LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಈ ಹಣ್ಣಿನಲ್ಲಿದೆ ಮಧುಮೇಹ, ಕ್ಯಾನ್ಸರ್ ತಡೆಯುವ ಶಕ್ತಿ..!!

ಬೆಟ್ಟದ ನೆಲ್ಲಿಕಾಯಿ (Hill Gooseberry) ಹುಳಿಯಾದರೂ ತಿಂದ ಬಳಿಕ ನೀರು ಕುಡಿದರೆ ಬಾಯೆಲ್ಲಾ ಸಿಹಿಯಾಗಿರುತ್ತದೆ. ವಿದೇಶಗಳಲ್ಲಿ ಹೆಚ್ಚಾಗಿ ಸಿಗುವ ಮಿರಾಕಲ್‌ ಫ್ರೂಟ್‌ ಅಥವಾ ಮಿರಾಕಲ್ ಬೆರ್ರಿ, ಮ್ಯಾಜಿಕ್ ಬೆರ್ರಿ, ‌ಸ್ವೀಟ್ ಬೆರ್ರಿ ಎಂದು ಕರೆಯಲ್ಪಡುವ ಹಣ್ಣು ಸಹ ಇಂತಹ ಗುಣ ಹೊಂದಿದೆ

ಈ ಹಣ್ಣು ಆಫ್ರಿಕಾದಲ್ಲಿ (Africa) ಹೆಚ್ಚಾಗಿ ಕಂಡುಬರುತ್ತದೆ. ಇದು ತಿನ್ನಲು ಸ್ವಲ್ಪ ಸಿಹಿಯಾಗಿರುತ್ತದೆ. ಈ ಹಣ್ಣನ್ನು ತಿಂದ ಬಳಿಕ 30 ನಿಮಿಷಗಳ ಕಾಲ ಏನು ತಿಂದರೂ ಅದು ಸಿಹಿಯಾಗಿಯೇ ಇರುತ್ತದೆ. ಕಹಿ, ಹುಳಿ ತಿಂದರೂ ಕೂಡ ಅದು ಸಿಹಿಯಾಗಿರುತ್ತದೆ. ಯಾಕಿರಬಹುದು.?

ಈ ಹಣ್ಣಿನಲ್ಲಿ ಗ್ಲೈಕೊಪ್ರೊಟೀನ್ ಎಂಬ ಅಣುವಿದೆ (A molecule called a glycoprotein). ಈ ಹಣ್ಣನ್ನು ತಿಂದಾಗ ಈ ಅಣು ನಾಲಿಗೆಯ ರುಚಿ ಮೊಗ್ಗುಗಳಿಗೆ ಅಂಟಿಕೊಳ್ಳುತ್ತದೆ (sticks to). ಹೀಗಾಗಿ ಜನರು ಹುಳಿ ಅಥವಾ ಖಾರ ತಿಂದರೂ ಅದು ಸಿಹಿ ರುಚಿಯೇ ಎನ್ನಿಸುವುದು. ಅರ್ಧ ಘಂಟೆಯ ನಂತರ ಅಣು ಹೋಗಿ ಬಿಡುತ್ತದೆ.

ಈ ಸ್ವೀಟ್ ಹಣ್ಣನ್ನು ಹಲವಾರು ಔಷಧಗಳಲ್ಲಿ ಉಪಯೋಗ ಮಾಡಲಾಗುತ್ತದೆ. ನೈಜೀರಿಯಾದಲ್ಲಿ ಅಸ್ತಮಾ ಮತ್ತು ಮಧುಮೇಹದಂತಹ (Asthma and diabetes) ಕಾಯಿಲೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ಪುರುಷ ದುರ್ಬಲತೆ ಮತ್ತು ಕ್ಯಾನ್ಸರ್ ಚಿಕಿತ್ಸೆ ನೀಡಲು ಬಳಕೆ ಮಾಡಲಾಗುತ್ತದೆ ಎಂದು ವರದಿಯಿಂದ ತಿಳಿದು ಬಂದಿದೆ.

ಪಶ್ಚಿಮ ಆಫ್ರಿಕಾದಲ್ಲಿ ಬೆಳೆಯುವ ಈ ಹಣ್ಣಿನ ಕುರಿತು ಅನೇಕರಿಗೆ ಗೊತ್ತಿಲ್ಲ. 18ನೇ ಶತಮಾನದವರೆಗೆ ಇದನ್ನು ಅಲ್ಲಿನ ಜನರಷ್ಟೆ ಸೇವಿಸುತ್ತಿದ್ದರು. ಆ ಬಳಿಕ ಈ ಹಣ್ಣನ್ನು ಯುರೋಪಿಯನ್ ಚೆವಲಿಯರ್ ಜಗತ್ತಿಗೆ ಪರಿಚಯಿಸಿದರು ಎಂದು ವರದಿ ತಿಳಿಸಿದೆ.

ಈ ಹಣ್ಣಿನ ಒಳಗೆ ಒಂದೇ ಬೀಜವಿದ್ದು (A single seed), ಅದನ್ನು ಅಮೆರಿಕನ್ನರು 1980ರಿಂದ ಬಳಕೆ ಮಾಡಲು ಪ್ರಾರಂಭಿಸಿದರು. ಪ್ರಚಾರದ ಕೊರತೆಯಿಂದಾಗಿ, ಇದನ್ನು ಕೆಲವೇ ದೇಶಗಳಲ್ಲಿ ಬೆಳೆಸಲಾಗುತ್ತಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹಳಿತಪ್ಪಿದ ಇಸ್ಲಾಮಾಬಾದ್ ಎಕ್ಸ್‌ಪ್ರೆಸ್‌ನ 10 ಭೋಗಿಗಳು: 30 ಮಂದಿಗೆ ಗಾಯ, ಮೂವರು ಗಂಭೀರಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಎನ್‌ಕೌಂಟರ್‌ಗೆ ಓರ್ವ ಉಗ್ರ ಬಲಿದೂರಿನ ಮಾಹಿತಿ ಪಡೆಯಲು ಮನೆಗೆ ಬಂದ ಪೊಲೀಸ್ ಸಿಬ್ಬಂದಿ ಎದುರು ಸೀರೆ ಬಿಚ್ಚಿಕೊಂಡು ಹುಚ್ಚಾಟ ಮೆರೆದ ಮಹಿಳೆಭಾರತ ಇನ್ಮುಂದೆ ರಷ್ಯಾದಿಂದ ಕಚ್ಚಾ ತೈಲ ಖರೀದಿಸಲ್ಲ, ಇದು ಒಳ್ಳೆಯ ಹೆಜ್ಜೆ ಎಂದ ಡೊನಾಲ್ಡ್ ಟ್ರಂಪ್ನಟಿ ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಮೂವರು ಪೊಲೀಸರ ವಶಕ್ಕೆರೈತರಿಗೆ ಗುಡ್ ನ್ಯೂಸ್, ಪಿಎಂ ಕಿಸಾನ್ 20ನೇ ಕಂತಿನ ಹಣ ಇಂದು ಬಿಡುಗಡೆಮಾಡೆಲಿಂಗ್‌ ಲೋಕ ಬಿಟ್ಟು ಯುಪಿಎಸ್‌ಸಿ ಪರೀಕ್ಷೆ ಪಾಸ್‌ ಆಗಿ ಅಧಿಕಾರಿಯಾದ ಕಥೆದಿನದ ಮಂಡಕ್ಕಿ ಒಗ್ಗರಣೆ – ಮಿರ್ಚಿ.! 02-08-2025..!ವಚನ: -ಆಯ್ದಕ್ಕಿ ಮಾರಯ್ಯ .!ದೇಶಾದ್ಯಂತ 10,277 ಬ್ಯಾಂಕಿಂಗ್ ವಲಯದಲ್ಲಿ ಹುದ್ದೆಗಳ ಭರ್ತಿಗೆ ನೇಮಕಾತಿ, ಡಿಗ್ರಿ ಆದವರು ಅರ್ಜಿ ಸಲ್ಲಿಸಿ