Press ID & Credential Portal
Apply / Verify  ➔
LIVE TV LocalCrimeNationalInternationalPoliticsFinancialEducationTechnologyEntertainmentSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Crime News

ಹಿಂಡಲಗಾ ಕೆರೆಯಲ್ಲಿ ಮೃತಪಟ್ಟವರ ಗುರುತು, ಕಾರಣ ಪತ್ತೆ

ಬೆಳಗಾವಿ: ಪ್ರಸಿದ್ದ ಹಿಂಡಲಗಾ ಗಣಪತಿ ದೇವಸ್ಥಾನ ಬಳಿಯ ಹಿಂಡಲಗಾ ಗಣಪತಿ ಕೆರೆಯಲ್ಲಿ ಬಾಲಕ ಹಾಗೂ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರು ಯಾರು ಎನ್ನುವುದರ ಗುರುತು ಪತ್ತೆ ಹಚ್ಚಲಾಗಿದೆ.



ಬೆಳಗಾವಿ ತಾಲೂಕಿನ ಕಲಖಾಂಬ ಗ್ರಾಮದ ಕವಿತಾ ಬಸವಂತ ಜುನೇ ಬೆಳಗಾಂವಕರ ಮತ್ತು ಅವರ ಮಗ ಸಮರ್ಥ ಬಸವಂತ ಜುನೇ ಬೆಳಗಾಂವಕರ ಎಂದು ಗುರುತಿಸಲಾಗಿದೆ. ಮಹಿಳೆಯ ಮೂಲತಃ ಜಾಂಬೋಟಿ ರಸ್ತೆಯ ಕಿಣಯೇ ಗ್ರಾಮದವರು. ಶನಿವಾರ ಮುಂಜಾನೆ ಪತ್ತೆಯಾದ ಮೃತ ದೇಹಗಳನ್ನು ಮಧ್ಯಾಹ್ನ  ಪೊಲೀಸರು ಹಾಗೂ ಸಾರ್ವಜನಿಕರು ಗುರುತು ಹಿಡಿದಿದ್ದಾರೆ. ಪೊಲೀಸರು ತನಿಖೆ ನಡೆಸಿ ಘಟನೆಯ ಮಾಹಿತಿ ಸಂಗ್ರಹಿಸುತ್ತಿದ್ದಾರೆ.



ಮಹಿಳೆಗೆ ಅಂದಾಜು 40 ಮತ್ತು ಅವರ ಮಗ 14 ವರ್ಷದವನು. ಕ್ಯಾಂಪ್ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.



ತಾಯಿ, ಮಗ ಮೂರು ದಿನಗಳ ಹಿಂದೆ ಕಲಕಾಂಬ ಗ್ರಾಮದಿಂದ ನಾಪತ್ತೆಯಾಗಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ತಾಯಿ, ಮಗ ಕೆರೆಯ ಬಳಿ ಚಪ್ಪಲಿ ತೆಗೆದು ನೀರಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.



ಬೆಳಗಾವಿಯ ಫೇಸಬುಕ್ ಫ್ರೆಂಡ್ ಸರ್ಕಲ್ ಗುಂಪಿನ ಬಸವರಾಜ ಹಿರೇಮಠ ಮತ್ತು ಸಂತೋಷ ಧರೇಕರ ಅವರು ಶವಗಳನ್ನು ನೀರಿನಿಂದ ಮೇಲೆ ತೆಗೆಯಲು ಸಹಕರಿಸಿದರು.



ಮೂರು ದಿನಗಳ ಹಿಂದೆಯೇ ಇವರು ಕೆರೆಗೆ ಜಿಗಿದಿರಬಹುದು. ಈ ಕುರಿತು ಮರಣ್ಣೋತ್ತರ ಪರೀಕ್ಷೆಯ ನಂತರವಷ್ಟೇ ಮಾಹಿತಿ ದೊರೆಯಲಿದೆ. ಪತಿ ಬಸವಂತ ಮತ್ತು ಅವನ ತಾಯಿಯ ಕಿರುಕುಳ ತಾಳಲಾರದೇ ಕವಿತಾ ಮತ್ತು ಮಗ ಸಮರ್ಥ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಪತ್ರ ಸಿಕ್ಕಿದೆ ಎಂದು ತಿಳಿದುಬಂದಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಿಸೆಂಬರ್ 7ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಸಾಧ್ಯತೆಎಂಎಸ್‌ಪಿ ಆಧರಿಸಿ ಕಬ್ಬಿಗೆ ದರ: ಡಿ.ಕೆ. ಶಿವಕುಮಾರಮತದಾರರ ಅಂತಿಮ ಪಟ್ಟಿಯಲ್ಲಿ ನಿಮ್ಮ ಹೆಸರು ಪರಿಶೀಲಿಸಿಚುನಾವಣಾ ಆಯೋಗದ ಸಮರ್ಥನೆಗೆ ಆಕ್ಷೇಪಣೆ ಸಲ್ಲಿಸಲು 10 ದಿನ ಕಾಲಾವಕಾಶಸಚಿವ ಜಿ. ಪರಮೇಶ್ವರ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು‘ಬಟ್ಟೆ ಹರಿದು ರಕ್ತಸ್ರಾವವಾಗಿತ್ತು’: ಟ್ರಂಪ್ ವಿರುದ್ಧ ಮಾಜಿ ಮಿಸ್ ಸ್ವಿಟ್ಜರ್ಲ್ಯಾಂಡ ಅತ್ಯಾಚಾರ ಆರೋಪ!ಮತದಾರರ ಪಟ್ಟಿಯಿಂದ 1 ಕೋಟಿ ಹೆಸರು ಡಿಲೀಟ್!ಕಬ್ಬಿನ ದರ ನಿಗದಿ ಸಭೆಯಲ್ಲಿ ರೈತ ಮುಖಂಡರ ಮಾರಾಮಾರಿ: ಸುವರ್ಣಸೌಧದಲ್ಲೇ ಕೈಕೈ ಮಿಲಾಯಿಸಿದ ಎರಡು ಬಣಗಳು!ಕನ್ನಡಿಗರಿಗೆ ಉದ್ಯೋಗ ನಿರಾಕರಿಸಿದರೆ ಖಾಸಗಿ ಸಂಸ್ಥೆಗಳ ವಿರುದ್ಧ ಕ್ರಮ: ಡಿ.ಕೆ. ಶಿವಕುಮಾರಜಲವಿದ್ಯುತ್ ಯೋಜನೆ ವಿರೋಧಿಸಿ ಅರುಣಾಚಲದಲ್ಲಿ ಹಿಂಸಾಚಾರ: ಭದ್ರತಾ ಪಡೆಯ ಎರಡು ತುಕಡಿ ರವಾನೆ