ಬೇಕಾಗುವ ಸಾಮಗ್ರಿಗಳು:
ಮೊಸರು- ಒಂದು ಕಪ್
ಸಕ್ಕರೆ- ಒಂದೂವರೆ ಕಪ್
ಎಣ್ಣೆ-ಅರ್ಧ ಕಪ್
ಮೈದಾ- ಒಂದು ಕಪ್
ವೆನಿಲ್ಲಾ ಸಾರ- ಒಂದು ಚಮಚ
ಅಡುಗೆ ಸೋಡ- ಒಂದು ಚಿಟಿಕೆ
ಬೇಕಿಂಗ್ ಪೌಡರ್- ಒಂದು ಚಮಚ
ನೀರು- ಅರ್ಧ ಕಪ್
ಟೂಟಿ ಫ್ರೂಟಿ- ಅರ್ಧ ಕಪ್
ಉಪ್ಪು- 1 ಚಿಟಿಕೆ
ತಯಾರಿಸುವ ವಿಧಾನ:
- ಮೊದಲನೆಯದಾಗಿ ಟೂಟಿ ಫ್ರೂಟಿಯನ್ನು ತೆಗೆದುಕೊಂಡು ಅದಕ್ಕೆ 1 ಟೀ ಚಮಚದಷ್ಟು ಮೈದಾ ಹಾಕಿ ಮಿಶ್ರಣ ಮಾಡಿಟ್ಟುಕೊಳ್ಳಿ.
- ನಂತರ ಒಂದು ಪಾತ್ರೆಯಲ್ಲಿ ಮೊಸರು, ಸಕ್ಕರೆ, ಎಣ್ಣೆ ಮತ್ತು ವೆನಿಲ್ಲಾ ಸಾರಗಳನ್ನು ತೆಗೆದುಕೊಳ್ಳಿ. ನಂತರ ಅದನ್ನು ವಿಸ್ಕ್ ಸಹಾಯದಿಂದ ಚೆನ್ನಾಗಿ ಮಿಶ್ರಣ ಮಾಡಿ.
- ಚೆನ್ನಾಗಿ ಮಿಶ್ರಣ ಮಾಡಿದ ನಂತರ ಇದಕ್ಕೆ ಮೈದಾ ಹಿಟ್ಟನ್ನು ಜರಡಿ ಹಿಡಿದು ಹಾಕಿ. ಜೊತೆಗೆ ಅಡುಗೆ ಸೋಡಾ, ಬೇಕಿಂಗ್ ಪೌಡರ್, ಚಿಟಿಕೆ ಉಪ್ಪು ಹಾಕಿ ಗಂಟು ಬಾರದಂತೆ ಚೆನ್ನಾಗಿ ಕಲಸಿ.
- ಈ ಮಿಶ್ರಣ ದಪ್ಪಗಿದ್ದರೆ ನೀರು ಸೇರಿಸಬಹುದು, ಇದಕ್ಕೆ ವೆನಿಲ್ಲಾ ಸಾರವನ್ನು ಹಾಕಿ ಕಲಸಿ.
- ಬಳಿಕ ಟೂಟಿ ಫ್ರೂಟಿಯನ್ನು ಹಾಕಿ ಮಿಕ್ಸ್ ಮಾಡಿ.
- ಈಗ ಕೇಕ್ ಅಚ್ಚಿಗೆ ಎಣ್ಣೆ ಸವರಿ. ಟ್ರೇಯ ಕೆಳಭಾಗಕ್ಕೆ ಬಟರ್ ಕಾಗದ (ಬಟರ್ ಪೇಪರ್) ಹಾಕಿ. ನಂತರ ಹಿಟ್ಟನ್ನು ಅದಕ್ಕೆ ಸುರಿಯಿರಿ.
- ಟ್ರೇಯನ್ನು ಎರಡು ಬಾರಿ ತಟ್ಟಿ. ಮೇಲೆ ಬೇಕಿದ್ದರೆ ಸ್ವಲ್ಪ ಟೂಟಿ ಫ್ರೂಟಿ ಹಾಕಬಹುದು.
- ಈಗ ಕೇಕ್ ಟ್ರೇಯನ್ನು ಮೊದಲೇ ಬಿಸಿಯಾಗಿರಿಸಿದ ಓವನ್‌ನಲ್ಲಿ ಇರಿಸಿ. ಇದನ್ನು 180 ಡಿಗ್ರಿ ಸೆಲ್ಸಿಯಸ್‌ನಲ್ಲಿ 30 ರಿಂದ 40 ನಿಮಿಷಗಳ ಕಾಲ ಬೇಯಿಸಿ.
- ನಂತರ ಕೇಕ್ ಅನ್ನು ಸಂಪೂರ್ಣವಾಗಿ ತಣ್ಣಗಾಗಲು ಬಿಟ್ಟು ಒಂದು ತಟ್ಟೆಯಲ್ಲಿ ಅಲಂಕರಿಸಿದರೆ ರುಚಿಕರವಾದ ಟೂಟಿ ಫ್ರೂಟಿ ಕೇಕ್ ಸವಿಯಲು ಸಿದ್ಧ