, ಮೃದು ಸ್ವಭಾವದವಳಾಗಿ ನಿಶ್ಚಿತಶೆಟ್ಟಿ (Nischitha Shetty) ನಾಯಕಿ. ಉಳಿದಂತೆ ನಾಗೇಂದ್ರಅರಸು, ಬಲರಾಜವಾಡಿ, ಮಂಜುಪಾವಗಡ ಮುಂತಾದವರು ಅಭಿನಯಿಸಿದ್ದಾರೆ.

ಛಾಯಾಗ್ರಹಣ ಹೊನ್ನಾಳಿ ಯಾಸಿನ್, ಸಂಕಲನ ಸತೀಶ್ ಚಂದ್ರಯ್ಯ, ಸಾಹಸ ಚಂದ್ರುಬಂಡೆ, ನ್ಯೃತ್ಯ ಹೈಟ್‌ಮಂಜು-ಕಂಬಿರಾಜ್, ಡಾ.ವಿ.ನಾಗೇಂದ್ರಪ್ರಸಾದ್-ಭರ್ಜರಿ ಚೇತನ್‌ಕುಮಾರ್-ಪ್ರಮೋದ್ ಮರವಂತೆ ಸಾಹಿತ್ಯ, ಡಿಜಿಟಲ್ ಪ್ರಚಾರ್ ಪವನ್‌ಕುಮಾರ್ ಅವರದಾಗಿದೆ. ಸಂಪೂರ್ಣ ಚಿತ್ರೀಕರಣ ಹೊಸದುರ್ಗ ಸುತ್ತಮುತ್ತ ನಡೆಸಲಾಗಿದೆ. ಅಂದುಕೊಂಡಂತೆ ಇದೇ ವರ್ಷ ಜನರಿಗೆ ತೋರಿಸಲು ತಂಡವು ಯೋಜನೆ ರೂಪಿಸಿಕೊಂಡಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆಉಡಾನ್' ಯೋಜನೆ ಮೂಲಕ ಭಾರತದ ಭವಿಷ್ಯದ ವೈದ್ಯಕೀಯ ಕಾರ್ಯಪಡೆಯನ್ನು ನಿರ್ಮಿಸುವ ಬದ್ಧತೆಯನ್ನು ಸಾರಿದ ನಾರಾಯಣ ಹೆಲ್ತ್ಮೆಟ್ರೋ ಟಿಕೆಟ್ ದರ: ಕೇಂದ್ರದತ್ತ ಬೊಟ್ಟು ಮಾಡಿದ ರಾಜ್ಯ ಸರ್ಕಾರಕ್ಕೆ ದಾಖಲೆ ಸಮೇತ ಟಾಂಗ್ ಕೊಟ್ಟ ನಿಖಿಲ್ಬಿಜೆಪಿ ಜಾಹೀರಾತಿನ ವಿರುದ್ಧ ಎಎಪಿ ದೂರುಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ, 20 ವರ್ಷ ಕಳೆದರೂ ರೈತರಿಗೆ ಸಿಗತ ಪರಿಹಾರಕಾಂಗ್ರೆಸ್ ಪಕ್ಷ ಪಾರ್ಕಿಂಗ್ ವಿಚಾರದಲ್ಲಿ ಅಂದಾ ದರ್ಬಾರ್ ಮಾಡಲು ಹೊರಟಿದೆ