LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಚನ್ನಪಟ್ಟಣ ಉಪ ಚುನಾವಣೆ ಗೆ ನಾನೇ ಅಭ್ಯರ್ಥಿ: ಡಿಕೆ ಶಿವಕುಮಾರ್

ಚೆನ್ನಪಟ್ಟಣ: ಚೆನ್ನಪಟ್ಟಣ ಚುನಾವಣಾ ಕಣ ಮತ್ತಷ್ಟು ರಂಗೇರುತ್ತಿದೆ. ಇತ್ತೀಚೆಗೆ ಚೆನ್ನಪಟ್ಟಣ ಅಲ್ಲಿನ ಹಾಲಿ ಶಾಸಕ ಹೆಚ್.ಡಿ.ಕೆ ಕುಟುಂಬದ ಪಾಲಾಗುವುದು ಎಂಬ ವದಂತಿ ಕೇಳಿ ಬಂದಿತ್ತು. ಇದೀಗ ಚೆನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿಎಂದು ಹೇಳುವ ಮೂಲಕ ಡಿಸಿಎಂ ಡಿಕೆಶಿ ರಾಜ್ಯದ ಜನತೆಗೆ ಶಾಕಿಂಗ್ ಸುದ್ದಿ ಕೊಟ್ಟಿದ್ದಾರೆ.ನೆಲಮಂಗಲದ ವೀರಭದ್ರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಡಿಸಿಎಂ ಡಿಕೆಶಿ ದೇವ ರ ಕೃಪೆಗೆ ನಾನು ಪಾತ್ರನಾಗಿದ್ದೇನೆ. ಈ ದೇಗುಲಕ್ಕೆ ಬರಬೇಕೆಂದು ಬಹಳ ದಿನಗಳಿಂದ ಅಂದುಕೊಂಡಿದ್ದೆ . ಇಂದು ಬಂದಿದ್ದೇನೆ , ದೇಶದ ರಾಜ್ಯದ ಒಳಿತಿಗಾಗಿ ಪ್ರಾರ್ಥಿಸುತ್ತೇನೆ ಎಂದರು.

ಜೊತೆಗೆ ಗ್ಯಾರಂಟಿ ವಿಚಾರವಾಗಿಯೂ ಚರ್ಚಿಸಿ, ತದನಂತರ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ವಿಚಾರವಾಗಿ ಮಾತನಾಡಿ, ‘ನಾನು ರಾಮನಗರದಲ್ಲೂ 5 ವರ್ಷ ಧ್ವಜಾರೋಹಣ ಮಾಡಿದ್ದೇನೆ , ಅಧಿಕಾರಿಗಳನ್ನ ಕೇಳಿದ್ದೆ, ಅವರು ಬಂದಿಲ್ಲ ಎಂದು ಹೇಳಿ ನಂತರ, ಚನ್ನಪಟ್ಟಣ ಉಪ ಚುನಾವಣೆಗೆ ನಾನೇ ಅಭ್ಯರ್ಥಿ ಎಂಬುವುದಾಗಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST