Press ID & Credential Portal
Apply / Verify  ➔
LIVE TV LocalCrimeNationalInternationalPoliticsFinancialEducationTechnologyEntertainmentSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ನಾನಾ ಪಾಟೇಕರ ಅವರ ಕೊನೆಯ 3 ಗಂಟೆಗಳಲ್ಲಿ ನಡೆದಿದ್ದೇನು?

ರಾತ್ರಿ 2.30ಕ್ಕೆ ಸ್ನೇಹಿತನಿಗೆ ಸಂದೇಶ, ಬೆಳಗ್ಗೆ 5.20ಕ್ಕೆ ಕೊನೆಯುಸಿರು!

ಪಣಜಿ, ಅ. 8: ಖ್ಯಾತ ನಟ ನಾನಾ ಪಾಟೇಕರ (75) ಗುರುವಾರ ಮುಂಜಾನೆ ಗೋವಾದ ಡೋನಾ ಪೌಲಾದಲ್ಲಿರುವ ತಮ್ಮ ನಿವಾಸದಲ್ಲಿ ತೀವ್ರ ಹೃದಯ ಸ್ತಂಭನಕ್ಕೆ ಒಳಗಾಗಿ ನಿಧನರಾದರು. ಅವರ ಸಾವಿಗೂ ಮುನ್ನ ನಡೆದ ಸುಮಾರು ಮೂರು ಗಂಟೆಗಳ ಘಟನೆಗಳ ಕುರಿತು ಮಣಿಪಾಲ ಆಸ್ಪತ್ರೆಯ ವೈದ್ಯ ಡಾ. ಶೇಖರ ಸಾಲ್ಕರ್ ಮಹತ್ವದ ಮಾಹಿತಿ ನೀಡಿದ್ದಾರೆ.

ರಾತ್ರಿ 2.30ರಿಂದ ಬೆಳಗ್ಗೆ 5.20ರವರೆಗೆ ನಡೆದ ಘಟನೆಗಳು

ರಾತ್ರಿ 2.30: ನಾನಾ ಪಾಟೇಕರ ಅವರಿಗೆ ಎದೆಯ ಎಡಭಾಗದಲ್ಲಿ ನೋವು ಕಾಣಿಸಿಕೊಂಡಿತ್ತು. ತೀವ್ರ ಅಸ್ವಸ್ಥತೆ ಅನುಭವಿಸಿದ ಅವರು ತಮ್ಮ ಸ್ನೇಹಿತನಿಗೆ ಆರೋಗ್ಯ ಸರಿಯಿಲ್ಲ ಎಂದು ಸಂದೇಶ ಕಳುಹಿಸಿದ್ದರು. ಆದರೆ ರಾತ್ರಿ ಸಮಯವಾಗಿದ್ದರಿಂದ ಸ್ನೇಹಿತ ಸಂದೇಶವನ್ನು ತಕ್ಷಣ ಗಮನಿಸಿರಲಿಲ್ಲ.

ಬೆಳಗ್ಗೆ ಸುಮಾರು 4 ಗಂಟೆ: ಸಂದೇಶ ಗಮನಿಸಿದ ಸ್ನೇಹಿತ ಪಾಟೇಕರ ಅವರ ನಿವಾಸಕ್ಕೆ ಧಾವಿಸಿದರು. ಆ ವೇಳೆಗೆ ಪಾಟೇಕರ ತೀವ್ರವಾಗಿ ಬೆವರುತ್ತಿದ್ದು, ಪ್ರಜ್ಞೆ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದರು ಎಂದು ಕೆಲವು ವರದಿಗಳು ತಿಳಿಸಿವೆ. ಬಳಿಕ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ನೆಲದ ಮೇಲೆ ಬಿದ್ದಿರುವುದು ಕಂಡುಬಂದಿತು.

ಬೆಳಗ್ಗೆ 4.18–4.20: ಪಾಟೇಕರ ಅವರ ಆರೈಕೆದಾರ ಮಣಿಪಾಲ ಆಸ್ಪತ್ರೆಯನ್ನು ಸಂಪರ್ಕಿಸಿ ತುರ್ತು ವೈದ್ಯಕೀಯ ನೆರವು ಕೋರಿದರು. ಆಸ್ಪತ್ರೆಯಿಂದ ಆಂಬುಲೆನ್ಸ್ ಮತ್ತು ವೈದ್ಯಕೀಯ ಸಿಬ್ಬಂದಿ ಅವರ ನಿವಾಸಕ್ಕೆ ತೆರಳಿದರು.

ಬೆಳಗ್ಗೆ ಸುಮಾರು 4.30: ವೈದ್ಯಕೀಯ ಸಿಬ್ಬಂದಿ ತಲುಪುವಷ್ಟರಲ್ಲಿ ಪಾಟೇಕರ ಪ್ರಜ್ಞಾಹೀನರಾಗಿದ್ದು, ಯಾವುದೇ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಸಿಬ್ಬಂದಿ ತಕ್ಷಣ ಸಿಪಿಆರ್‌ ಪ್ರಾರಂಭಿಸಿದರು. ಆಸ್ಪತ್ರೆಗೆ ಸಾಗಿಸುವಾಗಲೂ ಹೃದಯದ ಕಾರ್ಯಚಟುವಟಿಕೆ ಮರುಸ್ಥಾಪಿಸಲು ಪ್ರಯತ್ನ ಮುಂದುವರಿಯಿತು.

ಬೆಳಗ್ಗೆ 4.30ರ ನಂತರ: ಪಾಟೇಕರ ಅವರನ್ನು ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಯಿತು. ಆಸ್ಪತ್ರೆಯಲ್ಲಿಯೂ ವೈದ್ಯರು ಸುಮಾರು 45 ನಿಮಿಷಗಳ ಕಾಲ ಸಿಪಿಆರ್‌ ಸೇರಿದಂತೆ ತುರ್ತು ಚಿಕಿತ್ಸೆಯನ್ನು ಮುಂದುವರಿಸಿದರು. ಆದರೆ ಅವರ ದೇಹ ಚಿಕಿತ್ಸೆಗೆ ಸ್ಪಂದಿಸಲಿಲ್ಲ.

ಬೆಳಗ್ಗೆ 5.20: ಎಲ್ಲ ಪ್ರಯತ್ನಗಳ ಹೊರತಾಗಿಯೂ ಪಾಟೇಕರ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ. ವೈದ್ಯರು ಅಧಿಕೃತವಾಗಿ ಅವರ ಸಾವನ್ನು ಘೋಷಿಸಿದರು.

ವೈದ್ಯರು ಬಹಿರಂಗಪಡಿಸಿದ ಮಹತ್ವದ ಮಾಹಿತಿ

ಮಣಿಪಾಲ ಆಸ್ಪತ್ರೆಯ ಆಂಕೊಲಜಿ ವಿಭಾಗದ ಮುಖ್ಯಸ್ಥ ಡಾ. ಶೇಖರ ಸಾಲ್ಕರ್ ಅವರ ಪ್ರಕಾರ, ಪಾಟೇಕರ ಅವರಿಗೆ ಈ ಹಿಂದೆಯೇ ಹೃದಯ ಸಂಬಂಧಿ ಸಮಸ್ಯೆಗಳಿದ್ದು, ಔಷಧಿ ಸೇವಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಆಸ್ಪತ್ರೆಗೆ ಕರೆತರುವ ವೇಳೆಗೆ ಅವರು ಮೃತಪಟ್ಟ ಸ್ಥಿತಿಯಲ್ಲಿದ್ದರು ಎಂದು ವೈದ್ಯರು ತಿಳಿಸಿದ್ದಾರೆ. ಆದರೂ ಅವರನ್ನು ಬದುಕಿಸಲು ವೈದ್ಯಕೀಯ ತಂಡ ನಿರಂತರ ಪ್ರಯತ್ನ ನಡೆಸಿತ್ತು.

ಅವರ ಸಾವಿನ ನಿಖರ ಕಾರಣವನ್ನು ಮರಣೋತ್ತರ ಪರೀಕ್ಷೆಯ ಮೂಲಕ ಖಚಿತಪಡಿಸಿಕೊಳ್ಳಬೇಕಿದೆ. ಪ್ರಕರಣವನ್ನು ವೈದ್ಯಕೀಯ-ಕಾನೂನು ಪ್ರಕರಣವಾಗಿ ದಾಖಲಿಸಲಾಗಿದ್ದು, ಮೃತದೇಹವನ್ನು ಗೋವಾ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಿಸೆಂಬರ್ 7ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಸಾಧ್ಯತೆಎಂಎಸ್‌ಪಿ ಆಧರಿಸಿ ಕಬ್ಬಿಗೆ ದರ: ಡಿ.ಕೆ. ಶಿವಕುಮಾರಮತದಾರರ ಅಂತಿಮ ಪಟ್ಟಿಯಲ್ಲಿ ನಿಮ್ಮ ಹೆಸರು ಪರಿಶೀಲಿಸಿಚುನಾವಣಾ ಆಯೋಗದ ಸಮರ್ಥನೆಗೆ ಆಕ್ಷೇಪಣೆ ಸಲ್ಲಿಸಲು 10 ದಿನ ಕಾಲಾವಕಾಶಸಚಿವ ಜಿ. ಪರಮೇಶ್ವರ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು‘ಬಟ್ಟೆ ಹರಿದು ರಕ್ತಸ್ರಾವವಾಗಿತ್ತು’: ಟ್ರಂಪ್ ವಿರುದ್ಧ ಮಾಜಿ ಮಿಸ್ ಸ್ವಿಟ್ಜರ್ಲ್ಯಾಂಡ ಅತ್ಯಾಚಾರ ಆರೋಪ!ಮತದಾರರ ಪಟ್ಟಿಯಿಂದ 1 ಕೋಟಿ ಹೆಸರು ಡಿಲೀಟ್!ಕಬ್ಬಿನ ದರ ನಿಗದಿ ಸಭೆಯಲ್ಲಿ ರೈತ ಮುಖಂಡರ ಮಾರಾಮಾರಿ: ಸುವರ್ಣಸೌಧದಲ್ಲೇ ಕೈಕೈ ಮಿಲಾಯಿಸಿದ ಎರಡು ಬಣಗಳು!ಕನ್ನಡಿಗರಿಗೆ ಉದ್ಯೋಗ ನಿರಾಕರಿಸಿದರೆ ಖಾಸಗಿ ಸಂಸ್ಥೆಗಳ ವಿರುದ್ಧ ಕ್ರಮ: ಡಿ.ಕೆ. ಶಿವಕುಮಾರಜಲವಿದ್ಯುತ್ ಯೋಜನೆ ವಿರೋಧಿಸಿ ಅರುಣಾಚಲದಲ್ಲಿ ಹಿಂಸಾಚಾರ: ಭದ್ರತಾ ಪಡೆಯ ಎರಡು ತುಕಡಿ ರವಾನೆ