LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ವಿಶ್ವ ಚೆಸ್ ಚಾಂಪಿಯನ್ ಗುಕೇಶ್‌ಗೆ ಉಡುಗೊರೆ ನೀಡಿದ ತಲೈವಾ, ಶಿವಕಾರ್ತಿಕೇಯನ್

ಚೆನ್ನೈ : ವಿಶ್ವ ಚೆಸ್ ಚಾಂಪಿಯನ್ ಡಿ.ಗುಕೇಶ್ ಇಂದು (ಡಿ.26) ರಜನಿಕಾಂತ್ ಮತ್ತು ‘ಅಮರನ್’ ನಟ ಶಿವಕಾರ್ತಿಕೇಯನ್ ಅವರನ್ನು ಭೇಟಿಯಾಗಿದ್ದಾರೆ.

ಭಾರತಕ್ಕೆ ಹೆಮ್ಮೆ ತಂದಿರುವ ಗುಕೇಶ್ ಸಾಧನೆಯನ್ನು ಕೊಂಡಾಡಿ ತಲೈವಾ ಮತ್ತು ಶಿವಕಾರ್ತಿಕೇಯನ್ ಶುಭಹಾರೈಸಿದ್ದಾರೆ.ಗುಕೇಶ್ ತಮ್ಮ ಪೋಷಕರೊಂದಿಗೆ ರಜನಿಕಾಂತ್ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ, ತಲೈವಾ ಗುಕೇಶ್‌ಗೆ ಶಾಲು ಹೊದಿಸಿ ಸನ್ಮಾನ ಮಾಡಿದ್ದಾರೆ. ಪುಸ್ತಕವೊಂದನ್ನು ಗಿಫ್ಟ್ ಆಗಿ ನೀಡಿದ್ದಾರೆ .

ಈ ಕುರಿತು ಸೋಶಿಯಲ್‌ ಮೀಡಿಯಾದಲ್ಲಿ ‘ಸೂಪರ್ ಸ್ಟಾರ್ ರಜನಿಕಾಂತ್ ಅವರ ಹಾರೈಕೆಗಳಿಗೆ ಧನ್ಯವಾದಗಳು. ನಮ್ಮನ್ನು ಮನೆಗೆ ಆಹ್ವಾನಿಸಿ, ನಮ್ಮೊಂದಿಗೆ ಅಮೂಲ್ಯವಾದ ಸಮಯ ಕಳೆದು, ಜ್ಞಾನ ಹಂಚಿಕೊಂಡಿದ್ದಕ್ಕೆ ಧನ್ಯವಾದ ಸರ್’ ಎಂದು ಗುಕೇಶ್ ಬರೆದುಕೊಂಡಿದ್ದಾರೆ.

ಬಳಿಕ ‘ಅಮರನ್’ ನಟ ಶಿವಕಾರ್ತಿಕೇಯನ್ ಅವರ ನಿವಾಸಕ್ಕೆ ಗುಕೇಶ್ ಫ್ಯಾಮಿಲಿ ಭೇಟಿ ಮಾಡಿದ್ದಾರೆ. ವಿಶ್ವ ಚೆಸ್ ಚಾಂಪಿಯನ್ ಆಗಿ ಗೆದ್ದ ಖುಷಿಯನ್ನು ನಟನೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಬಳಿಕ ಗುಕೇಶ್‌ಗೆ ದುಬಾರಿ ವಾಚ್‌ವೊಂದನ್ನು ಶಿವಕಾರ್ತಿಕೇಯನ್ ಉಡುಗೊರೆಯಾಗಿ ನೀಡಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಾಯುಭಾರ ಕುಸಿತ : ಆಗಸ್ಟ್ 19 ಮತ್ತು 20ರಂದು ರಾಜ್ಯಾದ್ಯಂತ ವ್ಯಾಪಕ ಮಳೆ.!ಆಗಸ್ಟ್ 19 ಮಳೆ ಅಬ್ಬರ ಮುಂದುವರೆದಿದ್ದು ಮುನ್ನೆಚ್ಚರಿಕೆ ಕ್ರಮ ಈ ಜಿಲ್ಲೆಗಳಲ್ಲಿ ಶಾಲಾ-ಕಾಲೇಜು ರಜೆ.!ಗ್ರಾಮಾಂತರ ಪ್ರದೇಶ ಹಾಗೂ ದಾವಣೆಗರೆ ಈ ಭಾಗಗಳಲ್ಲಿ ಕರಂಟ್ ಇರಲ್ಲ.!ಒಳ ಮೀಸಲಾತಿ : ನಾಗಮೋಹನ್ದಾಸ್ ಆಯೋಗ ದತ್ತಾಂಶ ಸರಿ: ಜೆ.ಯಾದವರೆಡ್ಡಿಸರ್ಪಸಂಸ್ಕಾರ ಒಂದೇ ಸಾಕು ಮದುವೆ ಸಂತಾನ ಆರೋಗ್ಯದ ಸಮಸ್ಯೆಗೆ ಶಾಶ್ವತ ಪರಿಹಾರ ಸರ್ಪ ಸಂಸ್ಕಾರದ ಮಹತ್ವ ತಿಳಿದು ಪರಿಹಾರ ಮಾಡಿಕೊಳ್ಳಿ....!ದಿನದ ಮಂಡಕ್ಕಿ ಒಗ್ಗರಣೆ –ಮಿರ್ಚಿ.! 19-08-2025..!-ಜೇಡರ ದಾಸಿಮಯ್ಯ ಅವರ  ವಚನ.!ಧರ್ಮಸ್ಥಳ ಪ್ರಕರಣಕ್ಕೆ ಹೊಸ ತಿರುವು: “ಸುಳ್ಳು ಹೇಳುವಂತೆ ನನ್ನನ್ನು ಬಲವಂತಪಡಿಸಿದ್ದರು” – ಎಸ್ಐಟಿ ಮುಂದೆ ಮುಸುಕುಧಾರಿ ಸ್ಫೋಟಕ ಮಾಹಿತಿದೂರುದಾರ, ದೂರುದಾರನ ಹಿಂದಿರುವ ವ್ಯಕ್ತಿಗಳ ಕುರಿತು ಸಮಗ್ರ ತನಿಖೆಗೆ ವಿಜಯೇಂದ್ರ ಆಗ್ರಹಸದನದಲ್ಲೂ ‌ಸುದ್ದಿಯಾದ ಧರ್ಮಸ್ಥಳ ಪ್ರಕರಣ: ಗೃಹ ಸಚಿವರು ಹೇಳಿದ್ದೇನು ಗೊತ್ತಾ?