LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಿಂದ ವಿಶ್ವ ಪರಿಸರ ದಿನಾಚರಣೆ

ಹಾಸನ (ಆಲೂರು) : ಪ್ರಕೃತಿ ಮಾನವನ ಅವಶ್ಯಕತೆಗಳನ್ನೆಲ್ಲಾ ಪೂರೈಸುತ್ತದೆ ಆದರೆ ದುರಾಸೆಗಳನ್ನಲ್ಲ ಎಂದು ರಾಷ್ಟçಪಿತ ಮಹಾತ್ಮ ಗಾಂಧೀಜಿಯವರೇ ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದ ದುರಾಸೆಗೊಳಗಾಗಿ ಪಕೃತಿ ವಿನಾಶ ಮಾಡದೇ ಪರಿಸರ ಕಾಳಜಿಯನ್ನು ನಾವೆಲ್ಲಾ ಸೇರಿ ಮಾಡಬೇಕಿದೆ, ಇದು ನಮ್ಮೆಲ್ಲರ ಹೊಣೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಸಹಾಯಕ ಆಯುಕ್ತ ಎಂ.ಬಾಲಕೃಷ್ಣ ಅಭಿಪ್ರಾಯಪಟ್ಟರು.

ಅವರು ಆಲೂರು ತಾಲ್ಲೂಕು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಆಲೂರು ಹಾಗೂ ಭೈರಾಪುರದ ಬೆಥಸ್ಥ ಶಿಕ್ಷಣ ಸಂಸ್ಥೆ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆಯಲ್ಲಿ ಮಾತನಾಡಿ ಗಿಡಗಳಿದ್ದರೆ, ಕಾಡು, ಕಾಡಿದ್ದರೆ ನಾಡು ಆದರೆ ನಮ್ಮ ನಮ್ಮ ಅಗತ್ಯಗಳಿಗೆ ಕಾಡುಗಳನ್ನು ಕಡಿದು ನಾಶಗೈದು ಪ್ರಕೃತಿ ಅಸಮಾನತೆಗೆ ನಾವೇ ಕಾರಣವಾಗಿ ವನ್ಯ ಜೀವಿಗಳನ್ನು ಅವಸಾನದಂಚಿಗೆ ತಂದು ನಿಲ್ಲಿಸಿದ್ದೇವೆ. ಹಳ್ಳಿ, ನಗರ, ರಾಜ್ಯ, ದೇಶ, ವಿದೇಶಗಳೆನ್ನದೇ ಪ್ರತಿಯೊಬ್ಬ ಪ್ರಜೆಯೂ ಸಹ ಪರಿಸರ ಕಾಳಜಿಯನ್ನು ಮೈಗೂಡಿಸಿಕೊಂಡು ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಅರಣ್ಯೀಕರಣಗೊಳಿಸಿ ಪ್ರಕೃತಿಯನ್ನು ಪ್ರಫುಲ್ಲಗೊಳಿಸಬೇಕಿದೆ ಎಂದರು.

ತಾಲ್ಲೂಕು ಕಾರ್ಯದರ್ಶಿ ಕೊಟ್ರೇಶ್ ಎಸ್.ಉಪ್ಪಾರ್ ಮಾತನಾಡಿ ಪರಿಸರ ದಿನಾಚರಣೆ ಕೇವಲ ಜೀನ್ ೫ ಅಥವಾ ಜೂನ್ ಮಾಹೆಗೆ ಸೀಮಿತವಾಗುವುದಲ್ಲ ವರ್ಷದುದ್ದಕ್ಕೂ ನಿರಂತರ ಪ್ರಕ್ರಿಯೆಯಾಗಬೇಕಿದೆ. ಜಗತ್ತಿನ ಸಕಲ ಜೀವಿಗಳ ಉಸಿರಾಗಿರೋ ಗಿಡಮರಗಳ ಪೋಷಣೆ ನಿತ್ಯ ನಿರಂತರವಾಗಬೇಕು. ಪ್ರಕೃತಿಯಲ್ಲಿನ ಆಹಾರ ಸರಪಳಿ ನಿಯಮಿತವಾಗಿ ಸಾಗಬೇಕಾದರೆ ಪರಿಸರ ಸಂರಕ್ಷಣೆಯ ತುರ್ತು ಬಹಳಷ್ಠಿದೆ. ಈಗಾಗಲೇ ಪ್ರಕೃತಿ ನಾಶಗೈದು ಅತಿಯಾದ ಉಷ್ಣತೆಯಲ್ಲಿ ಬೇಯುತ್ತಿದ್ದೇವೆ. ಇಡೀ ಭೂಮಿ ಬಿಸಿ ತಾಪವನ್ನು ಅನುಭವಿಸುತ್ತಿದೆ. ಎಷ್ಟೋ ಜೀವಜಂತುಗಳು ಭೂಮಿಯ ಅನಿಯಮಿತ ತಾಪಮಾನಕ್ಕೆ ತತ್ತರಿಸಿ ಜೀವನ್ಮರಣಗಳ ಮಧ್ಯೆ ಸಿಲುಕಿವೆ. ನಾವೆಲ್ಲಾ ಎಚ್ಚೆತ್ತುಕೊಂಡು ಪ್ರಕೃತಿ ರಕ್ಷಣೆಗೆ ತೊಡಗಿಸಿಕೊಳ್ಳಬೇಕಿದೆ ಎಂದರು.

ಈ ಸಂದರ್ಭದಲ್ಲಿ ಗೈಡ್ ಕ್ಯಾಪ್ಟನ್ ಪ್ರಿಯಾಂಕ, ಪ್ರದೀಪ್ ಗೌಡ, ಬೆಥಸ್ಥ ಶಾಲಾ ಮಕ್ಕಳು ಸೇರಿದಂತೆ ಹಲವರು ಹಾಜರಿದ್ದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಂಭೀರ ರಕ್ತಹೀನತೆಯಿಂದ ಬಳಲುತ್ತಿದ್ದ ಯುವಕನಿಗೆ ಸ್ಟೆಮ್ ಸೆಲ್ ದಾನ ಮಾಡಿ ಜೀವರಕ್ಷಕಿಯಾದ ಬೆಂಗಳೂರಿನ ಮಹಿಳೆಫೋರ್ಟಿಸ್ ಹೆಲ್ತ್ಕೇರ್ ನಿಂದ 4 ವಿಶೇಷ ಚಿಕಿತ್ಸಾಲಯ ಆರಂಭಬೆಂಗಳೂರಿನಲ್ಲಿ ಕಲಾಮಂದಿರದ 4ನೇ ಶೋರೂಂ ಆರಂಭ96 ರನ್ ಗಳಿಂದ ನ್ಯೂಜಿಲೆಂಡ್ ವಿರುದ್ಧ ಭಾರತ ಟಿ20 ವಿನ್ಫೋನ್ ಕದ್ದಾಲಿಕೆ; ಸಿಎಂ ಸಿದ್ದರಾಮಯ್ಯ ಸುಳ್ಳಿಗೆ ತಿರುಗೇಟು ಕೊಟ್ಟ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿನಗರದ ಐದು ವಿಭಾಗ, ವಿಧಾನಸಭೆ ಕ್ಷೇತ್ರಗಳ ಅಧ್ಯಕ್ಷರ ಸಭೆಯಲ್ಲಿ ಮತನಾಡಿದ ಜಿಬಿಎ ಅಧ್ಯಕ್ಷರುಬೇಸಿಗೆಯಲ್ಲಿ ನೀರಿನ ತೊಂದರೆ ಎದುರಾಗದಂತೆ ಮುಂಜಾಗ್ರತಾ ಕ್ರಮ ವಹಿಸಿ: ಎ ಸಿ ಎಸ್ ತುಷಾರ್ ಗಿರಿನಾಥ್ ಸೂಚನೆಜಲಮಂಡಳಿಯ ಪ್ರೋ-ರೇಟಾ - ಜೈನ್ ಇಂಟರ್‌ನ್ಯಾಷನಲ್ ಶಾಲೆಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್ಯುದ್ಧಪೀಡಿತ ದೇಶಗಳಿಂದ ಕನ್ನಡಿಗರು ಎಲ್ಲಾ ಭಾರತೀಯರು ಸುರಕ್ಷಿತವಾಗಿ ವಾಪಸ್ ಬರುತ್ತಾರೆನೂತನ ಪದಾಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ ಸಚಿವರು