Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಮನಶಾಂತಿ ನೀಡುವ ಏಕೈಕ ಕಲೆ ಎಂದರೆ ಅದು ಸಂಗೀತ ಮಾತ್ರ : ಆಶಾ ಯಮಕನಮರಡಿ



ಬೆಳಗಾವಿ : ಸಂಗೀತ ಎನ್ನುವುದು ಮನಶಾಂತಿ ನೀಡುವ ಏಕೈಕ ಕಲಾ ಮಾಧ್ಯಮ ಎಂದು ಲೇಖಕಿ ಆಶಾ ಯಮಕನಮರಡಿ ಹೇಳಿದರು.

ಟಿಳಕವಾಡಿಯ ನಾದಸುಧಾ ಸುಗಮ ಸಂಗೀತ ಶಾಲೆಯ ವತಿಯಿಂದ ರವಿವಾರ ನಾದಸುಧಾ ಸಂಗೀತ ಶಾಲೆಯ ಸಭಾಗೃಹದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ವಿಜೇತ ಶ್ರೇಯಾ ಮನವಾಡಿ ಅವರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಂಗೀತ ಎನ್ನುವುದು ಈ ಜಗತ್ತಿನಲ್ಲಿ ಶಾಶ್ವತವಾದ ಕಲೆಯಾಗಿದೆ. ಅದಕ್ಕೆ ಎಂದಿಗೂ ಸಾವಿಲ್ಲ. ಆದರೆ ಇಂದು ಎಐ ಪ್ರವೇಶದಿಂದ ಸಂಗೀತ ಕಲೆಗೂ ಭಯ ಆವರಿಸಿದೆ. ಮನಸ್ಸಿಗೆ ಮುದ ನೀಡುವ ಏಕೈಕ ಕಲೆ ಇದ್ದರೆ ಅದು ಸಂಗೀತ ಮಾತ್ರ. ಹೀಗಾಗಿ ಅದನ್ನು ಉಳಿಸಿ ಬೆಳೆಸುವ ಕಾರ್ಯ ಆಗಬೇಕು ಎಂದು ಅವರು ಹೇಳಿದರು.

ನಾದ ಸುಧಾ ಸಂಗೀತ ಸುಗಮ ಸಂಗೀತ ಶಾಲೆಯ ಮೂಲಕ ನಿವೃತ್ತ ಬ್ಯಾಂಕ್ ಅಧಿಕಾರಿ ಸತ್ಯನಾರಾಯಣ ಅವರು ಬೆಳಗಾವಿಯ ಮಕ್ಕಳಿಗೆ ಸಂಗೀತವನ್ನು ಕಲಿಸುವ ಕೆಲಸವನ್ನು ಕಳೆದ 16 ವರ್ಷಗಳಿಂದ ಮಾಡುತ್ತಿದ್ದಾರೆ. ಅವರು ಬೆಳಗಾವಿ ಪರಿಸರದಲ್ಲಿ ನೀಡುತ್ತಿರುವ ಕಾರ್ಯಕ್ರಮಗಳು ಅತ್ಯಂತ ಅರ್ಥಪೂರ್ಣವಾಗಿರುತ್ತವೆ. ಮುಂದಿನ ಪೀಳಿಗೆಗೆ ಸಂಗೀತ ಹರಿದು ಬರಬೇಕು ಎಂಬ ಆಶಯ ಅವರದ್ದಾಗಿದೆ. ಈ ನಿಟ್ಟಿನಲ್ಲಿ ಎಷ್ಟೇ ಸವಾಲುಗಳು ಎದುರಾದರೂ ಅದನ್ನು ನಿಭಾಯಿಸಿಕೊಂಡು ಸತ್ಯನಾರಾಯಣ ಅವರು ಈ ಭಾಗದಲ್ಲಿ ಸಂಗೀತ ದೊಡ್ಡ ವೃಕ್ಷವಾಗಿ ಬೆಳೆಯಬೇಕು ಎಂಬ ಆಶಯದಿಂದ ಮಕ್ಕಳಿಗೆ ಸಂಗೀತ ವಿದ್ಯೆಯನ್ನು ಕಲಿಸುತ್ತಿರುವುದು ನಿಜಕ್ಕೂ ಸಂತಸದ ಸಂಗತಿ ಎಂದರು.



ಪುಟ್ಟ ಮಕ್ಕಳಿಗೆ ಅತ್ಯಂತ ಜವಾಬ್ದಾರಿಯುತವಾಗಿ ಅವರು ಸಂಗೀತವನ್ನು ಕಲಿಸಿಕೊಡುತ್ತಿದ್ದಾರೆ. ದೇಶಭಕ್ತಿ ಗೀತೆ, ಭಕ್ತಿ ಗೀತೆ, ಭಾವಗೀತೆ ಮುಂತಾದ ಎಲ್ಲಾ ಪ್ರಕಾರದ ಗೀತೆಗಳನ್ನು ಮಕ್ಕಳಿಗೆ ಕಲಿಸುತ್ತಿದ್ದಾರೆ. ತಂತ್ರಜ್ಞಾನ ಇಂದು ಸಾಕಷ್ಟು ಮುಂದುವರಿದಿದೆ. ಮುಂದೆ ಸಂಗೀತ ಇರುತ್ತದೆ ಇಲ್ಲವೋ ಎಂಬ ಭೀತಿ ಉಂಟಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಈ ಕಲೆಯನ್ನು ಉಳಿಸಿ ಬೆಳೆಸಬೇಕಾಗಿದೆ ಎಂದರು.

ಸಂಗೀತವನ್ನು ಪ್ರತಿಯೊಬ್ಬರು ಆರಾಧಿಸುತ್ತಾರೆ. ಮಗು ಸ್ವರಬದ್ಧವಾಗಿ ಕಲಿತರೆ ಅದೇ ಗುರುವಿಗೆ ಸಂತೃಪ್ತಿ. ಆ ನಿಟ್ಟಿನಲ್ಲಿ ಸತ್ಯನಾರಾಯಣ ಅವರು ಮಕ್ಕಳಿಗೆ ಸಂಗೀತ ಕಲಿಸುತ್ತಿದ್ದು ಗುರುವನ್ನು ಮೀರಿಸುವ ಶಿಷ್ಯಂದಿರು ತಯಾರಾಗಬೇಕು ಎನ್ನುವುದು ಅವರ ಕನಸು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೆ ಆಳವಾಗಿ ಸಂಗೀತವನ್ನು ಕಲಿಸುವ ಮೂಲಕ ಬಹುದೊಡ್ಡ ಗಾಯಕರಾಗಿ ದೊಡ್ಡ ವೇದಿಕೆ ಏರಿ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗಾವಿ ಪ್ರತಿಭೆಗಳು ಹೊರಹೊಮ್ಮಬೇಕು ಎಂಬ ಕನಸು ಅವರದ್ದಾಗಿದೆ ಎಂದರು.

ಸಂಗೀತ ವಿದ್ವಾನ್ ಎಂ.ಜಿ.ರಾವ್ ಮಾತನಾಡಿ, ನಾದಸುಧಾ ಮೂಲಕ ಸತ್ಯನಾರಾಯಣ ಅವರು ಬೆಳಗಾವಿಯ ಪ್ರತಿಭೆಗಳಿಗೆ ಒಂದೂವರೆ ದಶಕದಿಂದ ಪ್ರೋತ್ಸಾಹ ನೀಡುತ್ತಿದ್ದು ವಿದ್ಯಾರ್ಥಿಗಳು ಅತ್ಯಂತ ಆಳವಾಗಿ ಸಂಗೀತ ಕಲಿಯಬೇಕು ಎಂದರು.

ನಾದ ಸುಧಾ ಸಂಗೀತ ಸುಗಮ ಸಂಗೀತ ಶಾಲೆಯ ಸಂಸ್ಥಾಪಕ ಎಂ.ಎಸ್. ಸತ್ಯನಾರಾಯಣ ಮಾತನಾಡಿ, ನಾದಸುಧಾ ಸುಗಮ ಸಂಗೀತ ಶಾಲೆಯ ಮೂಲಕ ಶ್ರೇಷ್ಠ ಪ್ರತಿಭೆಗಳು ಅರಳಿದ್ದಾರೆ. ಇನ್ನಷ್ಟು ಪ್ರತಿಭೆಗಳನ್ನು ಹೊರತರಬೇಕು ಎನ್ನುವುದು ನಮ್ಮ ಸುಗಮ ಸಂಗೀತ ಶಾಲೆಯ ಮುಖ್ಯ ಧ್ಯೇಯವಾಗಿದೆ ಎಂದರು.

ನಾದ ಸುಧಾ 16 ವರ್ಷಗಳ ಸಂಗೀತ ಪಯಣದ ಸಾಕ್ಷ್ಯ ಚಿತ್ರದ ಹಾಡನ್ನು ಮುಖ್ಯ ಅತಿಥಿ ಆಶಾ ಯಮಕನಮರಡಿ ಬಿಡುಗಡೆ ಮಾಡಿದರು.
ಇತ್ತೀಚೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 2025-26 ಸಾಲಿನ ಪ್ರತಿಭಾ ಪುರಸ್ಕಾರ ಪಡೆದ ಶ್ರೇಯಾ ಮನವಾಡೆ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಶಿಕ್ಷಕಿ ಪೂರ್ಣಿಮಾ ಪತ್ತಾರ ನಿರೂಪಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರುಭೀಕರ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣಪ್ರಜಾಪಿತ ಬ್ರಹ್ಮಾಕುಮಾರಿ ಶಹಾಪುರ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಸುರಂಗದಲ್ಲಿ 9 ದಿನ ಹರೇ ಕೃಷ್ಣ ಪಠಿಸುತ್ತಿದ್ದವ ಜನ್ಮಾಷ್ಟಮಿಯಂದು ಹೊರಬಂದಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ: ಅಸ್ತಿತ್ವಕ್ಕೆ ಬಂತು ಹೊಸ ಬಣ!ಅಯೋಧ್ಯೆ ದೇಗುಲದ ಅಭಿವೃದ್ಧಿಗೆ ಭಕ್ತಾದಿಗಳ ಬೆಂಬಲ ಕೋರಿದ ರಾಮಮಂದಿರದ ನೂತನ ಸಿಇಒ