LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

 ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ರಾಜ್ಯ ಸದಸ್ಯರಾಗಿ ಮೋಹನ್ ಕುಮಾರ್ ದಾನಪ್ಪ ನೇಮಕ

ಬೆಂಗಳೂರು: 12 ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ನಾಗರೀಕ ಸಮಾಜದ ರಾಜ್ಯ ಸದಸ್ಯರಾಗಿ ಮೋಹನ್ ಕುಮಾರ್ ದಾನಪ್ಪರವರನ್ನ ರಾಜ್ಯಪಾಲರ ಆದೇಶಾನುಸಾರ ನೇಮಕ ಮಾಡಿ ಕರ್ನಾಟಕ ಸರ್ಕಾರದ ಗೃಹ ಇಲಾಖೆಯು ಅಧಿಕೃತ ಆದೇಶ ಹೊರಡಿಸಿದೆ.


ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಪೊಲೀಸ್ ಇಲಾಖೆಯ ಎಲ್ಲಾ ಶ್ರೇಣಿಯ ಅಧಿಕಾರಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿನ ಲಾಕಪ್ ಡೆತ್. ಅಕ್ರಮ ಬಂಧನ ಪ್ರಕರಣ, ಗಂಭೀರ ಗಾಯ, ಠಾಣೆಗೆ ಕರೆದು ಹಿಂಸೆ ನೀಡಿದರೆ, ಹಣ ಅಥವಾ ವಸ್ತುಗಾಗಿ ಬೇಡಿಕೆ. ಪೊಲೀಸರು ಬೆದರಿಕೆಯನ್ನು ಒಡ್ಡಿದರೆ. ಕಿರುಕುಳ, ಭೂಕಬಳಿಕೆ. ಅಧಿಕಾರ ದುರುಪಯೋಗ ಕರ್ತವ್ಯ ಲೋಪ ಅಥವಾ ನಿರ್ಲಕ್ಷ್ಯ ಸೇರಿದಂತೆ ಪೊಲೀಸರ ಗಂಭೀರ ದುರ್ನಡತೆ ಪ್ರಕರಣಗಳನ್ನು ವಿಚಾರಣೆ ನಡೆಸಿ ಅಗತ್ಯ ಕ್ರಮ ಜರುಗಿಸುವುದು ಪ್ರಾಧಿಕಾರದ ಕಾರ್ಯವಾಗಿರುತ್ತದೆ.


ಮೂಲತಃ ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲ್ಲೂಕಿನ ಕಂಪ್ಲಿ ಪಟ್ಟಣದ ನಿವಾಸಿ ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಎ.ಸಿ.ದಾನಪ್ಪನವರ ಪುತ್ರರಾದ ಮೋಹನಕುಮಾ‌ರ್ ದಾನಪ್ಪನವರು ಸದ್ಯ ಬೆಂಗಳೂರಿನ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಕೇಂದ್ರ ಸರ್ಕಾರದ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದು


ಬೆಂಗಳೂರಿನಲ್ಲಿ ವಕೀಲ ವೃತ್ತಿ ಆರಂಭಿಸುವ ಮುನ್ನ ಇವರು ಹೊಸಪೇಟೆ, ಕೊಪ್ಪಳ ಜಿಲ್ಲೆಗಳಲ್ಲಿ ವಕೀಲ ವೃತ್ತಿ ಮಾಡುತ್ತಿರುವುದರ ಜೊತೆಗೆ ಹಲವಾರು ಸಂಘಟನೆಗಳೊಂದಿಗೆ ಅದರಲ್ಲೂ ವಿಶೇಷವಾಗಿ ಭಾರತೀಯ ದಲಿತ ಪ್ಯಾಂಥರ್ಸ್ ಸಂಘಟನೆಯಲ್ಲಿ ಗುರುತಿಸಿಕೊಂಡು ಆರೋಗ್ಯ, ಶೈಕ್ಷಣಿಕ, ಬಡತನಾ ನಿರ್ಮೂಲನೆಯಂತಹ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಹೋರಾಟಗಳು ಸೇರಿದಂತೆ ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು ಹಾಗೂ ಸರ್ಕಾರಿ ಸೇವೆಯಲ್ಲಿದ್ದರು.


ಸಾಮಾಜಿಕ ಸಮಸ್ಯೆಗಳ ಬಗ್ಗೆ ಜಾಗೃತಿಗಾಗಿ ರಾಷ್ಟ್ರಮಟ್ಟದಲ್ಲಿ ಮ್ಯಾರಥಾನ್ ಓಟ ಮಾಡುವ ಮೂಲಕ ಜಾಗೃತಿ ಮೂಡಿಸಿದ್ದು ಇವರ ಜಾಗೃತಿ ಕಾರ್ಯಗಳು ವಿಶ್ವದ ಹಲವಾರು ದಾಖಲೆ ಪುಸ್ತಕಗಳಲ್ಲಿ ಸೇರಿರುತ್ತದೆ, ಇವರ ಸಾಮಾಜಿಕ ಕಳಕಳಿಯನ್ನು ಪರಿಗಣಿಸಿ ಕೇಂದ್ರ ಸಚಿವರು, ರಾಜ್ಯಪಾಲರು, ಮುಖ್ಯಮಂತ್ರಿಗಳು, ರಾಜ್ಯ ಸಚಿವರು, ರಾಜ್ಯದ ಹಿರಿಯ ಅಧಿಕಾರಿಗಳು ಅಭಿನಂದಿಸಿರುತ್ತಾರೆ ಅಲ್ಲದೆ ಹಲವಾರು ಸಂಘ- ಸಂಸ್ಥೆಗಳು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ, ಇದೀಗ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ನಾಗರೀಕ ಸಮಾಜದ ರಾಜ್ಯ ಸದಸ್ಯರಾಗಿ ನೇಮಕವಾಗುವ ಮೂಲಕ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ, ಇವರನ್ನು ಜಿಲ್ಲೆಯ ಹಲವಾರು ಸಂಘ-ಸಂಸ್ಥೆಗಳು ಅಭಿನಂದಿಸಿವೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
KSRTC ಗೆ ಪ್ರತಿಷ್ಠಿತ ' world HRd ಕಾಂಗ್ರೆಸ್ ಪ್ರಶಸ್ತಿ-2026' ಗರಿಹಿಂದಿ ಭಾಷೆ ವಿಚಾರದಲ್ಲಿ ಬಿಜೆಪಿಯವರಿಂದ ಕಮೆಂಟಿಗೆ ವಿರೋಧಸುಧರ್ಮ ಸಾಂಸ್ಕೃತಿಕ ಸಂಘ ದಿಂದ ಮಹಿಳಾ ದಿನಾಚರಣೆಜೈನರಲ್ಲಿ ಶಿಕ್ಷಣದ ಕೊರತೆ ಹೆಚ್ಚಾಗಿದೆ : ಹಂಪಾ ನಾಗರಾಜಯ್ಯ ಬೇಸರವಿದ್ಯಾರ್ಥಿಗಳು SPRINTFEST 2026 ನಲ್ಲಿ ₹40 ಲಕ್ಷ ಸಂಗ್ರಹಿಸುವ ಗುರಿಸಂಧ್ಯಾ ಜನ ಸಂಸ್ಕೃತಿ ಟ್ರಸ್ಟ್ ನಿಂದ 8ನೇ ವರ್ಷದ ವಾರ್ಷಿಕೋತ್ಸವ ಮಹಿಳಾ ದಿನಾಚರಣೆ ಪ್ರಯುಕ್ತ ಮಾಜಿ ಪ್ರಧಾನಿ ಸ್ಮರಣೆಯಲ್ಲಿ ಇಂದಿರಾ ಕ್ರೀಡೋತ್ಸವ-2026ಆಸ್ತಿ ತೆರಿಗೆ ಬಾಕಿ: ಸುಸ್ತಿದಾರರ ಆಸ್ತಿಗಳನ್ನು ನಗರ ಪಾಲಿಕೆಯ ಹೆಸರಿಗೆ ಬದಲಾಯಿಸಿಕೊಳ್ಳಲು ಕ್ರಮಸ್ವಚ್ಛ ಸರ್ವೇಕ್ಷಣ 2025-26 ರ ವಿಶೇಷ: ಉದ್ಯಾನವನ ಆಟದ ಮೈದಾನ ಸ್ವಚ್ಛಜಿಬಿಎಯಿಂದ ಬೀದಿ ನಾಯಿಗಳ ದತ್ತು ಸ್ವೀಕಾರ ಕಾರ್ಯಕ್ರಮ ಯಶಸ್ವಿ