LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಕೋಚಿಂಗ್ ಇಲ್ಲದೆ IPS ಅಧಿಕಾರಿಯಾದ ಇಂಜಿನಿಯರ್ ಅಂಶಿಕಾ ವರ್ಮಾ

ಉತ್ತರಪ್ರದೇಶ : ಕೆಲವು ವ್ಯಕ್ತಿಗಳೇ ಹಾಗೆ ಮತ್ತಷ್ಟು ಅದೇನನ್ನೋ ಸಾಧಿಸುವ ಹಂಬಲ. ತಮ್ಮ ಅಧ್ಯಯನ ಕ್ಷೇತ್ರದ ಹೊರತಾಗಿ ಮತ್ಯಾವುದೋ ವಲಯದೆಡೆಗೆ ಮನಸ್ಸು ಹಾತೊರೆಯುತ್ತದೆ. ಇದೇ ರೀತಿ ಓರ್ವ ಇಂಜಿನಿಯರ್ ಯುಪಿಎಸ್‌ಸಿ ಪಾಸ್ ಮಾಡಿದ ಬಗೆಗಿನ ಸ್ಪೂರ್ತಿದಾಯಕ ಕಥಾನಕ ಇಲ್ಲಿದೆ.

ಯಾವುದೇ ಕೋಚಿಂಗ್ ಇಲ್ಲದೆ ಯುಪಿಎಸ್‌ಸಿ ಪರೀಕ್ಷೆ ತೇರ್ಗಡೆಯಾದ ಇಂಜಿನಿಯರ್ ಅಂಶಿಕಾ ವರ್ಮಾ ಅವರು ಉತ್ತರ ಪ್ರದೇಶದ ಪ್ರಯಾಗ್ರಾಜ್ ಮೂಲದವರು. ಅಂಶಿಕಾ ವರ್ಮಾ ತನ್ನ ಪ್ರಾಥಮಿಕ ಶಿಕ್ಷಣವನ್ನು ನೋಯ್ಡಾದಲ್ಲಿ ಪೂರ್ಣಗೊಳಿಸಿದರು.

ನಂತರ ಅವರು ನೋಯ್ಡಾದ ಗಲ್ಗೋಟಿಯಾ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಪದವಿಯನ್ನು ಪಡೆದರು. 2018 ರಲ್ಲಿ ಪದವಿ ಪಡೆದು, ನಂತರ ಸಿವಿಲ್ ಸರ್ವೀಸಸ್ ಪರೀಕ್ಷೆಯತ್ತ ತನ್ನ ಚಿತ್ತ ನೆಟ್ಟರು.

ಅಂಶಿಕಾ 2019 ರಲ್ಲಿ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಆರಂಭಿಸಿದರು. ಯಾವುದೇ ತರಬೇತಿ ಇಲ್ಲದೆ ಪ್ರಯಾಗರಾಜ್‌ನಲ್ಲಿ ಸ್ವಯಂ-ಅಧ್ಯಯನಕ್ಕೆ ತನ್ನ ಸಮಯವನ್ನು ಮೀಸಲಿಟ್ಟರು. ದೃಢಸಂಕಲ್ಪ ಮತ್ತು ಪರಿಶ್ರಮದಿಂದ 2020 ರಲ್ಲಿ ತನ್ನ ಎರಡನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಅನ್ನು ಭೇದಿಸಿದ ಅಂಶಿಕಾ, 136 ನೇ ರ‍್ಯಾಂಕ್ ಪಡೆದರು.

ಅಂಶಿಕಾ ತಂದೆ ಉತ್ತರ ಪ್ರದೇಶ ಎಲೆಕ್ಟ್ರಿಸಿಟಿ ಕಾರ್ಪೊರೇಷನ್ ಲಿಮಿಟೆಡ್‌ನ (ಯುಪಿಇಎಲ್) ನಿವೃತ್ತ ಉದ್ಯೋಗಿಯಾಗಿದ್ದರು. ತಾಯಿ ಗೃಹಣಿಯಾಗಿದ್ದರು. ತನ್ನ ಯಶಸ್ಸಿಗೆ ಹೆತ್ತವರು ಕೂಡಾ ಕಾರಣ ಎಂಬುವುದಾಗಿ ಅಂಶಿಕಾ ಹೇಳುತ್ತಾರೆ.

ಅವರ ವೃತ್ತಿಪರ ಸಾಧನೆಗಳ ಜೊತೆಗೆ, ಅಂಶಿಕಾ ಅವರು ಸಾಮಾಜಿಕ ಮಾಧ್ಯಮದ ತಾರೆಯಾಗಿದ್ದಾರೆ,ಇನ್ಸ್ಟ್ರಾಗ್ರಾಂನಲ್ಲಿ ಸುಮಾರು 257,000 ಫಾಲೋವರ್ಸ್‌ನ್ನು ಹೊಂದಿದ್ದಾರೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಈ ಊರಲ್ಲಿ ಮದುವೆಗೂ ಮುನ್ನವೇ ಸೋಬನವಂತೆ: ಈ ಸ್ಥಳ ಇರೋದು ಎಲ್ಲಿ?ವಿಕಲಚೇತನರಿಗಾಗಿ ರಾಜ್ಯದಲ್ಲಿ ಮೂರು ಪ್ರಮುಖ ಯೋಜನೆ ಜಾರಿ..!'ಒಂದೇ ಚುನಾವಣೆಯಿಂದ ಕಡಿಮೆ ಖರ್ಚು, ಅಭಿವೃದ್ಧಿಗೆ ಹೆಚ್ಚು ಹಣ'- ಅಣ್ಣಾಮಲೈ'ವಿವಿ ಮುಚ್ಚುವ ಬಗ್ಗೆ ತೀರ್ಮಾನ ಆಗಿಲ್ಲ- ಉಪ ಸಮಿತಿ ವರದಿ ಬರುವ ಮೊದಲೇ ಬಿಜೆಪಿಗೆ ಆತಂಕ ಏಕೆ'-ಸಿಎಂ ಪ್ರಶ್ನೆಮಂಗಳೂರಿನಲ್ಲಿ ಎದೆ ಝಲ್‌ ಎನಿಸುವ ಅಪಘಾತ: ಡಿಕ್ಕಿಯ ಬಿರುಸಿಗೆ ಕಾಂಪೌಂಡ್‌ನ ಬೇಲಿಯಲ್ಲಿ ಸಿಲುಕಿ ನೇತಾಡಿದ ಮಹಿಳೆಅತ್ತೆ ಮಾವನ ಮೇಲೆ ಹಲ್ಲೆ ಮಾಡಿದ ದಂತ ವೈದ್ಯೆ ….!ಮಂಗಳೂರು : 1ತಿಂಗಳ ಹಿಂದೆ ನಾಪತ್ತೆಯಾಗಿದ್ದ ಪ್ಯಾರಾಮೆಡಿಕಲ್ ವಿದ್ಯಾರ್ಥಿ ಪತ್ತೆ..!ಬೈಕ್‌ನಲ್ಲಿ ಬೆನ್ನಟ್ಟಿ ಗುಂಡಿಕ್ಕಿ ಶಿವಸೇನಾ ನಾಯಕನ ಹತ್ಯೆKSRTC ಲಾಸ್ ಎಷ್ಟು ಗೊತ್ತೆ ?ಬೇಸಿಗೆಯ ರಭಸಕ್ಕೆ ಹೈಕೋರ್ಟ್ ತೀರ್ಮಾನ: ಮಾರ್ಚ್ 15ರಿಂದ ಮೇ 31ರವರೆಗೆ ವಕೀಲರಿಗೆ ಕಪ್ಪು ಕೋಟ್‌ ವಿನಾಯಿತಿ