ಸಾಯಂಕಾಲ 7 ಗಂಟೆ 30 ನಿಮಿಷಗಳ ಸಮಯ. ಅದು ಒಂದು ದೊಡ್ಡ ಹಳ್ಳಿ, ಗ್ರಾಮ ಪಂಚಾಯತಿ ಕೇಂದ್ರ ಸ್ಥಾನ. ಸಾಮಾನ್ಯವಾಗಿ ಉತ್ತರ ಕರ್ನಾಟಕದ ಜನ ತಮ್ಮ ತ್ಯಾಜ್ಯವನ್ನು ನಿಸರ್ಗಕ್ಕೆ ಸಮರ್ಪಿಸುತ್ತಾರೆ. ಅಂದರೆ, ಬಯಲಿನಲ್ಲಿ ಸಾರ್ವಜನಿಕ ರಸ್ತೆಗಳ ಈಚೆ-ಆಚೆ ಬದಿಗಳಲ್ಲಿ ವಿಸರ್ಜನೆ ಮಾಡುತ್ತಾರೆ — ಅತ್ಯಂತ “ಗೌರವಾನ್ವಿತವಾಗಿ”! ದಾಖಲೆಗಳನ್ನು ಪರಿಶೀಲಿಸಿದಾಗ, ಒಂದೊಂದು ಕುಟುಂಬಕ್ಕೆ ನಾಲ್ಕೈದು ವೈಯಕ್ತಿಕ ಶೌಚಾಲಯಗಳು ಸರ್ಕಾರದಿಂದ ಮಂಜೂರಿಯಾಗಿರುವುದು ಕಂಡು ಬರುತ್ತದೆ. ಆದರೆ, ಅವುಗಳನ್ನು ಕೆಲವರು ಕೇವಲ ನಾಲ್ಕೈದು ಸಾವಿರ ರೂಪಾಯಿಗಳಲ್ಲಿ ಕಟ್ಟಿಸಿಕೊಂಡು ಉಳಿದ ಹಣವನ್ನು ಸಂಸಾರ ನಿರ್ವಹಣೆಗೆ ಬಳಸಿಕೊಂಡಿರುವುದು ಉಂಟು. ನೆಪ ಮಾತ್ರಕ್ಕೆ, ಸರ್ಕಾರಕ್ಕೆ ಫೋಟೋ ತೋರಿಸಲು ಕಟ್ಟಿಸಿಕೊಂಡ ಆ ಕಳಪೆ ಶೌಚಾಲಯಗಳನ್ನು ನಂತರ ಕೋಳಿ ಗೂಡು ಅಥವಾ ಸ್ಟೋರ್ ರೂಮ್‌ಗಳಾಗಿ ಬಳಸಿಕೊಳ್ಳುವುದು ಸಹ ಸಾಮಾನ್ಯವಾಗಿದೆ.
ಈ ಹಿನ್ನೆಲೆಯಲ್ಲಿ, ಸಂಜೆ 7:30ರ ಸುಮಾರಿಗೆ ಮಹಿಳೆಯರು ಸಾರ್ವಜನಿಕ ರಸ್ತೆಗಳ ಬದಿಯಲ್ಲಿ ಸಾಲು ಸಾಲಾಗಿ ಬಹಿರ್ದೆಶೆಗೆ ಬರುವುದು ಸಾಮಾನ್ಯ ದೃಶ್ಯ. ರಸ್ತೆಯ ಈ ಬದಿ, ಆ ಬದಿಯಲ್ಲಿ ಮಹಿಳೆಯರು ವಿಸರ್ಜನೆಗೆ ಕುಳಿತುಕೊಳ್ಳುವುದು, ಯಾರಾದರೂ ಪುರುಷರು ಆ ದಾರಿಯಲ್ಲಿ ಹಾದು ಹೋದರೆ, ಸಾಮೂಹಿಕವಾಗಿ ಎದ್ದು ನಿಲ್ಲುವುದು — ಇವು ಅಲ್ಲಿ ಕಂಡುಬರುವ ನಿತ್ಯದ ನೋಟಗಳು.
ಇದೇ ಸಮಯದಲ್ಲಿ, ಸುಮಾರು 24 ವರ್ಷ ವಯಸ್ಸಿನ ಮಹಿಳೆಯೊಬ್ಬಳು ಬಹಿರ್ದೆಶೆಗೆ ಬರುತ್ತಾಳೆ. ಅಲ್ಲಿ ಒಬ್ಬ ವ್ಯಕ್ತಿ ಹೊಂಚು ಹಾಕಿ ಕಾಯುತ್ತಿದ್ದಾನೆ. ಆಕೆ ಆ ಜಾಗಕ್ಕೆ ಬಂದ ತಕ್ಷಣ, ಆತ ಆಕೆಯ ಮೇಲೆ ದಾಳಿ ಮಾಡುತ್ತಾನೆ. “ನಿನ್ನನ್ನು ಬಿಡುವುದಿಲ್ಲ” ಎಂದು ಬೆದರಿಸಿ, ತನ್ನ ಕಿಸೆಯಿಂದ ಮೊಬೈಲ್ ತೆಗೆದು ಸ್ನೇಹಿತನಿಗೆ ಕರೆ ಮಾಡುತ್ತಾನೆ. ಸ್ವಲ್ಪ ಸಮಯದಲ್ಲಿ ಸ್ನೇಹಿತ ಅಲ್ಲಿಗೆ ಬರುತ್ತಾನೆ. ನಂತರ ಇಬ್ಬರೂ ಸೇರಿ ಆಕೆಯ ಮೇಲೆ ದೌರ್ಜನ್ಯ ನಡೆಸುತ್ತಾರೆ. ಮೊದಲು ಒಬ್ಬನು ಆಕೆಯ ಬಾಯಿಯನ್ನು ಮುಚ್ಚಿ ಹಿಡಿಯುತ್ತಾನೆ, ಇನ್ನೊಬ್ಬನು ಲೈಂಗಿಕ ದೌರ್ಜನ್ಯ ಎಸಗುತ್ತಾನೆ. ನಂತರ ಪಾತ್ರಗಳು ಬದಲಾಗುತ್ತವೆ — ಮತ್ತೊಬ್ಬನು ಬಾಯಿ ಮುಚ್ಚಿ ಹಿಡಿದರೆ, ಮೊದಲವನು ದೌರ್ಜನ್ಯ ಎಸಗುತ್ತಾನೆ. ಕೃತ್ಯ ಮುಗಿದ ನಂತರ, “ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನು ಕೊಂದುಹಾಕುತ್ತೇವೆ” ಎಂದು ಜೀವ ಬೆದರಿಕೆ ಹಾಕಿ ಅಲ್ಲಿಂದ ಪರಾರಿಯಾಗುತ್ತಾರೆ.
ಈ ಘಟನೆ ರಾತ್ರಿ ಸುಮಾರು 11 ಗಂಟೆಗೆ ಯಾದಗಿರಿ ಮಹಿಳಾ ಠಾಣೆಯಲ್ಲಿ ಈ ರೀತಿಯಾಗಿ ದಾಖಲಾಗುತ್ತದೆ:
“ಡ್ಯಾಶ್ ಡ್ಯಾಶ್ ಹೆಸರಿನ ನಾನು, ಯಾದಗಿರಿ ತಾಲ್ಲೂಕಿನ ಬಂದಳ್ಳಿ ಗ್ರಾಮದವಳು, ಕೂಲಿ ಕೆಲಸ ಮಾಡುವವಳು. ನಾನು ವಿವಾಹಿತೆಯಾಗಿದ್ದು, ಕುಟುಂಬದೊಂದಿಗೆ ಜೀವನ ನಡೆಸುತ್ತಿದ್ದೇನೆ. ದಿನಾಂಕ 03-04-2026ರಂದು ರಾತ್ರಿ ನಾನು ಬಯಲು ಬಹಿರ್ದೆಶೆಗೆ ಹೋಗಿದ್ದಾಗ, ನಮ್ಮದೇ ಕುಲಸ್ಥನಾದ ಮತ್ತು ನಮ್ಮ ಮನೆಗೆ ಎದುರು ಮನೆಯವನಾದ ಬಸ್ಸಪ್ಪ (ತಂದೆ ನಿಂಗಪ್ಪ ಸಿದ್ದಣ್ಣನೋರ್) ನನ್ನ ಮೇಲೆ ದಾಳಿ ನಡೆಸಿದನು. ‘ಲೇ ರಂಡಿ ಸೂಳೆ, ನೀನು ನನ್ನ ಪ್ರೀತಿಗೆ ಅಡ್ಡವಾಗಿದ್ದೀಯಾ? ನಾನು ಮತ್ತು ಈರಮ್ಮ ಪ್ರೀತಿಸುತ್ತಿರುವ ವಿಷಯವನ್ನು ನಿಮ್ಮ ಮನೆಯಲ್ಲಿ ಏಕೆ ಹೇಳಿದ್ದೀಯಾ?’ ಎಂದು ಹೇಳಿ ನನ್ನ ಬಾಯಿಯನ್ನು ಬಲವಂತವಾಗಿ ಮುಚ್ಚಿ, ನನ್ನನ್ನು ಬಹಿರ್ದೆಶೆಗೆ ಹೋಗುವ ಜಾಗಕ್ಕೆ ಎಳೆದುಕೊಂಡು ಹೋದನು. ನಂತರ ರೆಡ್ಡೆಪ್ಪ (ತಂದೆ ಗುಂಜಲಪ್ಪ ಸಿದ್ದಣ್ಣನೋರ್) ಅವರಿಗೆ ಫೋನ್ ಮಾಡಿ ಕರೆಯಿಸಿಕೊಂಡನು.
ರೆಡ್ಡೆಪ್ಪ ಬಂದ ನಂತರ, ಇಬ್ಬರೂ ಸೇರಿಕೊಂಡು ‘ಇವತ್ತು ಈಕೆಯನ್ನು ಬಿಡಬಾರದು’ ಎಂದು ಹೇಳಿ ನನ್ನನ್ನು ನೆಲಕ್ಕೆ ಹಾಕಿದರು. ಮೊದಲು ರೆಡ್ಡೆಪ್ಪ ನನ್ನ ಬಾಯಿಯನ್ನು ಮುಚ್ಚಿ ಹಿಡಿದಿದ್ದಾಗ, ಬಸ್ಸಪ್ಪ ನನ್ನ ಮೇಲೆ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದನು ಹಾಗೂ ನನ್ನ ಎದೆಯ ಬಲಭಾಗದಲ್ಲಿ ಕಚ್ಚಿದನು. ನಂತರ ಬಸ್ಸಪ್ಪ ನನ್ನ ಬಾಯಿಯನ್ನು ಮುಚ್ಚಿ ಹಿಡಿದಿದ್ದಾಗ, ರೆಡ್ಡೆಪ್ಪ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದನು. ನಂತರ ‘ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನು ಜೀವಂತ ಬಿಡುವುದಿಲ್ಲ’ ಎಂದು ಬೆದರಿಸಿ ಅಲ್ಲಿಂದ ಓಡಿ ಹೋಗಿದ್ದಾರೆ. ಬಸ್ಸಪ್ಪ ನನ್ನ ನಾದಿನಿಯನ್ನು ಪ್ರೀತಿಸುತ್ತಿದ್ದ ವಿಷಯವನ್ನು ನಾನು ಮನೆಯಲ್ಲಿ ಹೇಳಿದ್ದರಿಂದ ನನ್ನ ಮೇಲೆ ದ್ವೇಷದಿಂದ ಈ ಕೃತ್ಯ ಎಸಗಿದ್ದಾರೆ. ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.” ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಈ ಘಟನೆ ಯಾದಗಿರಿ ಜಿಲ್ಲೆಯ ಯಾದಗಿರಿ ತಾಲ್ಲೂಕಿನ ಬಂದಳ್ಳಿ ಗ್ರಾಮದಲ್ಲಿ ನಡೆದಿದ್ದು, ಪ್ರೀತಿಯ ವಿಷಯದಲ್ಲಿ ಉಂಟಾದ ವೈಷಮ್ಯವೇ ಈ ಕೃತ್ಯಕ್ಕೆ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ. ಸದ್ಯ ಯಾದಗಿರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿ.ಎಸ್.ಐ ಮಂಜುಳ ಅವರು ತನಿಖೆ ಕೈಗೊಂಡಿದ್ದಾರೆ.
ರಾಜ್ಯದಲ್ಲಿ ಇತ್ತೀಚೆಗೆ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಜನರಲ್ಲಿ ಕಾನೂನು ಮತ್ತು ಶಿಕ್ಷೆಯ ಭಯ ಕಡಿಮೆಯಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ನಿಜಕ್ಕೂ ಅಲ್ಲಿ ಅತ್ಯಾಚಾರ ನಡೆದಿತೇ? ನಡೆದಿದ್ದರೆ ಆಕೆ ಕೂಗಲಿಲ್ಲವೇ? ಆ ಸಮಯದಲ್ಲಿ ಇನ್ನಿತರ ಮಹಿಳೆಯರು ಅಲ್ಲಿ ಏಕೆ ಇರಲಿಲ್ಲ? ಎಂಬ ಹಲವು ಪ್ರಶ್ನೆಗಳು ಉದ್ಭವಿಸುತ್ತಿದ್ದು, ಈ ಘಟನೆಯ ಸಂಪೂರ್ಣ ಸತ್ಯ ತನಿಖೆಯಿಂದಲೇ ಹೊರಬರಬೇಕಿದೆ.