Press ID & Credential Portal
Apply / Verify  ➔
LIVE TV LocalCrimeNationalInternationalPoliticsFinancialEducationTechnologyEntertainmentSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ಯಶಸ್ವಿಯಾಗಿ ನಭಕ್ಕೆ ಚಿಮ್ಮಿದ ‘ವಿಕ್ರಮ–1’

ಹೊಸದಿಲ್ಲಿ, ಜುಲೈ 18: ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಹೈದರಾಬಾದ್ ಮೂಲದ ಖಾಸಗಿ ಬಾಹ್ಯಾಕಾಶ ಸಂಸ್ಥೆ ಸ್ಕೈರೂಟ್ ಏರೋಸ್ಪೇಸ್ ಅಭಿವೃದ್ಧಿಪಡಿಸಿರುವ ‘ವಿಕ್ರಮ–1’ ರಾಕೆಟ್ ಶನಿವಾರ ಶ್ರೀಹರಿಕೋಟಾದ ಸತೀಶ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡ್ಡಯನಗೊಂಡಿದೆ. ಇದುವರೆಗೆ ಇಸ್ರೋ ನೇತೃತ್ವದಲ್ಲಿ ಮಾತ್ರ ಕಕ್ಷೀಯ ರಾಕೆಟ್ ಉಡಾವಣೆ ನಡೆದಿದ್ದರೆ, ಇದೀಗ ಭಾರತದಲ್ಲಿ ಖಾಸಗಿ ಸಂಸ್ಥೆಯೊಂದು ಮೊದಲ ಬಾರಿಗೆ ಕಕ್ಷೀಯ ರಾಕೆಟ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ದೇಶದ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಆರಂಭಿಸಿದೆ.

'ಮಿಷನ್ ಆಗಮನ' ಹೆಸರಿನ ಈ ಉಡಾವಣೆ ಮಧ್ಯಾಹ್ನ ಸುಮಾರು 12.05ಕ್ಕೆ ನೆರವೇರಿತು. 22 ಮೀಟರ್ ಎತ್ತರದ ನಾಲ್ಕು ಹಂತಗಳ ವಿಕ್ರಮ್–1 ರಾಕೆಟ್ ನಭಕ್ಕೆ ಚಿಮ್ಮಿದ ಕೆಲವೇ ನಿಮಿಷಗಳಲ್ಲಿ ನಿಗದಿತ ಪಥವನ್ನು ಯಶಸ್ವಿಯಾಗಿ ತಲುಪಿ, ಸುಮಾರು 15 ನಿಮಿಷಗಳ ಬಳಿಕ ತನ್ನ ಪೇಲೋಡ್‌ಗಳನ್ನು 450 ಕಿಲೋಮೀಟರ್ ಎತ್ತರದ ಕೆಳ ಭೂಕಕ್ಷೆಗೆ ಯಶಸ್ವಿಯಾಗಿ ಸೇರಿಸಿತು.

350 ಕೆ.ಜಿ.ವರೆಗೆ ತೂಕದ ಸಣ್ಣ ಉಪಗ್ರಹಗಳನ್ನು ಕೆಳ ಭೂಕಕ್ಷೆಗೆ ಕೊಂಡೊಯ್ಯುವ ಸಾಮರ್ಥ್ಯ ಹೊಂದಿರುವ ವಿಕ್ರಮ್–1, ಸಂಪೂರ್ಣ ಕಾರ್ಬನ್ ಕಾಂಪೋಸಿಟ್ ರಚನೆ, ಘನ ಇಂಧನ ಬೂಸ್ಟರ್‌ಗಳು ಹಾಗೂ ಭಾರತದಲ್ಲೇ ಅಭಿವೃದ್ಧಿಪಡಿಸಲಾದ ತ್ರಿ-ಆಯಾಮ (3ಡಿ) ಮುದ್ರಿತ ದ್ರವ ಇಂಧನ ಎಂಜಿನ್‌ಗಳನ್ನು ಹೊಂದಿರುವುದು ಇದರ ವಿಶೇಷತೆ. ಈ ಉಡಾವಣೆಯ ಮೂಲಕ ರಾಕೆಟ್‌ನ ಮಾರ್ಗದರ್ಶನ, ನ್ಯಾವಿಗೇಷನ್, ಪ್ರೊಪಲ್ಷನ್ ಹಾಗೂ ನಿಯಂತ್ರಣ ವ್ಯವಸ್ಥೆಗಳ ಕಾರ್ಯಕ್ಷಮತೆಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ.

ಈ ಪ್ರಾಯೋಗಿಕ ಹಾರಾಟದಲ್ಲಿ ಹಲವು ದೇಶೀಯ ಮತ್ತು ವಿದೇಶಿ ಸಂಸ್ಥೆಗಳ ತಂತ್ರಜ್ಞಾನ ಪ್ರದರ್ಶನ ಪೇಲೋಡ್‌ಗಳನ್ನು ಕಕ್ಷೆಗೆ ಕೊಂಡೊಯ್ಯಲಾಗಿದೆ. ಸ್ಕೈರೂಟ್‌ನ ಸ್ಕೋಪ್, ಗ್ರಹಾ ಸ್ಪೇಸ್‌ನ ಸೋಲಾರಸ್ ಎಸ್–3, ಡಿಕ್ಯೂಬ್ಡ್‌ನ ತಂತ್ರಜ್ಞಾನ ಪ್ರದರ್ಶನ ಸಾಧನ ಹಾಗೂ ಬಾಹ್ಯಾಕಾಶದಲ್ಲಿನ ತ್ಯಾಜ್ಯವನ್ನು ಸೆರೆಹಿಡಿಯುವ ಉದ್ದೇಶದ ಎಂಬ್ರೇಸ್ ರೋಬೋಟಿಕ್ ವ್ಯವಸ್ಥೆ ಸೇರಿದಂತೆ ಹಲವು ಪೇಲೋಡ್‌ಗಳು ಇದರಲ್ಲಿವೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರ "ವಂದೇ ಮಾತರಂ" ಎಂಬ ಕೈಬರಹದ ಪೋಸ್ಟ್‌ಕಾರ್ಡ್, ವಿಜ್ಞಾನಿಗಳ ಸಂದೇಶಗಳು, 'ಕಾಸ್ಮಿಕ್ ಬ್ಲೂಮ್' ಕಲಾಕೃತಿ ಹಾಗೂ ಭಾರತದ ಬಾಹ್ಯಾಕಾಶ ವಿಜ್ಞಾನಿಗಳ ಸ್ಮರಣಾರ್ಥ ಚಿನ್ನದ ಸೂಕ್ಷ್ಮ ರಾಕೆಟ್ ಮಾದರಿಯನ್ನೂ ಇದು ಹೊತ್ತೊಯ್ದಿದೆ.

ಉಡಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ, ವಿಕ್ರಮ್–1 ಭಾರತದ ಬಾಹ್ಯಾಕಾಶ ಪಯಣದಲ್ಲಿ ಐತಿಹಾಸಿಕ ಮೈಲುಗಲ್ಲಾಗಿದ್ದು, ದೇಶದ ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಹೊಸ ದಿಕ್ಕು ತೋರಿಸಲಿದೆ ಎಂದು ಶುಭ ಹಾರೈಸಿದ್ದರು. ಈ ಸಾಧನೆ ಭಾರತದ ಯುವ ಪ್ರತಿಭೆ, ತಂತ್ರಜ್ಞಾನ ಮತ್ತು ನವೋದ್ಯಮದ ಶಕ್ತಿಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದ್ದರು.

2018ರಲ್ಲಿ ಮಾಜಿ ಇಸ್ರೋ ವಿಜ್ಞಾನಿಗಳಾದ ಪವನ್ ಚಂದನಾ ಮತ್ತು ನಾಗ ಭರತ್ ಡಾಕಾ ಸ್ಥಾಪಿಸಿದ್ದ ಸ್ಕೈರೂಟ್ ಏರೋಸ್ಪೇಸ್, 2022ರಲ್ಲಿ ವಿಕ್ರಮ–ಎಸ್ ಉಪಕಕ್ಷೀಯ ರಾಕೆಟ್ ಉಡಾವಣೆ ಮೂಲಕ ದೇಶದ ಮೊದಲ ಖಾಸಗಿ ರಾಕೆಟ್ ಉಡಾವಣೆ ಸಂಸ್ಥೆಯಾಗಿ ಗುರುತಿಸಿಕೊಂಡಿತ್ತು. ಇದೀಗ ವಿಕ್ರಮ್–1 ಯಶಸ್ಸಿನೊಂದಿಗೆ ಭಾರತ, ಖಾಸಗಿ ಸಂಸ್ಥೆಯ ಮೂಲಕ ಕಕ್ಷೀಯ ರಾಕೆಟ್ ಉಡಾವಣೆ ನಡೆಸಿದ ವಿಶ್ವದ ಕೆಲವೇ ರಾಷ್ಟ್ರಗಳ ಸಾಲಿಗೆ ಸೇರ್ಪಡೆಯಾಗಿದೆ. ಮುಂದಿನ ದಿನಗಳಲ್ಲಿ ವಾಣಿಜ್ಯ ಉಪಗ್ರಹ ಉಡಾವಣೆ ಸೇವೆ ಆರಂಭಿಸುವ ಗುರಿಯನ್ನು ಸಂಸ್ಥೆ ಹೊಂದಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಿಸೆಂಬರ್ 7ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಸಾಧ್ಯತೆಎಂಎಸ್‌ಪಿ ಆಧರಿಸಿ ಕಬ್ಬಿಗೆ ದರ: ಡಿ.ಕೆ. ಶಿವಕುಮಾರಮತದಾರರ ಅಂತಿಮ ಪಟ್ಟಿಯಲ್ಲಿ ನಿಮ್ಮ ಹೆಸರು ಪರಿಶೀಲಿಸಿಚುನಾವಣಾ ಆಯೋಗದ ಸಮರ್ಥನೆಗೆ ಆಕ್ಷೇಪಣೆ ಸಲ್ಲಿಸಲು 10 ದಿನ ಕಾಲಾವಕಾಶಸಚಿವ ಜಿ. ಪರಮೇಶ್ವರ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು‘ಬಟ್ಟೆ ಹರಿದು ರಕ್ತಸ್ರಾವವಾಗಿತ್ತು’: ಟ್ರಂಪ್ ವಿರುದ್ಧ ಮಾಜಿ ಮಿಸ್ ಸ್ವಿಟ್ಜರ್ಲ್ಯಾಂಡ ಅತ್ಯಾಚಾರ ಆರೋಪ!ಮತದಾರರ ಪಟ್ಟಿಯಿಂದ 1 ಕೋಟಿ ಹೆಸರು ಡಿಲೀಟ್!ಕಬ್ಬಿನ ದರ ನಿಗದಿ ಸಭೆಯಲ್ಲಿ ರೈತ ಮುಖಂಡರ ಮಾರಾಮಾರಿ: ಸುವರ್ಣಸೌಧದಲ್ಲೇ ಕೈಕೈ ಮಿಲಾಯಿಸಿದ ಎರಡು ಬಣಗಳು!ಕನ್ನಡಿಗರಿಗೆ ಉದ್ಯೋಗ ನಿರಾಕರಿಸಿದರೆ ಖಾಸಗಿ ಸಂಸ್ಥೆಗಳ ವಿರುದ್ಧ ಕ್ರಮ: ಡಿ.ಕೆ. ಶಿವಕುಮಾರಜಲವಿದ್ಯುತ್ ಯೋಜನೆ ವಿರೋಧಿಸಿ ಅರುಣಾಚಲದಲ್ಲಿ ಹಿಂಸಾಚಾರ: ಭದ್ರತಾ ಪಡೆಯ ಎರಡು ತುಕಡಿ ರವಾನೆ