LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ ಅರೆಸ್ಟ್

ಹೈದರಾಬಾದ್ : ಪುಷ್ಪ 2 ಪ್ರೀಮಿಯರ್ ಶೋ ವೇಳೆ ಕಾಲ್ತುಳಿತಕ್ಕೊಳಗಾಗಿ ಮಹಿಳೆಯೊಬ್ಬರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ ಅವರನ್ನು ಹೈದರಾಬಾದ್‌ನ ಚಿಕ್ಕಡಪಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಡಿ. 4 ರಂದು ಪುಷ್ಪ 2: ದಿ ರೂಲ್'ನ ಪ್ರೀಮಿಯರ್ ಶೋ ವೇಳೆ ಹೈದರಾಬಾದ್‌ನ ಥಿಯೇಟರೊಂದರಲ್ಲಿ ಕಾಲ್ತುಳಿತ ಉಂಟಾಗಿ ರೇವತಿ (39) ಎಂಬುವವರು ಮೃತಪಟ್ಟಿದ್ದರು. ಅವರ 9 ವರ್ಷದ ಮಗ ಕಾಲ್ತುಳಿತಕ್ಕೆ ಸಿಕ್ಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಪ್ರಕರಣದಲ್ಲಿ ಅಲ್ಲು ಅರ್ಜುನ್ ಕೂಡ ಆರೋಪಿಯಾಗಿದ್ದರು. ಇಂದು ವರನ್ನು ಬಂಧಿಸಿ, ಚಿಕ್ಕಡಪಲ್ಲಿ ಠಾಣೆಗೆ ಕರೆದೊಯ್ದಿದ್ದಾರೆ.

ಈ ಪ್ರಕರಣ ವಜಾಗೊಳಿಸುವಂತೆ ನಟ ಈಗಾಗಲೇ ಹೈಕೋರ್ಟ್ ಮೆಟ್ಟಿಲೆರಿದ್ದರು. ಈ ಮಧ್ಯೆ ಚಿಕ್ಕಡಪಲ್ಲಿ ಪೊಲೀಸರು ಏಕಾಏಕಿ ಬಂಧಿಸಿದ್ದು, ಇದು ಪುಷ್ಪಾ-2 ಚಿತ್ರತಂಡಕ್ಕೆ ಹಾಗೂ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಶಾಕ್ ನೀಡಿದೆ.

ಇನ್ನು ಕಲ್ತುಳಿತದಿಂದಾಗಿ ಮಹಿಳೆ ಸಾವನ್ನಪ್ಪಿದ ಘಟನೆ ನೆನೆದು ಅಲ್ಲು ಅರ್ಜುನ್ ಸಂತಾಪ ಸೂಚಿಸಿದ್ದರು. ಹಾಗೂ ಮೃತ ಮಹಿಳೆ ರೇವತಿ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಘೋಷಿಸಿದ್ದರು. ಜೊತೆಗೆ ಈ ನೋವಿನಲ್ಲಿ ನಮ್ಮ ತಂಡ ಅವರೊಂದಿಗೆ ಇರುತ್ತದೆ. ಶೀಘ್ರದಲ್ಲೇ ನಾನು ಅವರ ಮನೆಗೆ ಭೇಟಿ ನೀಡಲಿದ್ದೇನೆ. ಗಾಯಗೊಂಡವರ ಚಿಕಿತ್ಸಾವೆಚ್ಚವನ್ನು ನಮ್ಮ ಇಡೀ ತಂಡ ನೋಡಿಕೊಳ್ಳಲಿದೆ. ಅಲ್ಲದೇ ಭವಿಷ್ಯದಲ್ಲಿ ಅಭಿಮಾನಿಗಳು ಎಚ್ಚರಿಕೆ ಮತ್ತು ಜಾಗರೀಕತೆಯಿಂದಿರಿ ಎಂದು ತಿಳಿಸಿದ್ದರು.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST