LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

 ಕುಶಾಲ್ಸ್  ನ 100ನೇ ಮಳಿಗೆ ಉದ್ಘಾಟಿಸಿದ ಬಾಲಿವುಡ್ ನಟಿ ನುಸ್ರತ್ ಭರುಚಾ

 

ಬೆಂಗಳೂರು: ಭಾರತದ ಪ್ರಮುಖ ಫ್ಯಾಷನ್ ಮತ್ತು ಬೆಳ್ಳಿ ಆಭರಣ ಬ್ರಾಂಡ್ ಆಗಿರುವ ಕುಶಾಲ್ಸ್ ಫ್ಯಾಷನ್ ಜ್ಯುವೆಲರಿ ಭಾರತದಲ್ಲಿ 100 ಮಳಿಗೆಗಳನ್ನು ಹೊಂದುವ ಮೂಲಕ ಮಹತ್ತರ ಸಾಧನೆ ಮಾಡಿದೆ. ಸಂಸ್ಥೆಯ 100ನೇ ಮಳಿಗೆಯು ಬೆಂಗಳೂರಿನ ಕೋರಮಂಗಲದ ನೆಕ್ಸಸ್ ಮಾಲ್‌ ನಲ್ಲಿ ಆರಂಭಗೊಂಡಿದ್ದು, ಈ ಮಳಿಗೆಯನ್ನು ಬಾಲಿವುಡ್ ನಟಿ ನುಸ್ರತ್ ಭರುಚಾ ಅವರು ಉದ್ಘಾಟಿಸಿದರು.

ನಟಿ ನುಸ್ರತ್ ಭರುಚಾ ಮಾತನಾಡಿ, “ಕುಶಾಲ್ಸ್ ಫ್ಯಾಷನ್ ಜ್ಯುವೆಲರಿಯಲ್ಲಿ ಸಂಭ್ರಮಾಚರಣೆ ಮತ್ತು ದೈನಂದಿನ ಬಳಕೆ ಎಲ್ಲಕ್ಕೂ ಸೂಕ್ತವಾಗುವ ಆಭರಣಗಳಿವೆ. 100ನೇ ಮಳಿಗೆ ಉದ್ಘಾಟನೆಯ ಈ ಸಂದರ್ಭದಲ್ಲಿ ಈ ಸಂಸ್ಥೆಯ ಜೊತೆ ಇರುವುದು ನನಗೆ ಸಂತಸ ತಂದಿದೆ” ಎಂದರು. ಬೆಂಗಳೂರಿನಲ್ಲಿ ಇಂತಹ ವಿಶೇಷ ಮಳಿಗೆ ಆರಂಭ ಮಾಡಿರುವುದು ಙಗೆ ಅತಿಯಾದ ಸಂತೋಷದಾಯಕವಾಗಿದೆ. ಬೆಂಗಳೂರು ನಗರ ನನಗೆ ಇಷ್ಟ. ಸಂಸ್ಥೆಯ ಆಭರಣಗಳು ಸಾಕಸ್ಟು ವಿಶೇಷತೆಗಳಿಂದ ಕೂಡಿವೆ. ನನಗೂ ಆಭರಣದ ಮೇಲೆ ವ್ಯಾಮೋಹ ಇದೆ. ಅದರಲ್ಲೂ ಮಹಿಳೆಯರಿಗೆ ಹೇಳಿಮಾಡಿಸಿದಾಗಿದೆ ಎಂದರು.

ಕುಶಾಲ್ಸ್ ಫ್ಯಾಷನ್ ಜ್ಯುವೆಲರಿಯ ಸಹ-ಸಂಸ್ಥಾಪಕ ಮನೀಶ್ ಗುಲೇಚ್ಛಾ, “100 ಮಳಿಗೆ ಉದ್ಘಾಟನೆಗೊಳ್ಳುತ್ತಿರುವ ಈ ಸಂದರ್ಭವು ನಮಗೆ ಬಹಳ ಹೆಮ್ಮೆಯ ಕ್ಷಣವಾಗಿದೆ. 2006ರಲ್ಲಿ ಸಣ್ಣದಾಗಿ ಪ್ರಾರಂಭವಾದ ಈ ಸಂಸ್ಥೆ ಇವತ್ತು ಭಾರತದಾದ್ಯಂತ ಇರುವ ಆಧುನಿಕ ಭಾರತೀಯ ಮಹಿಳೆಯರ ಇಷ್ಟದ ಬ್ರಾಂಡ್ ಆಗಿ ಬೆಳೆದಿದೆ. ಈ ಸಾಧನೆಯು ನಮ್ಮ ಗ್ರಾಹಕರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸ ಮತ್ತು ನಮ್ಮ ತಂಡದ ಶ್ರದ್ಧೆಯಿಂದ ಮಾತ್ರ ಸಾಧ್ಯವಾಗಿದೆ. ನಾವು ಅಂಗಡಿಯಲ್ಲಾಗಲಿ ಅಥವಾ ಆನ್‌ ಲೈನ್‌ ನಲ್ಲಾಗಲಿ ಸೊಗಸಾದ ವಿನ್ಯಾಸಗಳುಳ್ಳ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ನೀಡಲು ಬದ್ಧರಾಗಿದ್ದೇವೆ” ಎಂದರು.

ಸುಮಾರು ಎರಡು ದಶಕದ ಪರಂಪರೆ ಹೊಂದಿರುವ ಕುಶಾಲ್ಸ್ ಫ್ಯಾಷನ್ ಜ್ಯುವೆಲರಿ ಈ ಆರ್ಥಿಕ ವರ್ಷದ ಅಂತ್ಯದ ವೇಳೆಗೆ 150 ಮಳಿಗೆಗಳನ್ನು ತೆರೆಯುವ ಗುರಿಯನ್ನು ಹೊಂದಿದೆ. ತನ್ನ ಉತ್ಪನ್ನಗಳನ್ನು ಹೆಚ್ಚು ಹೆಚ್ಚು ಜನರಿಗೆ ತಲುಪಿಸುವ ಉದ್ದೇಶದಿಂದ ಕಂಪನಿಯು ಹೊಸ ಸಂಗ್ರಹಗಳನ್ನು ಪರಿಚಯಿಸಲು ಯೋಜನೆ ರೂಪಿಸಿದೆ ಮತ್ತು ಪ್ಲೇಟಿಂಗ್ ತಂತ್ರಜ್ಞಾನದ ಮೂಲಕ ಉತ್ಪನ್ನದ ಗುಣಮಟ್ಟವನ್ನು ಹೆಚ್ಚಿಸುವ ಕಾರ್ಯಕ್ರಮ ಹಾಕಿಕೊಳಲಾಗಿದೆ. ವಿಶೇಷವಾಗಿ ತನ್ನ ಹೊಸ “ಎಲಿವೇಟೆಡ್ ಎವೆರಿಡೇ” ಶ್ರೇಣಿ ಮತ್ತಷ್ಟು ವಿಸ್ತಾರಗೊಳಿಸಲು ಯೋಜಿಸಿದೆ.

ಕುಶಾಲ್ಸ್ ಫ್ಯಾಷನ್ ಜ್ಯುವೆಲರಿ ಸಂಸ್ಥೆಯು ಮುಂದಿನ ಮೂರು ವರ್ಷಗಳಲ್ಲಿ ದೇಶಾದ್ಯಂತ 300 ಮಳಿಗೆಗಳನ್ನು ತಲುಪುವ ಗುರಿಯನ್ನು ಇಟ್ಟುಕೊಂಡಿದೆ. ದೇಶದ ಪ್ರತಿಯೊಂದು ಮೂಲೆಗೂ ಕೈಗೆಟುಕುವ ದರದ ಮತ್ತು ವಿಶಿಷ್ಟ ಫ್ಯಾಷನ್‌ ನ ಆಭರಣಗಳನ್ನು ತಲುಪಿಸುವ ಉದ್ದೇಶ ಹೊಂದಿದ.

ಗುಣಮಟ್ಟದ ಬ್ರಾಂಡ್ ಆಗಿ ಎಲ್ಲೆಡೆ ಹೆಸರು ಮಾಡಿದೆ

2006ರಲ್ಲಿ ಆರಂಭಗೊಂಡ ಕುಶಾಲ್ಸ್ ಫ್ಯಾಷನ್ ಜ್ಯುವೆಲರಿ 38 ನಗರಗಳಲ್ಲಿ 100 ಮಳಿಗೆಗಳನ್ನು ಹೊಂದಿದ್ದು, ದೇಶಾದ್ಯಂತ ಅತ್ಯುತ್ತಮ ಉಪಸ್ಥಿತಿಯನ್ನು ಹೊಂದಿದೆ. ಈ ಸಂಸ್ಥೆಯು ಸೊಗಸಾಗಿ ಮತ್ತು ಎಚ್ಚರಿಕೆಯಿಂದ ರೂಪಿಸಲಾದ 10,000ಕ್ಕೂ ಹೆಚ್ಚು ವಿನ್ಯಾಸಗಳನ್ನು ಒಳಗೊಂಡಿದ್ದು, ಇದರಲ್ಲಿ ಆಂಟಿಕ್, ಕುಂದನ್, ಜಿರ್ಕಾನ್, ಟೆಂಪಲ್ ಜ್ಯುವೆಲ್ಲರಿ ಮತ್ತು 92.5 ಬಿಐಎಸ್- ಹಾಲ್‌ಮಾರ್ಕ್ ಮಾಡಲಾದ ಸ್ಟರ್ಲಿಂಗ್ ಬೆಳ್ಳಿಯ ಆಭರಣಗಳು ಸೇರಿವೆ. ಈ ಉತ್ಪನ್ನಗಳು ಉತ್ತಮ ಮತ್ತು ಪ್ರೀಮಿಯಂ ಗುಣಮಟ್ಟಕ್ಕೆ ಹೆಸರುವಾಸಿಯಾಗಿವೆ. ಈ ಶ್ರೇಣಿಯಲ್ಲಿ ನೆಕ್ಲೇಸ್‌ ಗಳು, ಕಿವಿಯೋಲೆಗಳು, ಚೋಕರ್‌ ಗಳು, ಉಂಗುರಗಳು, ಕಂಕಣಗಳು, ಬ್ರೋಚ್‌ ಗಳು ಸೇರಿದಂತೆ ವಿವಿಧ ವಿಭಾಗಗಳ ಆಭರಣಗಳು ಸೇರಿವೆ. ಸಂಭ್ರಮಾಚರಣೆ, ವಿವಾಹ, ಕಚೇರಿ ಬಳಕೆ ಮತ್ತು ದೈನಂದಿನ ಬಳಕೆ ಹೀಗೆ ಎಲ್ಲಾ ಸಂದರ್ಭದಲ್ಲಿ ಬಳಸಬಲ್ಲ ಉತ್ಪನ್ನಗಳು ಇಲ್ಲಿ ಲಭ್ಯವಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆಉಡಾನ್' ಯೋಜನೆ ಮೂಲಕ ಭಾರತದ ಭವಿಷ್ಯದ ವೈದ್ಯಕೀಯ ಕಾರ್ಯಪಡೆಯನ್ನು ನಿರ್ಮಿಸುವ ಬದ್ಧತೆಯನ್ನು ಸಾರಿದ ನಾರಾಯಣ ಹೆಲ್ತ್ಮೆಟ್ರೋ ಟಿಕೆಟ್ ದರ: ಕೇಂದ್ರದತ್ತ ಬೊಟ್ಟು ಮಾಡಿದ ರಾಜ್ಯ ಸರ್ಕಾರಕ್ಕೆ ದಾಖಲೆ ಸಮೇತ ಟಾಂಗ್ ಕೊಟ್ಟ ನಿಖಿಲ್ಬಿಜೆಪಿ ಜಾಹೀರಾತಿನ ವಿರುದ್ಧ ಎಎಪಿ ದೂರುಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ, 20 ವರ್ಷ ಕಳೆದರೂ ರೈತರಿಗೆ ಸಿಗತ ಪರಿಹಾರಕಾಂಗ್ರೆಸ್ ಪಕ್ಷ ಪಾರ್ಕಿಂಗ್ ವಿಚಾರದಲ್ಲಿ ಅಂದಾ ದರ್ಬಾರ್ ಮಾಡಲು ಹೊರಟಿದೆ