K2kannadanews.in
https://youtube.com/shorts/boFgGwfWw2U?si=BQxv_KZAv0PKg9sH
Shocking news ಹಟ್ಟಿ : ಖಾಸಗಿ ಶಾಲೆಯ ( Privet school) ಶಿಕ್ಷಕಿಯೊಬ್ಬರು (teacher) ವಿದ್ಯಾರ್ಥಿನಿ (student) ಹೋಂವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ ಮೈಯಲ್ಲಾ ಬಾಸುಂಡಿ ಬರುವಂತೆ ಹೊಡೆದಿದ್ದಾರೆ (beetan) ಎಂದು ಪಾಲಕರು ಆರೋಪಿಸಿದ್ದಾರೆ.
ರಾಯಚೂರು ( Raichur) ಜಿಲ್ಲೆಯ ಲಿಂಗಸೂಗೂರು (Lingasuguru) ತಾಲೂಕಿನ ಹಟ್ಟಿ (hatti) ಪಟ್ಟಣದಲ್ಲಿನ ಶರಣಬಸವೇಶ್ವರ ಇಂಗ್ಲಿಷ್ ಮಾಧ್ಯಮ (English medium school) ಶಿಕ್ಷಣ ಸಂಸ್ಥೆಯ 4ನೇ ತರಗತಿ ವಿದ್ಯಾರ್ಥಿನಿಗೆ ಶಿಕ್ಷಕಿ ಥಳಿಸಿದ್ದಾರೆ. ಶಿಕ್ಷಕಿ ವಿರುದ್ಧ ಕ್ರಮ (action) ಕೈಗೊಳ್ಳಬೇಕು ಎಂದು ಪಾಲಕರು (parents) ಒತ್ತಾಯಿಸಿದ್ದಾರೆ. ವಿದ್ಯಾರ್ಥಿನಿ ಕೈಗೆ ಗಂಭೀರ ಗಾಯವಾಗಿದ್ದು, ಪೋಷಕರು ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
https://youtube.com/shorts/rt8rt34Pmsc?si=6PFruPo9vkMxAm8g
ಶಿಕ್ಷಣ ಸಂಸ್ಥೆ ವಿರುದ್ಧ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ನೀಡಲಾಗುವುದು. ಶಿಕ್ಷಕಿ ವಿರುದ್ಧ ಕ್ಷೇತ್ರ ಶಿಕ್ಷಣಾಧಿಕಾರಿ ಕಾನೂನು ಕ್ರಮ ಕೈಗೊಳ್ಳಬೇಕು, ಎಂದು ಎಸ್‌ಎಫ್‌ಐ ಪದಾಧಿಕಾರಿ ರಮೇಶ ವೀರಾಪುರ ಒತ್ತಾಯಿಸಿದ್ದಾರೆ. ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ಮಾಡಿದರೆ ಬಿಇಓ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಸ್‌ಎಫ್‌ಐ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.